News Karnataka Kannada
Monday, April 29 2024
ವಿಶೇಷ

ಬತ್ತಿಹೋದ ಸ್ವರ್ಣ: ಕಾರ್ಕಳಕ್ಕೆ ಎದುರಾಗಲಿದೆ ಕುಡಿಯುವ ನೀರಿನ ಬವಣೆ

Karkala to face drinking water crisis
Photo Credit : News Kannada

ಕಾರ್ಕಳ: ಪುರಸಭೆ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರಿಗೆ ಆಶ್ರಯವಾಗಿದ್ದ ಮುಂಡ್ಲಿಯ ಸ್ವರ್ಣ ನದಿ ಬತ್ತಿಹೋಗಿದೆ. ಇದ್ದ ನೀರನ್ನು ಪಂಪ್ ಮೂಲಕ ರಾಮಸಮುದ್ರದ ನೀರು ಶುದ್ಧೀಕರಣ ಘಟಕಕ್ಕೆ ಹಾಯಿಸಿದರೆ ಇನ್ನೂ ಒಂದೆರೆಡು ದಿನಗಳಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಬತ್ತಿ ಹೋಗಲಿದೆ. ಇದೇ ಪರಿಸರದಲ್ಲಿ ಟ್ರಜ್ಜಿಂಗ್ ನಡೆಸುವುದರಿಂದ ಅಂತರ್‌ಜಲ ಸ್ವಲ್ವ ಹೆಚ್ಚಳಗೊಳ್ಳುವುದರಿಂದ ಮುಂದಿನ ಎರಡು ವಾರಕ್ಕೆ ಆಗುವಷ್ಟು ಕುಡಿಯುವ ನೀರು ಸಾಕಾಗಬಹುದೆಂದು ಅಂದಾಜಿಸಲಾಗಿದೆ.

ಮುಂಡ್ಲಿ ಡ್ಯಾಂನ ಕುರಿತು ಒಂದಿಷ್ಟು…
ಕಾರ್ಕಳ ಶಾಸಕರಾಗಿದ್ದ ಎಂ.ವೀರಪ್ಪ ಮೊಯಿಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲ್ಮಗುಂಡಿಯ ಮುಂಡ್ಲಿ ಎಂಬಲ್ಲಿ ಕಿಂಡಿಅಣೆಕಟ್ಟು ನಿರ್ಮಾಣಗೊಂಡಿತು. ಇಲ್ಲಿಂದಲೇ ರಾಮಸಮುದ್ರದ ನೀರು ಶುದ್ಧೀಕರಣ ಘಟಕಕ್ಕೆ ನೀರು ಸರಬರಾಜು ಆಗುತ್ತಿತ್ತು. ಆ ಮೂಲಕ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಪೊರೈಕೆ ಮಾಡಲಾಗುತ್ತಿದೆ.

ಆಂಧ್ರಪ್ರದೇಶದ ಮೂಲದ ವಿದ್ಯುತ್ ಉತ್ಪಾದನ ಘಟಕ ಮುಂಡ್ಲಿಯಲ್ಲಿ ಕಾರ್ಯರಂಭ ಬಳಿಕ ಕಿಂಡಿ ಅಣೆಕಟ್ಟಿಗೆ ಅಳವಡಿಸಲಾಗಿದ್ದ ಮರದ ಗೇಟ್‌ಗಳನ್ನು ತೆರವು ಗೊಳಿಸಿ ಕಾಂಕ್ರೀಟ್‌ಕರಣ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಪರಿಣಾಮವಾಗಿ ಮಳೆಗಾಲದಲ್ಲಿ ಪರಿಸರದಲ್ಲಿ ಕೃತಕ ನೆರೆ ಹಾವಳಿಯು ಕಾಡತೊಡಗಿ ಹಲವು ಕೃಷಿ ಭೂಮಿ ಜಲಾವ್ರತಗೊಳ್ಳುತ್ತಿತ್ತು. ಇದರಿಂದ ಕೃಷಿ ಹಾನಿಗೊಳಗಾಗುತ್ತಾ ಬಂದಿದೆ.

ಮಳೆಗಾಲದಲ್ಲಿ ಶೇಖರಣೆಗೊಳುವ ಹೂಳಿನಿಂದಾಗಿ ಬೇಸಿಗೆಗಾಲ ಆರಂಭಗೊಳುತ್ತಿದ್ದಂತೆ ಮುಂಡ್ಲಿ ಡ್ಯಾಂನಲ್ಲಿ ಕುಡಿಯುವ ನೀರಿಗೂ ತಾತ್ವಾರ ಎದುರುಗೊಳ್ಳುತ್ತಿದೆ.

ಮಳೆಗಾಲದಲ್ಲಿ ಉಕ್ಕಿ ಹರಿದು.. ಬೇಸಿಗೆಯಲ್ಲಿ ಬುತ್ತುತ್ತಿರುವ ಸ್ವರ್ಣ
ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿರುವ ಸ್ವರ್ಣ ನದಿ ಬೇಸಿಗೆ ಸಮೀಪಿಸುತ್ತಿದ್ದಂತೆ ಒಳಹರಿವು ಸಂಪೂರ್ಣ ಕ್ಷೀಣಿಕೊಳ್ಳುತ್ತಾ ಕಡುಬೇಸಿಗೆಯ ಸಂದರ್ಭದಲ್ಲಿ ನದಿ ಸಂಪೂರ್ಣ ಬತ್ತಿ ಹೋಗುತ್ತಿರುವುದರಿಂದ ಕಾರ್ಕಳ ಪುರಸಭೆ, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಸೆ ಎದುರಾಗುತ್ತಿದೆ.

೧೨ ಅಡಿ ಎತ್ತರದ ಮುಂಡ್ಲಿ ಡ್ಯಾಂ ನಲ್ಲಿ ಹೂಳಿನ ಸಂಗ್ರಹವೇ ಹೆಚ್ಚಳವಾಗಿದೆ. ಇದರಿಂದಾಗಿ ನೀರು ಸಂಗ್ರಹಣೆ ಕಡಿಮೆಯಾಗುತ್ತಿರುವುದರಿಂದ ನಗರದ ಪ್ರದೇಶಗಳಿಗೆ ಕುಡಿಯುವ ನೀರು ಪೊರೈಕೆ ಮಾಡಲು ಸಾಧ್ಯವಾಗುವುದಿಲ್ಲ.

ಉಡುಪಿಗೂ ಅಸರೆ
ಮಾಳ ಗ್ರಾಮದ ಮಲ್ಲಾರು, ಮುಳ್ಳೂರು, ಪಟ್ಟಣಹಿತ್ಲು, ಹೇರಂಜೆ, ಕಲ್ಯಾಣಿ,ಎಡಪ್ಪಾಡಿ, ಹೊಯ್ಗೆಹಿತ್ಲು, ಹೆಗ್ಗಡೆಮನೆ ಮತ್ತು ಕಡಂದಲಾಜೆ ಮೊದಲಾದೆಡೆಯ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿಯುವ ಈ ತೊರೆಗಳೆಲ್ಲವೂ ಕಡಾರಿ(ಮಾಚೊಟ್ಟೆ) ಹೊಳೆಯನ್ನು ಸೇರಿ ಎಣ್ಣೆಹೊಳೆಯನ್ನು ಕೂಡಿಕೊಂಡು ಗ್ರಾಮದ ಹೊರಗಡೆ ಸ್ವರ್ಣ ಎಂಬ ನಾಮಾಂಕಿತದೊಂದಿಗೆ ಪರಿಚಯಿಸಿಕೊಂಡು ಉಡುಪಿಯ ಕಲ್ಯಾಣಪುರದಲ್ಲಿ ಸಮುದ್ರದೊಂದಿಗೆ ಲೀನವಾಗುತ್ತದೆ.

ಈ ನಡುವೆ ತೆಳ್ಳಾರಿನ ಮುಂಡ್ಲಿ ಯಲ್ಲಿ ಕಿರುಅಣೆಕಟ್ಟು ನಿರ್ಮಿಸಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ಹಾಗೂ ಹಿರಿಯಡ್ಕ ಬಜೆಯಲ್ಲಿ ನಿರ್ಮಿಸಿರುವ ಅಣೆಕಟ್ಟು ನಲ್ಲಿ ಸಂಗ್ರಹವಾಗಿರುವ ನೀರನ್ನು ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಸಮಗ್ರವಾಗಿ ಪೊರೈಕೆ ಮಾಡಲಾಗುತ್ತಿದೆ.

ರಾಮಸಮುದ್ರ ನೀರು ಶುದ್ಧೀಕರಣ ಘಟಕ
ಮುಂಡ್ಲಿ ಸ್ವರ್ಣ ನದಿಯ ನೀರಿನ್ನು ಪಂಪಿಂಗ್ ಮೂಲಕ ರಾಮಸಮುದ್ರ ನೀರು ಶುದ್ಧೀಕರಣ ಘಟಕಕ್ಕೆ ಬಂದು ಸೇರುತ್ತದೆ. ಶುದ್ದೀಕರಣವಾದ ನೀರು ಪಕ್ಕದದಲ್ಲಿ ನಿರ್ಮಾಣªಗಿರುವ ೧೦ ಲಕ್ಷ ಲೀ. ಜಲಸಂಗ್ರಾಹಲಯದಲ್ಲಿ ಸಂಗ್ರಹಿಸಲಾಗುತ್ತಿದೆ. ಆ ಮೂಲಕ ಕಾರ್ಕಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆ ಇದೆ. ೨೦೦೮ನೇ ಇಸವಿಯ ಅದೊಂದು ದಿನ ರಾತಿ ಜಲಸಂಗ್ರಾಹಲಯವು ಹಠಾತ್ ಧರೆಶಾಹಿಯಾಗಿತ್ತು. ೨೦೦೯ ಜುಲಾಯಿ ೨೬ರಂದು ಅಂದಿನ ಶಾಸಕರಾಗಿದ್ದ ಎಚ್.ಗೋಪಾಲ ಭಂಡಾರಿ ಅಧ್ಯಕ್ಷತೆಯಲ್ಲಿ ಗೃಹಸಚಿವ ವಿ.ಎಸ್.ಆಚಾರ್ಯರವು ನೂತನ ಜಲ ಸಂಗ್ರಾಹಲಯವನ್ನು ಉದ್ಘಾಟಿಸಿದ್ದರು.

ರಾಮಸಮುದ್ರ ಆಸರೆ
ಮುಂಡ್ಲಿಯಲ್ಲಿ ಕಿರುಅಣೆಕಟ್ಟು ನಿರ್ಮಾಣವಾಗುವ ಪೂರ್ವದಲ್ಲಿ ಕಾರ್ಕಳ ಪುರಸಭೆ ವ್ಯಾಪ್ತಿಗೆ ಕುಡಿಯವ ನೀರು ಸರಬರಾಜಿಗಾಗಿ ರಾಮಸಮುದ್ರದ ನೀರನ್ನೇ ಸದ್ಬಾಳಕೆ ಮಾಡಲಾಗುತ್ತಿತ್ತು. ಪ್ರಸಕ್ತ ದಿನಗಳಲ್ಲಿಯೂ ಅದರ ನೀರನ್ನೇ ಶುದ್ದೀಕರಿಸಿ ಪುರಸಭಾ ವ್ಯಾಪ್ತಿಗೆ ಸರಬರಾಜು ಮಾಡಲಾಗುತ್ತಿದೆ. ಐತಿಹಾಸಿಕ ಹಿನ್ನಲೆಯುಳ್ಳ ರಾಮಸಮುದ್ರವನ್ನು ಅಭಿವೃದ್ಧಿ ಪಡಿಸುವ ಅಗತ್ಯತೆ ಇದೆ. ಸರ್ವ ಋತುವಿನಲ್ಲೂ ಇದೇ ರಾಮಸಮುದ್ರದಲ್ಲಿ ಜಲಸಂಪನ್ಮೂಲ ಇರುವುದು ಕಂಡು ಬರುತ್ತಿದೆ. ತಲಾತಲಾಂತರ ವರ್ಷಗಳಿಂದ ಹೂಳು ಇದೇ ರಾಮಸಮುದ್ರದಲ್ಲಿ ತುಂಬಿಕೊಳ್ಳುತ್ತಿದ್ದು, ಅದನ್ನು ಹೊರ ತೆಗೆದರೆ ಪುರಸಭಾ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಇದೇ ರಾಮಸಮುದಿಂದ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯ. ಎಲ್ಲದಕ್ಕೂ ಇಚ್ಚಾಶಕ್ತಿ ದೂರದೃಷ್ಟಿತ್ವವು ಅಧಿಕಾರಿಗಲೀಗೆ ಹಾಗೂ ಜನಪ್ರತಿನಿಧಿಗಳಿಗೆ ಇರಲೇ ಬೇಕು.

ರಾಮಸಮುದ್ರದ ಹಿನ್ನಲೆ…
ಕ್ರಿ.ಶ. ೧೩೯೦ ರಿಂದ ೧೪೨೦ರ ತನಕ ಕಾರ್ಕಳವನ್ನು ಆಳ್ವಿಕೆ ಮಾಡಿದ ವೀರ ಭೈರರಸರು ಅತ್ಯಂತ ಪ್ರಭಾವಿಯಾಗಿದ್ದರು. ಅದೇ ಸಂದರ್ಭದಲ್ಲಿ ತನ್ನ ವಿಶಾಲವಾದ ರಾಜ್ಯಕ್ಕೆ ಕೆರುವಾಸೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. ವೀರ ಬೈರರಸನಿಗೆ ವೀರಪಾಂಡ್ಯ ಹಾಗೂ ರಮಾನಾಥ ಎಂಬ ಇಬ್ಬರು ಗಂಡು ಮಕ್ಕಳು. ರಮಾನಾಥ ತನ್ನ ತಂದೆಯ ಜೀವಿತಾವಧಿಯಲ್ಲಿ ಮರಣ ಹೊಂದಿದ್ದು ಅದೇ ಕಾರಣದಿಂದ ಆತನ ಸ್ಮರಣಾರ್ಥವಾಗಿ ರಮಣೀಯ ಪರಿಸರದಲ್ಲಿ ರಾಮಸಮುದ್ರವನ್ನು ವೀರ ಬೈರರಸ ನಿರ್ಮಿಸಿರುವುದು ಐತಿಹ್ಯವಾಗಿದೆ.

– ಆರ್.ಬಿ.ಜಗದೀಶ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು