News Karnataka Kannada
Monday, April 29 2024
ವಿಶೇಷ

ಕುಡಿಯುವ ನೀರಿನಿಂದ ಕಾಡುವ ಮಾರಕ ರೋಗ ಫ್ಲೋರೊಸಿಸ್

Fluorosis is a water-borne disease
Photo Credit : By Author

ಈಗ ಯಾವಾಗ ಯಾವ ಕಾಯಿಲೆಗಳು ನಮ್ಮನ್ನು ಕಾಡುತ್ತವೆ ಎನ್ನುವುದನ್ನು ಹೇಳುವುದೇ ಕಷ್ಟವಾಗಿದೆ. ಮೊದಲೆಲ್ಲ ವಾತಾವರಣ ಬದಲಾದಾಗ ಕೆಲವೊಂದು ಕಾಯಿಲೆಗಳು ಕಾಣಿಸುತ್ತಿದ್ದವು. ಜತೆಗೆ ನೀರಿನಿಂದ ಆರಂಭವಾಗಿ ಸೇವಿಸುವ ಆಹಾರದವರೆಗೆ ಶುದ್ಧವಾಗಿಯೇ ಇರುತ್ತಿದ್ದ ಕಾರಣಗಳಿಂದ ಕಾಯಿಲೆಗಳು ಅಷ್ಟು ಸುಲಭವಾಗಿ ನಮಗೆ ತಗಲುತ್ತಿರಲಿಲ್ಲ. ಆದರೀಗ ನಾವು ಕುಡಿಯುವ ನೀರು ಮತ್ತು ಆಹಾರಗಳಿಂದಲೇ ಕಾಯಿಲೆಗಳು ಬರುವಂತಾಗಿದೆ.

ಇದೀಗ ಕುಡಿಯುವ ನೀರಿನಿಂದಲೇ ತಗಲುವ ಫ್ಲೋರೊಸಿಸ್ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಹೀಗಾಗಿ ಈ ಬಗ್ಗೆ ಅಲ್ಲಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆರಂಭವಾಗಿವೆ. ಹಾಗಾದರೆ ಪ್ಲೋರೊಸಿಸ್ ಎಂದರೆ ಏನು? ಅದು ಹೇಗೆ ತಗಲುತ್ತದೆ. ಅದರಿಂದ ಆಗುವ ಪರಿಣಾಮಗಳೇನು ಎಂಬುದನ್ನು ತಿಳಿಯುತ್ತಾ ಹೋದರೆ ಒಂದಷ್ಟು ವಿಚಾರಗಳು ಲಭ್ಯವಾಗುತ್ತದೆ.

ಫ್ಲೋರೊಸಿಸ್ ರೋಗವು ನೀರಿನಿಂದ ಮಾತ್ರವಲ್ಲದೆ, ನಾವು ಸೇವಿಸುವ ವಿವಿಧ ಬಗೆಯ ಆಹಾರ ಹಾಗೂ ಕಾರ್ಖಾನೆಗಳು ಉಗುಳುವ ತ್ಯಾಜ್ಯಗಳಿಂದ ಹೆಚ್ಚಾಗಿ ಹರಡುತ್ತಿದೆ. ವೈದ್ಯರು ಹೇಳುವಂತೆ ಇದೊಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಜಾಸ್ತಿ ಇರುವ ಕಡೆ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದ ಮೂರು ಬಗೆಯ ಕಾಯಿಲೆ ಹರಡುವ ಲಕ್ಷಣ ಗೋಚರವಾಗುತ್ತದೆ. ಹಲ್ಲುಗಳು ಕಂದು ಬಣ್ಣಕ್ಕೆ ತಿರುಗಿ ಸಣ್ಣಸಣ್ಣರಂಧ್ರಗಳು ನಿರ್ಮಾಣವಗಬಹುದು. ಮೂಳೆ, ಕೀಲು ನೋವು ಹಾಗೂ ಜಡತ್ವ ಹೆಚ್ಚುವುದು. ಕೈಕಾಲುಗಳ ಊನತೆ ಕಾಣುವುದು ಪ್ರಮುಖ ಲಕ್ಷಣಗಳಾಗಿವೆ.

ಈ ಕಾಯಿಲೆ ವಾಸಿಮಾಡಲು ಸಾಧ್ಯವಾಗದ ಶಾಶ್ವತ ಕಾಯಿಲೆಯಾಗಿರುವುದರಿಂದ ಪ್ರತಿಯೊಬ್ಬರೂ ಇದರತ್ತ ಎಚ್ಚರ ವಹಿಸುವುದು ಅಗತ್ಯ. ಕೆಲವರಿಗೆ ಕೆಟ್ಟ ಅಭ್ಯಾಸವಿರುತ್ತದೆ. ಎಲ್ಲೆಂದರಲ್ಲಿ ತಿನ್ನುವುದು, ಇವರಿಗೆ ತಾವು ತಿನ್ನುವ ಆಹಾರ, ಕುಡಿಯುವ ನೀರು ಶುದ್ಧವೋ ಎಂದು ಪರಿಶೀಲಿಸಿ ನೋಡುವ ತಾಳ್ಮೆಯೂ ಇರುವುದಿಲ್ಲ. ಇಂತಹವರು ಖಂಡಿತಾ ಈ ಕಾಯಿಲೆಯ ಬಗ್ಗೆ ಎಚ್ಚರ ವಹಿಸಬೇಕಲ್ಲದೆ, ಆಹಾರ ಮತ್ತು ನೀರನ್ನು ಸೇವಿಸುವಾಗ ಜಾಗ್ರತೆ ವಹಿಸುವುದು ಅತಿ ಮುಖ್ಯ.

ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯಗಳು, ಮಲ ಮೂತ್ರಗಳು ಕೆಲವೊಮ್ಮೆ ನೀರಿನಲ್ಲಿ ಮಿಶ್ರವಾಗಿ ಸಾಂಕ್ರಾಮಿಕ ರೋಗದ ಕೀಟಾಣುಗಳು ನಮ್ಮ ದೇಹವನ್ನು ಸೇರಬಹುದು. ಅಥವಾ ಮೇಲ್ನೋಟಕ್ಕೆ ನೀರು ತಿಳಿಯಾಗಿರುವಂತೆ ಕಂಡುಬಂದರೂ ಅದರಲ್ಲಿರುವ ವೈರಸ್‌ಗಳು ನಮ್ಮ ದೇಹ ಸೇರಿ ಬಾಧಿಸಬಹುದು.

ಇಲ್ಲಿ ಕಾಯಿಲೆ ಬಂದ ಬಳಿಕ ಅದು ನಮಗೆ ಫ್ಲೋರೋಸಿಸ್ ಎಂಬುದು ಗೊತ್ತಾಗುವ ಹೊತ್ತಿಗೆ ಕೆಲವು ಸಮಯ ಹಿಡಿಯಬಹುದು. ಏಕೆಂದರೆ ನಮ್ಮಲ್ಲಿ ಹೆಚ್ಚಿನವರು ಕಾಯಿಲೆ ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿಗೆ ಹೋಗದೆ ತಾವೇ ಸ್ವಯಂ ವೈದ್ಯೋಪಚಾರ ಮಾಡುತ್ತಾರೆ. ಇನ್ನೇನು ಕಾಯಿಲೆ ಉಲ್ಭಣಗೊಂಡು ಸಾಧ್ಯವಾಗಲ್ಲ ಎಂಬುದು ಗೊತ್ತಾದ ಬಳಿಕ ವೈದ್ಯರ ಬಳಿ ತೆರಳುತ್ತಾರೆ. ಈ ವೇಳೆಗೆ ಪರಿಸ್ಥಿತಿ ಹದಗೆಟ್ಟಿರುತ್ತದೆ.

ಫ್ಲೋರೋಸಿಸ್ ಕಾಯಿಲೆ ವಾಸಿಯಾಗದ ಕಾಯಿಲೆಯಾಗಿದ್ದು ನಿಯಂತ್ರಣ ಮಾಡಲಷ್ಟೆ ಸಾಧ್ಯವಿರುವುದರಿಂದ ಪ್ರತಿಯೊಬ್ಬರೂ ಇದರತ್ತ ಎಚ್ಚರ ವಹಿಸುವುದು ಅಗತ್ಯ. ಸಾರ್ವಜನಿಕರು ತಾವೇ ಸ್ವತಃ ತಮ್ಮ ಆರೋಗ್ಯ, ಆಹಾರ ಸೇವೆನೆ ವಿಧ, ಪರಿಸರ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ.

ಕುಡಿಯುವ ನೀರು ಶುದ್ಧವಾಗಿದೆಯೋ? ಆಹಾರವೂ ಶುಚಿಯಾಗಿದೆಯೋ ಎಂಬುದನ್ನು ಮನದಟ್ಟು ಮಾಡಿಕೊಂಡು ಸೇವಿಸಬೇಕು. ರಸ್ತೆಬದಿಯ ಆಹಾರ ಸೇವನೆಯನ್ನು ನಿಲ್ಲಿಸಬೇಕು. ಮನೆಗೆ ಸರಬರಾಜಾಗುವ ನೀರನ್ನು ನೇರವಾಗಿ ಸೇವಿಸುವುದನ್ನು ನಿಲ್ಲಿಸಿ ಕುದಿಸಿ ಆರಿಸಿದ ಅಥವಾ ಶುದ್ಧೀಕರಿಸಿದ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ನಾವಿಲ್ಲಿ ಸ್ವಚ್ಛತೆ ಮತ್ತು ಶುದ್ಧತೆಗೆ ಆದ್ಯತೆ ನೀಡುವುದನ್ನು ಮರೆಯಬಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು