ಶಾರದೇಯ ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ 5ನೇ ಅವತಾರವಾದ ಸ್ಕಂದಮಾತಾ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ. ದುರ್ಗಾ ದೇವಿಯ ಈ ರೂಪ ಕಾರ್ತಿಕೇಯನ ತಾಯಿಯಾದ ಕಾರಣ ದೇವಿಯ ಈ ರೂಪಕ್ಕೆ ಸ್ಕಂದಮಾತೆ ಎಂಬ ಹೆಸರು ಬಂದಿದೆ. ತಾಯಿಯ ರೂಪದ ಬಗ್ಗೆ ವರ್ಣಿಸುವುದಾದರೆ, ಸ್ಕಂದ ದೇವನು ಸ್ಕಂದಮಾತೆಯ ಮಡಿಲಲ್ಲಿ ಕುಳಿತಿದ್ದಾನೆ. ತಾಯಿ ಸ್ಕಂದಮಾತೆ ಕಮಲದ ಆಸನದ ಮೇಲೆ ಕುಳಿತಿದ್ದಾಳೆ, ಆದ್ದರಿಂದ ಅವಳನ್ನು ಪದ್ಮಾಸನ ದೇವಿ ಎಂದೂ ಕರೆಯುತ್ತಾರೆ. ತಾಯಿ ಸ್ಕಂದಮಾತೆಯನ್ನು ಗೌರಿ, ಮಹೇಶ್ವರಿ, ಪಾರ್ವತಿ ಮತ್ತು ಉಮಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ತಾಯಿಯ ವಾಹನ ಸಿಂಹ.
ನವರಾತ್ರಿ 5ನೇ ದಿನ ಸ್ಕಂದಮಾತೆ ಪೂಜೆ ವಿಧಾನ:
ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುವುದರಿಂದ ಜನ್ಮ ಕುಂಡಲಿ ಅಥವಾ ಜಾತಕದಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗುವ ತೊಂದರೆಯನ್ನು ದೇವಿಯ ಆರಾಧನೆಯಿಂದ ನಿವಾರಿಸಿಕೊಳ್ಳಬಹುದು. ಶುದ್ಧ ಮನಸ್ಸು, ಭಕ್ತಿಯಿಂದ ಯಾರು ದೇವಿಯ ಆರಾಧನೆ ಮಾಡುತ್ತಾರೋ ಅವರಿಗೆ ಸಂಪತ್ತು ಹಾಗೂ ಸಮೃದ್ಧಿ ಪ್ರಾಪ್ತವಾಗುತ್ತದೆ. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ದೇವಿಯ ಆರಾಧನೆ ಮಾಡಬೇಕು.
ಸ್ಕಂದಮಾತೆಯ ಪೂಜೆಯ ಮಹತ್ವ:
ನೀವು ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಬಯಸಿದರೆ, ನೀವು ತಾಯಿಯ ಐದನೇ ರೂಪವನ್ನು ಅಂದರೆ ತಾಯಿ ಸ್ಕಂದಮಾತೆಯನ್ನು ನವರಾತ್ರಿ ಹಬ್ಬದ ಐದನೇ ದಿನದಂದು ವಿಶೇಷವಾಗಿ ಪೂಜಿಸಬೇಕು. ಸ್ಕಂದಮಾತೆ ದೇವಿಯನ್ನು ಮೋಕ್ಷ ನೀಡುವ ತಾಯಿಯೆಂದು ಹೇಳಲಾಗುತ್ತದೆ. ದೇವಿ ಸ್ಕಂದಮಾತೆಯನ್ನು ಸಂಪೂರ್ಣ ಭಕ್ತಿಯಿಂದ ಪೂಜಿಸುವವರಿಗೆ ಅವಳು ಸಂತೋಷ, ಸಮೃದ್ಧಿ ಮತ್ತು ಶಕ್ತಿಯನ್ನು ಅನುಗ್ರಹಿಸುತ್ತಾಳೆ. ಸಂತಾನ ಭಾಗ್ಯ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.
ಸ್ಕಂದಮಾತೆ ಮಂತ್ರ:
– ”ಯಾ ದೇವೀ ಸರ್ವಭೂತೇಷು ಮಾ ಸ್ಕಂದಮಾತಾ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||”