News Karnataka Kannada
Monday, April 29 2024
ಬೆಂಗಳೂರು

ಬನ್ನೇರುಘಟ್ಟ ಬಿಗ್‌ ಕ್ಯಾಟ್‌ಗಳ ಆವಾಸಸ್ಥಾನ: ಪರಿಸರ ಪ್ರೇಮಿಗಳಿಗಿಲ್ಲಿದೆ ಖುಷಿ ವಿಚಾರ

Bannerghatta Big Cat's habitat: Here's what eco-lovers have a good idea
Photo Credit : News Kannada

ಬೆಂಗಳೂರು: ಬೆಂಗಳೂರು ವಾಸಿಗಳು ಮತ್ತು ಪರಿಸರ ಪ್ರೇಮಿಗಳು ಖುಷಿಪಡುವ ಸುದ್ದಿಯೊಂದು ಹೊರಬಂದಿದೆ. ಹುಲಿಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಕೈಗೊಂಡ ವಿವಿಧ ಉಪಕ್ರಮಗಳ ಫಲವಾಗಿ ವ್ಯಾಘ್ರಗಳ ಬನ್ನೇರುಘಟ್ಟ ಉದ್ಯಾನವನ ಆಸುಪಾಸಿನ ಪ್ರದೇಶಗಳಲ್ಲಿ 2 ಹುಲಿಗಳು ಕ್ಯಾಮೆರಾದಲ್ಲಿ ಸರೆಯಾಗಿದ್ದು, ವನ್ಯಪ್ರಾಣಿ ಪ್ರೇಮಿಗಳಿಗೆ ಖುಷಿ ತಂದಿದೆ. ಹುಲಿಗಣತಿಯಲ್ಲಿ ಈ ವಿಚಾರ ತಿಳಿದು ಬಂದಿದ್ದು, ಅರಣ್ಯ ಇಲಾಖೆಯ ವಿವಿಧ ಸಂರಕ್ಷಣಾ ಕ್ರಮಗಳಿಂದ ಹುಲಿಗಳ ಸಂಖ್ಯೆ ಏರಿಕೆಯಾಗಿದೆ ಎಂಬುದು ಖುಷಿಯ ವಿಚಾರ.

ಬನ್ನೇರುಘಟ್ಟ ವನ್ಯಜೀವಿ ವಿಭಾಗದಲ್ಲಿ 2015 ರಲ್ಲಿ ಬನ್ನೇರುಘಟ್ಟದ ಬಳಿ ಒಂಟಿ ಹುಲಿ ಕಂಡುಬಂದಿದ್ದು, ಬಳಿಕ ಯಾವುದೇ ಹುಲಿಗಳ ಗುರುತು ಪತ್ತೆಯಾಗಿರಲಿಲ್ಲ. ಮೀಸಲು ಪ್ರದೇಶದ ಹೊರಗೆ ಹುಲಿ ಕಾಣಿಸಿಕೊಂಡಿರುವುದಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. “ಬೆಂಗಳೂರಿನಂತಹ ಬೆಳೆಯುತ್ತಿರುವ ನಗರ ಮಹಾನಗರದ ಸಮೀಪವೇ ಹುಲಿಗಳು ಕಂಡು ಬಂದಿರುವುದು ಸಂತಸ ತಂದಿದೆ. ಬಹುಶಃ ಬೇರೆ ಯಾವುದೇ ರಾಜ್ಯದ ರಾಜಧಾನಿಯು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಹುಲಿಗಳು ಕಂಡುಬಂದ ದಾಖಲೆಗಳಿಲ್ಲ ಎಂದು ತಿಳಿಸಿದ್ದಾರೆ. ಇದು ಬನ್ನೇರುಘಟ್ಟ ಸುತ್ತಮುತ್ತ ಪ್ರದೇಶ ಹುಲಿಗಳ ವಾಸಕ್ಕೆ ಯೋಗ್ಯವಾಗಿದೆ ಎಂಬುದನ್ನು ದೃಢಗೊಳಿಸಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಹುಲಿಗಣತಿ ವರದಿ ಬಿಡುಗಡೆಗೊಳಿಸಿದ್ದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಪಶ್ಚಿಮ ಘಟ್ಟದ ಹೆಚ್ಚಿನ ಭಾಗ ಹೊಂದಿರುವ ಕರ್ನಾಟಕವು ಹುಲಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, 2021-22ರ ಅವಧಿಯಲ್ಲಿ ಹುಲಿ ಗಣತಿಯನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಡೆಸಿದ್ದು, ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹಾಗೂ ಕಾಳಿ ಕಾನನ ಸೇರಿದಂತೆ 37 ವನ್ಯಜೀವಿ ಧಾಮಗಳಲ್ಲಿ ಒಟ್ಟು 37 ವಿಭಾಗದಲ್ಲಿ ನಡೆಸಲಾಗಿದೆ.

ಈ ಗಣತಿಗೆ ಕ್ಯಾಮರಾ ಟ್ರ್ಯಾಪ್ ಮತ್ತು ಲೈನ್ ಟ್ರನ್ಸ್ಯಾಕ್ಟ್ ವಿಧಾನ ಬಳಸಲಾಗಿದೆ ಎಂದು ವಿವರಿಸಿದರು. ರಾಜ್ಯದ ಎಲ್ಲ ಸಂರಕ್ಷಿತ ಅರಣ್ಯಗಳಲ್ಲಿ ಅಳವಡಿಸಲಾಗಿದ್ದ 5399 ಕ್ಯಾಮರಾ ಟ್ರ್ಯಾಪ್ ನಲ್ಲಿ 66 ಲಕ್ಷಕ್ಕೂ ಹಚ್ಚು ವನ್ಯ ಜೀವಿಗಳ ಛಾಯಾಚಿತ್ರ ಕ್ರೋಡೀಕರಣವಾಗದ್ದು, ಆಧುನಿಕ ತಂತ್ರಜ್ಞಾನ ಬಳಸಿ ಹುಲಿಗಳ ಚಲನವಲನ, ಪ್ರಾದೇಶಿಕ ಪರಿಮಿತಿ ಹುಲಿಗಳ ಮೈಮೇಲಿನ ಪಟ್ಟೆಗಳ ಆಧಾರದ ಮೇಲೆ ಹುಲಿಗಳ ಸಂಖ್ಯೆಯನ್ನು ಲೆಕ್ಕಹಾಕಲಾಗಿದೆ ಎಂದು ವಿವರ ನೀಡಿದ್ದರು.

2018ರಲ್ಲಿ ನಡೆದಿದ್ದ ಅಖಿಲ ಭಾರತ ಹುಲಿ ಗಣತಿಯ ಪ್ರಕಾರ ಕರ್ನಾಟಕದಲ್ಲಿ ನಡೆದ ಕ್ಯಾಮರಾ ಟ್ರ್ಯಾಪ್ ನಲ್ಲಿ 404 ಹುಲಿಗಳು ಪತ್ತೆಯಾಗಿದ್ದವು ಇದನ್ನು ವನ್ಯಜೀವಿ ಸಂಖ್ಯಾಶಾಸ್ತ್ರದ ಪ್ರಕಾರ ವಿಶ್ಲೇಷಿಸಿದಾಗ ರಾಜ್ಯದಲ್ಲಿ 475 ರಿಂದ 573 ಹುಲಿಗಳು ಇರಬಹುದು ಎಂದು ವಿಶ್ಲೇಷಿಸಲಾಗಿತ್ತು. 2022 ರಲ್ಲಿ ರಾಜ್ಯದಲ್ಲಿ 435 ಹುಲಿಗಳು ಪತ್ತೆಯಾಗಿದ್ದು ಈ ಸಂಖ್ಯೆ ಇನ್ನೂ ಹೆಚ್ಚು ಆಗಬಹುದು ಎಂದು ವಿಶ್ಲೇಷಿಸಬಹುದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು