News Karnataka Kannada
Friday, May 03 2024
ವಿಶೇಷ

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಘಮಘಮಿಸಿದ ಉಡುಪಿ ಅಡುಗೆ

Udupi cooking at BJP parliamentary board meeting: Budnaru Subramanya Acharya's cooking praised
Photo Credit : News Kannada

ನವದೆಹಲಿ/ ಉಡುಪಿ: ಸೋಮವಾರ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಜಗತ್ಪ್ರಸಿದ್ಧ ಉಡುಪಿ ಅಡುಗೆಯ ರುಚಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಮಂತ್ರಿ ಅಮಿತ್ ಶಾ ಸೇರಿದಂತೆ ದೇಶಾದ್ಯಂತದಿಂದ ಆಗಮಿಸಿದ್ದ ಇನ್ನೂರಕ್ಕೂ ಅಧಿಕ ಗಣ್ಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗಾಗಿ ಲೋಕಪ್ರಸಿದ್ಧ ಉಡುಪಿ ಅಡುಗೆ ತಯಾರಿಸಬೇಕೆಂಬ ಮನವಿಯ ಮೇರೆಗೆ ಉಡುಪಿಯ ಪ್ರಸಿದ್ಧ ಬಾಣಸಿಗ ಬುಡ್ನಾರು ಸುಬ್ರಹ್ಮಣ್ಯ ಆಚಾರ್ಯರು ಭಾನವಾರ ರಾತ್ರಿ ನವದೆಹಲಿಗೆ ತೆರಳಿ ಸೋಮವಾರ ಅಡುಗೆ ತಯಾರಿಸಿದ್ದಾರೆ . ಭಾಗವಹಿಸಿದ್ದ ಎಲ್ಲರೂ ಉಡುಪಿಯ ಅಡುಗೆಯ ಸವಿಯುಂಡು ಬಾಯಿ ಚಪ್ಪರಿಸಿ ಬಹುತ್ ಅಚ್ಚಾ ಥಾ ಎಂದು ಸುಬ್ಬಣ್ಣ ( ಸುಬ್ರಹ್ಮಣ್ಯ ಆಚಾರ್ಯ) ನವರನ್ನು ಪ್ರಶಂಸಿದ್ದಾರೆ .

ಈ ಮೂಲಕ ರಾಜಧಾನಿಯಲ್ಲಿ ಅದೂ ಅಮಿತ್ ಶಾ ನಡ್ಡಾ ರಂಥ ಗಣ್ಯಾತಿಗಣ್ಯರಿಗೆ ಉಡುಪಿ ಅಡುಗೆಯ ಸವಿಯುಣಿಸಿದ ಅತೀವ ಸಂತಸದಲ್ಲಿದ್ದಾರೆ ಸುಬ್ಬಣ್ಣ.

ಪ್ರಧಾನಿ ಮೋದಿಯವರೂ ಈ ಸಭೆಯಲ್ಲಿ ಸಂಜೆ ಭಾಗವಹಿಸಿದ್ದರು. ಆದರೆ ಮಧ್ಯಾಹ್ನದ ಊಟಕ್ಕೆ ಬಂದಿರಲಿಲ್ಲ . ಜೆಪಿ ನಡ್ಡಾ ಅವರು ಅಡುಗೆಯ ರುಚಿ ಸವಿದು ಖುದ್ದು ಸುಬ್ಬಣ್ಣ ಅಡುಗೆ ಮಾಡುತ್ತಿದ್ದ ಸ್ಥಳಕ್ಕೆ ಬಂದು ಮಾತನಾಡಿಸಿ ಶಹಬ್ಬಾಸ್ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .

ಬಿಜೆಪಿ ರಾ.‌ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರೂ ಭೇಟಿಯಾಗಿ ಅಡುಗೆ ಬಹಳ ಬಹಳ ಚೆನ್ನಾಗಿತ್ತು ಅಂತ ಹೇಳಿದ್ದಾರೆ .

ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ ಸಾಂಬಾರ್ , ಚಟ್ನಿ ಮಧ್ಯಾಹ್ನದ ಊಟಕ್ಕೆ ಉಪ್ಪಿನಕಾಯಿ , ಹುರುಳಿ ಚಟ್ನಿ , ಕೋಸುಂಬರಿ ಎರಡು ಬಗೆ ಪಲ್ಯ , ಚಿತ್ರಾನ್ನ , ಅನ್ನ ಹಪ್ಪಳ ಸಂಡಿಗೆ , ಸಂಡಿಗೆ ಮೆಣಸು , ಸಾರು , ಗಟ್ಟಿಬಜೆ , ಪೂರಿ ಕೂರ್ಮ , ಮೆಣಸುಕಾಯಿ , ಮಟ್ಟುಗುಳ್ಳದ ಹುಳಿ , ಹಯಗ್ರೀವ ಮಡ್ಡಿ , ಖರ್ಜೂರ ಪಾಯಸ ಮೊಸರು ಮಜ್ಜಿಗೆ ತಯಾರಿಸಿದ್ದಾರೆ ಇತರೆ ಕೆಲವು ಸಿಹಿ ಭಕ್ಷ್ಯ ಗಳನ್ನು ಅಲ್ಲಿಯ ಸ್ಥಳೀಯರೇ ತಯಾರಿಸಿದ್ದಾರೆ .

ಕಾರ್ಯಕ್ರಮ ಮುಗಿಸಿ ಮಂಗಳವಾರ ಅಪರಾಹ್ನ ವಿಮಾನದ ಮೂಲಕ ಉಡುಪಿಗೆ ಮರಳಿದ ಸುಬ್ಬಣ್ಣ , ಗುರುಗಳಾದ ಶ್ರೀ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಕೃಪೆಯೇ ಇದಕ್ಕೆಲ್ಲ ಕಾರಣ ; ಅವರೇ ನಮಗೆ ಸ್ಫೂರ್ತಿ ಎಂದು ಭಾವುಕರಾಗಿ ನುಡಿದ್ದಾರೆ.

ಜಿ ವಾಸುದೇವ ಭಟ್ ಪೆರಂಪಳ್ಳಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು