ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾನಾ ಕಡೆಗಳಲ್ಲಿ ನೆಲೆಸಿದ್ದ ಕುಡುಬಿ ಮತ್ತು ಮರಾಠಿ ಜನಾಂಗದ ಬಾಂಧವರು ಜಾನಪದ ಸೊಗಡಿನೊಂದಿಗೆ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಪಾಲ್ಗುಣ ಮಾಸದ ಏಕಾದಶಿಯಿಂದ ಮೊದಲ್ಗೊಂಡು ಹುಣ್ಣಿಮೆ ದಿನದಂದು ಹೋಳಿ ಹುಣ್ಣಿಮೆ ಹಬ್ಬ ಸಮಾಪ್ತಿಗೊಂಡಿತು.
ಹೋಳಿ ಹಬ್ಬಕ್ಕೆ ಸರಿ ಸುಮಾರು ಮೂರು ತಿಂಗಳುಗಳ ಮುಂಚೆನೆ ಕುಡುಬಿ ಹಾಗೂ ಮರಾಠಿ ಜನಾಂಗದವರು ಹೋಳಿ ಕುಣಿತಕ್ಕೆ ತಯಾರಿಯನ್ನು ಮಾಡಿಕೊಳ್ಳುತ್ತಾರೆ.
ಹೋಳಿ ಹುಣ್ಣಿಮೆಯ ಹಬ್ಬದಲ್ಲಿ ಬಣ್ಣಕ್ಕೆ ಮಹತ್ವವಿದೆ. ಹೋಳಿ ಹಬ್ಬ ಬರಿ ಆಚರಣೆಗೆ ಮಾತ್ರಕ್ಕೆ ಸೀಮಿತವಾಗದೆ ಬದುಕಿನ ಜತಗೆ ನಂಟನ್ನು ಕೂಡ ಹೊಂದಿದೆ. ಪ್ರತಿಯೊಂದು ನಡಾವಳಿಗಳನ್ನು ಸಂಪ್ರದಾಯ ಬದ್ಧವಾಗಿ ಆಚರಣೆ ಮಾಡಲಾಗುತ್ತದೆ.
ಹೋಳಿ ಹಬ್ಬದ ಆಚರಣೆಯಲ್ಲಿ ಗುಮಟೆ ಕುಣಿತ ಮತ್ತು ಕೋಲಾಟಕ್ಕೆ ಹೆಚ್ಚಿನ ಮನ್ನಣೆ ಇದೆ.