News Karnataka Kannada
Monday, April 29 2024
ವಿಶೇಷ

ಇಂದು ವಿಶ್ವ ಸಮೋಸಾ ದಿನ: ಆದರೆ ಸಮೋಸಾ ಭಾರತದ ಆಹಾರವಲ್ಲ!

Today is World Samosa Day: But samosas are not India!
Photo Credit : News Kannada

ಇಂದು ವಿಶ್ವ ಸಮೋಸಾ ದಿನ. ಆದರೆ ಸಮೋಸಾ ಭಾರತದಲ್ಲ. ಅದರ ಇತಿಹಾಸ ಬೇರೆಯೇ ಇದೆ. ಪ್ರತಿ ವರ್ಷ ಸೆಪ್ಟೆಂಬರ್ 05 ರಂದು ಸಮೋಸಾ ದಿನವಾಗಿ ಮೀಸಲಿಡಲಾಗಿದೆ. ಬಾಯಲ್ಲಿ ಇಟ್ಟರೆ ಸಾಕು ಬಾಯ್ತುಂಬ ಹರಡುವ ಮಸಾಲೆಭರಿತ ಆಲೂಗಡ್ಡೆ, ಈರುಳ್ಳಿ, ಬಟಾಣಿ ಹೀಗೆ ತನ್ನ ಯುನೀಕ್ ಟೇಸ್ಟ್ ಹಾಗೂ ಶೇಪ್ ಹೊಂದಿರುವ ಮತ್ತೇ ಮತ್ತೇ ತಿನ್ನಬೇಕು ಅನಿಸುವ ಸಮೋಸಾದ ದಿನವಿಂದು.

ಸಮೋಸಾವನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಅನೇಕ ಶತಮಾನಗಳ ಹಿಂದಿನ ಪುಸ್ತಕಗಳು ಮತ್ತು ದಾಖಲೆಗಳಲ್ಲಿ ಇದನ್ನು ಸಂಬೋಸ್ಕಾ, ಸಾಂಬುಸಾ, ಸಂಬೋಸಾಜ್ ಎಂದು ಉಲ್ಲೇಖಿಸಲಾಗಿದೆ. ಈಗಲೂ ಅದಕ್ಕೆ ಸಿಂಘಡ, ಸಾಂಬಸ, ಚಮುಕ, ಸಾಂಬುಸಜ್ ಎಂದು ಹಲವು ಹೆಸರುಗಳಿವೆ.

ಏಷ್ಯಾದಲೇ ‘ಸಮೋಸಾ’ ಇರಾನ್‌ನಿಂದ ಹರಡಲು ಪ್ರಾರಂಭಿಸಿತು. ಆದರೆ ಸಮೋಸಾಗಳು ಈಜಿಪ್ಟ್‌ನಲ್ಲಿ ಹುಟ್ಟಿಕೊಂಡಿವೆ ಎಂದು ನಂಬಲಾಗಿದೆ. ಅಲ್ಲಿಂದ ಲಿಬಿಯಾ ತಲುಪಿತು. ನಂತರ ಮಧ್ಯಪ್ರಾಚ್ಯ ತಲುಪಿತು. ಇದು 16 ನೇ ಶತಮಾನದವರೆಗೆ ಇರಾನ್‌ನಲ್ಲಿ ಬಹಳ ಜನಪ್ರಿಯವಾಗಿತ್ತು.ಭಾರತದಲ್ಲಿ ಇಂದಿಗೂ ಸಮೋಸಾಗೆ ಬೇಡಿಕೆ ಇದೆ. ಬಹುತೇಕ ಭಾರತೀಯ ಜನರು ಸಮೋಸಾದ ಟೇಸ್ಟ್​ ನೋಡಿದ್ದಾರೆ.

ಇನ್ನು ಮಧ್ಯ ಏಷ್ಯಾದಲ್ಲಿದ್ದ ಸಮೋಸಾವನ್ನು ಭಾರತಕ್ಕೆ ಪರಿಚಯಿಸಿದ್ದು ಅರೇಬಿಕ್ ವ್ಯಾಪಾರಿಗಳು. ಸುಮಾರು 13ನೇ ಅಥವಾ 14ನೇ ಶತಮಾನದಲ್ಲಿ, ವ್ಯಾಪಾರಿಗಳು ರುಚಿಕರವಾದ ತಿಂಡಿಗಳನ್ನು ಭಾರತಕ್ಕೆ ತಂದರು. ಈ ವೇಳೆ ಸಮೋಸಾ ಕೂಡ ಭಾರತಕ್ಕೆ ಬಂತು. ಅಂದಿನಿಂದ ಸಮೋಸಾ ಜನಪ್ರಿಯ ಸ್ನ್ಯಾಕ್ಸ್ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು