News Karnataka Kannada
Monday, April 29 2024
ವಿಶೇಷ

ಜುಲೈ 28: ಇಂದು ವಿಶ್ವ ಹೆಪಟೈಟಿಸ್ ದಿನ, ‘ಒಂದು ಜೀವನ, ಒಂದು ಯಕೃತ್ತು’

World Hepatitis Day
Photo Credit : Freepik

ಹೆಪಟೈಟಿಸ್ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ.ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ. ಬರೂಚ್ ಬ್ಲಂಬರ್ಗ್ ಅವರು ಹಪಟೈಟಿಸ್ ಬಿ ವೈರಸ್​​​ನ್ನು ಕಂಡು ಹಿಡಿದ ನಂತರ, ಇದರ ರೋಗ ನಿರ್ಣಯದ ಪರೀಕ್ಷೆ ಮತ್ತು ವೈರಸ್ ಚಿಕಿತ್ಸೆಗಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದರು.

ಡಾ. ಬ್ಲಂಬರ್ಗ್ ಅವರ ಆವಿಷ್ಕಾರದ ಗೌರವಾರ್ಥವಾಗಿ ಅವರ ಜನ್ಮದಿನವಾದ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ. ಮೊದಲ ಬಾರಿಗೆ 2008 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಹಪಟೈಟಿಸ್ ದಿನವನ್ನು ಆಚರಿಸಿತು. ‘ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಸಾಂಕ್ರಮಿಕ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವುದು’ ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.

ಹೆಪಟೈಟಿಸ್‌ ಎನ್ನುವುದು ಯಕೃತ್ತಿನ ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇವುಗಳು ಪ್ರಕಾರವನ್ನು ಅವಲಂಬಿಸಿ ಸೌಮ್ಯ ಹಾಗೂ ತೀವ್ರತರದ ರೋಗಲಕ್ಷಣಗಳನ್ನು ಇದು ಉಂಟು ಮಾಡಬಹುದು. ಇವುಗಳಲ್ಲಿ ಹೆಪಟೈಟಿಸ್‌ ಎ, ಬಿ, ಸಿ ಡಿ ಮತ್ತು ಇ ಎಂಬ ಐದು ವಿಧಗಳಿವೆ. ಈ ಎಲ್ಲವೂ ಭಿನ್ನವಾಗಿದ್ದು, ಭಿನ್ನವಾದ ರೋಗಲಕ್ಷಣಗಳನ್ನು ಹೊಂದಿವೆ ಮತ್ತು ಇದರಲ್ಲಿ ಕೆಲವು ಬಹಳ ಅಪಾಯಕಾರಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೆಪಟೈಟಿಸ್‌ ಬಿ ಮತ್ತು ಹೆಪಟೈಟಿಸ್‌ ಸಿ ದೀರ್ಘಕಾಲದ ಕಾಯಿಲೆಯಾಗಿದೆ. ಇವು ಶಾಶ್ವತ ಹಾನಿ ಮತ್ತು ಸಾವಿಗೆ ಕಾರಣವಾಗಬಹುದು.

ಹೆಪಟೈಟಿಸ್‌ನ ಸಾಮಾನ್ಯ ರೋಗ ಲಕ್ಷಣಗಳು

* ಸುಸ್ತು ಹಾಗೂ ಆಯಾಸ
* ವಾಕರಿಕೆ ಮತ್ತು ವಾಂತಿ
* ಹೊಟ್ಟೆಯ ಬಲಭಾಗದಲ್ಲಿ ನೋವು
* ಮಣ್ಣಿನ ಮಟ್ಟದ ಮಲ ವಿಸರ್ಜನೆ
* ಹಸಿವಾಗದಿರುವುದು
* ಜ್ವರ
* ಕಾಮಾಲೆ
* ದೇಹದಲ್ಲಿ ತುರಿಕೆ

ಮುನ್ನೆಚ್ಚರಿಕಾ ಕ್ರಮಗಳು
* ಒಬ್ಬರು ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸಬೇಡಿ. ಬಳಸಿದ ಸೂಜಿಯನ್ನು ಎಸೆಯಿರಿ.

* ನೋಂದಾಯಿತ ವೈದ್ಯರು ಹಾಗೂ ಆಸ್ಪತ್ರೆಯಿಂದ ಮಾತ್ರ ಚಿಕಿತ್ಸೆ ಪಡೆಯಿರಿ.

* ರಕ್ತ ವರ್ಗಾವಣೆಯ ಅಗತ್ಯವಿದ್ದಲ್ಲಿ ಯಾವಾಗಲೂ ನೋಂದಾಯಿತ ರಕ್ತ ನಿಧಿಯಿಂದ ರಕ್ತವನ್ನು ಪಡೆಯಬೇಕು.

* ಕ್ಷೌರ ಮಾಡಿಸಿಕೊಳ್ಳುವ ಮೊದಲು ಉಪಕರಣಗಳನ್ನು ಪರಿಶೀಲಿಸಿ. ಬ್ಲೇಡ್‌ನಂತಹ ಉಪಕರಣಗಳನ್ನು ಹೊಸದಾಗಿ ಬಳಸಲು ಹೇಳಿ.

* ನೋಂದಾಯಿತವಲ್ಲದ, ರಸ್ತೆ ಬದಿಯಲ್ಲಿ, ಜಾತ್ರೆಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವುದನ್ನು ತಪ್ಪಿಸಿ.

* ಸೋಂಕಿನ ಸಾಧ್ಯತೆಯನ್ನು ತಡೆಗಟ್ಟಲು ಹೆಪಟೈಟಿಸ್ ಬಿ ಲಸಿಕೆಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು.

* ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡಿ.

2023 ರಲ್ಲಿ ವಿಶ್ವ ಹೆಪಟೈಟಿಸ್ ದಿನನ ಥೀಮ್ ‘ಒಂದು ಜೀವನ, ಒಂದು ಯಕೃತ್ತು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು