News Karnataka Kannada
Sunday, April 28 2024
ವಿಶೇಷ

 ಬೇಸಿಗೆ ಬಂತು ಪ್ರಾಣಿ-ಪಕ್ಷಿ ಸಂಕುಲಗಳಿಗೆ ನೀರುಣಿಸಿ

 Summer has arrived to water the animals and birds
Photo Credit : News Kannada

ಪ್ರಾಣಿ-ಪಕ್ಷಿ ಸಂಕುಲಗಳು ಪ್ರಕೃತಿಯ ಅವಿಭಾಜ್ಯ ಅಂಗಗಳು ಅವು ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಮನುಷ್ಯ ಸಂಪೂರ್ಣವಾಗಿ ಪರಿಸರದ ಮೇಲೆ ಅವಲಂಬಿತನಾಗಿದ್ದಾನೆ. ನಾವು ಆರೋಗ್ಯದಿಂದ ಬದುಕಲು ಪ್ರಾಣಿ-ಪಕ್ಷಿ, ಗಿಡ, ಮರ, ಕಾಡುಗಳು ನಮಗೆ ಅವಶ್ಯಕವಾಗಿವೆ.

ಭಾರತದಲ್ಲಿ ವನ್ಯಜೀವಿಗಳು ಶೇ.25 ರಷ್ಟಿದ್ದು, ಕರ್ನಾಟಕದಲ್ಲಿ 30 ವನ್ಯಜೀವಿ ಆಭಯಾರಣ್ಯಗಳು ಮತ್ತು 16 ಸಂರಕ್ಷಿತ ಮೀಸಲು ಪ್ರದೇಶ ಸೇರಿದಂತೆ 5 ರಾಷ್ಟಿçÃಯ ಉದ್ಯಾನವನಗಳಿದ್ದು, ಕರ್ನಾಟಕದ ಕಾಡುಗಳಲ್ಲಿ ಸುಮಾರು 600 ವಿವಿಧ ಜಾತಿಯ ವೈವಿದ್ಯಮಯ ಪಕ್ಷಿಗಳನ್ನು ನೋಡಬಹುದಾಗಿದೆ. ಭಾರತದಲ್ಲಿ ಕಂಡು ಬರುವ ಶೇ.35 ಕ್ಕಿಂತ ಹೆಚ್ಚಿನ ಪಕ್ಷಿ ಪ್ರಬೇಧಗಳು ಇಲ್ಲಿ ನೆಲೆಯಾಗಿವೆ.

ಕರಾವಳಿ ಪಶ್ಚಿಮ ಘಟ್ಟಗಳು ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಈ ಪ್ರದೇಶಗಳು ವಲಸೆ ಹಕ್ಕಿಗಳಿಗೆ ತಾಣವಾಗಿವೆ. ಕರ್ನಾಟಕದಲ್ಲಿ 8 ಜನಪ್ರೀಯ ಪಕ್ಷಿಧಾಮಗಳು ನೋಡಸಿಗುತ್ತವೆ. ಅವುಗಳೆಂದರೆ ಕೊಕ್ಕರೆ ಬೆಳ್ಳೂರು, ಗುಡವಿ, ಆದಿಚುಂಚನಗಿರಿ, ಭೋನಲ್, ದಾಂಡೇಲಿಯ ಹಾರ್ನ್ಬಿಲ್, ರಂಗನತಿಟ್ಟು, ಘಟಪ್ರಭಾ ಪಕ್ಷಿಧಾಮ, ಅತ್ತಿವೇರಿ ಇವು ಪಕ್ಷಿಗಳ ನೆಲೆಯಾಗಿವೆ.

ಗುಬ್ಬಚ್ಚಿ, ಗಿಣಿ, ಪಾರಿವಾಳ, ಕಾಗೆ, ಹದ್ದು, ಅಳಿಲು, ನವಿಲು, ಗುಟುರು ಹಕ್ಕಿಗಳು ಸೇರಿದಂತೆ ಹಲವಾರು ಪಕ್ಷಿಗಳಿಗೆ ಬೇಸಿಗೆ ಬಾದಿಸುತ್ತದೆ. ಅವುಗಳಿಗೆ ಆಹಾರವಿಲ್ಲದಿದ್ದರು ನಡೆಯುತ್ತದೆ ಆದರೆ ನೀರಿಲ್ಲದೆ ಅವು ಬದುಕಲಾರವು ಹಾಗಾಗಿ ಮನೆಯ ಹಿತ್ತಲಿನ ಕೈತೋಟ, ಕಛೇರಿ, ಹೊಲ-ಗದ್ದೆಯ ಗಿಡ ಮರಗಳ ಟೊಂಗೆಗಳಿಗೆ ನೀರಿನ ಅರೆವಟ್ಟಿಗೆಗಳನ್ನು ಕಟ್ಟಿ ಅವುಗಳಿಗೆ ನೀರುಣಿಸಿದರೆ ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ಬೇಸಿಗೆ ಆರಂಭವಾಗಿರುವುದರಿAದ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಪಕ್ಷಿಗಳ ಜೀವಕ್ಕೆ ಆಪತ್ತು ಎದುರಾಗುತ್ತದೆ. ಅವುಗಳಿಗೆ ಕುಡಿಯಲು ನೀರು ಸಿಗದಿದ್ದರೆ ಬಳಲಿಕೆಗೆ ಕಾರಣವಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇನ್ನು ಬಿಸಿಲಿನ ಪ್ರಖರತೆ ಹೆಚ್ಚಿರಲಿದ್ದು, ಬಿಸಿಲ ಝಳದಿಂದ ಬಳಲಿ ನೀರು ಸಿಗದಿದ್ದರೆ ಪ್ರಾಣಿ-ಪಕ್ಷಿಗಳು ತಮ್ಮ ಪ್ರಾಣವನ್ನೆ ಕಳೆದುಕೊಳ್ಳುತ್ತವೆ.

ಮನುಷ್ಯರಾದ ನಾವುಗಳು ನಮಗೆ ನೀರಿನ ಸಮಸ್ಯೆಗಳಾದರೆ ಇತರರ ಮುಂದೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೆವೆ.

ಆದರೆ ಮಾತುಬಾರದ ಆ ಮೂಕ ಪ್ರಾಣಿ-ಪಕ್ಷಿಗಳು ಯಾರಿಗೆ ತಾನೆ ತಮ್ಮ ಯಾತನೆ ಹೇಳಬೇಕು. ಅವುಗಳ ಬಾಷೆ ನಮಗೆ ಅರ್ಥ ಆಗುವುದೆ? ಪ್ರಾಣಿ ಪ್ರಪಂಚದಲ್ಲಿಯೆ ಶ್ರೇಷ್ಠ ಪ್ರಾಣಿಯಾದ ಮಾನವ ಅವುಗಳ ರೋಧನವನ್ನು ಅರ್ಥಮಾಡಿಕೊಂಡು ನಮ್ಮ ಮನೆಯ ಹಿತ್ತಲಿನ ಕೈ-ತೋಟ, ಮನೆಯ ಟೆರಸ್, ಹೊಲ, ಗದ್ದೆಗಳಲ್ಲಿ ನೀರಿನ ಅರೆವಟ್ಟಿಗೆಗಳನ್ನಿಟ್ಟು ಅವುಗಳಿಗೆ ನೀರುಣಿಸುವ ಕಾರ್ಯ ಈ ಬೇಸಿಗೆಯಲ್ಲಿ ಮಾಡಿದರೆ ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ.

ಬೇಸಿಗೆ ಬಂತೆAದರೆ ಸಾಕು ಭೂಮಿಯಲ್ಲಿ ನೀರಿನಮಟ್ಟ ತಾನಾಗಿಯೆ ಕಡಿಮೆಯಾಗುತ್ತದೆ. ಇದರಿಂದ ಕೆರೆ, ಹಳ್ಳ, ಕೊಳ್ಳ, ಭಾವಿಗಳಲ್ಲಿಯೂ ನೀರು ಕಡಿಮೆಯಾಗಿ ನೀರಿನ ಆಹಾಕಾರ ಎಲ್ಲೆಡೆ ಕಂಡುಬರುವದನ್ನು ನಾವು ಕಾಣುತ್ತೆವೆ. ಹಾಗಾಗಿ ನೀರನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಉಪಯೋಗಿಸಿಕೊಂಡು ಉಳಿದ ನೀರನ್ನು ಅನಾವಶ್ಯಕವಾಗಿ ಪೋಲಾಗದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ.

ಕೆಲವೊಂದು ಗ್ರಾಮ, ನಗರ ಮತ್ತು ವಾರ್ಡ್ಗಳಲ್ಲಿ ಸಾರ್ವಜನಿಕ ನಳ/ನಲ್ಲಿ ನೀರು ಅನಾವಶ್ಯಕವಾಗಿ ಹರಿಯುತ್ತಿದ್ದರೆ ಅದರ ಬಗ್ಗೆ ಜನರು ಗಮನಹರಿಸುವುದಿಲ್ಲ. ಅದು ತಮಗೆ ಸಂಬAಧವೆ ಇಲ್ಲವೇನೊ ಎಂಬAತೆ ನೋಡಿಯು ನೋಡದಂತೆ ಜನರು ಹೋಗುತ್ತಾರೆ ಹಾಗಾರಬಾರದು. ಅನಾವಶ್ಯಕವಾಗಿ ನೀರು ಪೋಲಾಗದಂತೆ ನೋಡಿಕೊಂಡರೆ ಮಾತ್ರ ನಾವು ಬೇಸಿಗೆಯಲ್ಲಿ ನೀರಿನ ಬವಣೆಯಿಂದ ಪಾರಾಗಬಹುದು.

ಈ ದೇಶದ ಪ್ರಜೆಗಳಾದ ನಾವು ನಮಗೆ ಏನಾದರು ಸಮಸ್ಯೆಗಳಾದರೆ ಪ್ರತಿಯೊಂದಕ್ಕು ಸರ್ಕಾರವನ್ನೆ ದೂರುತ್ತೆವೆ. ಅದರ ಜೊತೆಗೆ ಪ್ರಜೆಗಳಾದ ನಮ್ಮ ಕರ್ತವ್ಯಗಳು ಏನು ಸರ್ಕಾರದ ಆಸ್ತಿ ನಮ್ಮ ಆಸ್ತಿ, ಅದನ್ನು ನಾವು ಹೇಗೆ ಸಂರಕ್ಷಿಸಬೇಕು. ನಮ್ಮ ದೇಶದ ಸಂಪನ್ಮೂಲಗಳನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಹೇಗೆ ಉಪಯೋಗಿಸಿಕೊಂಡು ಹೋಗಬೇಕು ಎಂದು ನಾವು ಯೋಚಿಸುವುದು ಬಹಳ ವಿರಳ. ಹಾಗೆ ಯೋಚಿಸಿದ್ದೆ ಆದರೆ ನಮ್ಮ ಸಮಸ್ಯೆಗಳಿಗೆ ಅರ್ಧ ಪರಿಹಾರ ನಮ್ಮಲ್ಲೆ ಸಿಗುತ್ತದೆ ಎಂದರೆ ತಪ್ಪಾಗದು.

ಬೇಸಿಗೆಯ ಸಂದರ್ಭದಲ್ಲಿ ಜನರಿಗೆ ನೀರಿನ ತೊಂದರೆಯಾಗದAತೆ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತಾಲ್ಲೂಕ ಹಾಗೂ ಗ್ರಾಮ ಪಂಚಾಯತಗಳು ಹಲವಾರು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ನೀರಿನ ಮೂಲವಿಲ್ಲದ ಕೆಲವೊಂದು ಗ್ರಾಮಗಳಲ್ಲಿ ಟ್ಯಾಂಕರ ಮೂಲಕವು ಜನರಿಗೆ ನೀರನ್ನು ಒದಗಿಸುವುದನ್ನು ನಾವು ಕಾಣುತ್ತೆವೆ. ನೀರು ಜೀವಜಲ, ಮನುಷ್ಯನ ಮೂಲಭೂತ ಅವಶ್ಯಕತೆಗಳಾದ ಅನ್ನ ಹಾಗೂ ಗಾಳಿಯಷ್ಟೇ ನೀರು ಸಹ ಪ್ರಾಮುಖ್ಯವಾಗಿದೆ.

ಹನಿ-ಹನಿ ಸೇರಿದರೆ ಹಳ್ಳ ಎನ್ನುವಂತೆ ಬೇಸಿಗೆಯಲ್ಲಿ ಒಂದು ಹನಿ ನೀರು ನಮಗೆ ಅತ್ಯಮೂಲ್ಯವಾಗಿದೆ. ಹಾಗಾಗಿ ನಳ/ನಲ್ಲಿ, ಬೋರವೆಲ್, ಕಾಲುವೆ, ಕೆರೆ ಅಥವಾ ಯಾವುದೇ ನೀರಿನ ಮೂಲಗಳಲ್ಲಿ ಅನಾವಶ್ಯಕವಾಗಿ ನೀರು ನಷ್ಟವಾಗಿ ಹರಿದು ಹೋಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಯಾವುದೇ ಸ್ಥಳದಲ್ಲಿ ನೀರು ಅನಾವಶ್ಯಕವಾಗಿ ಹರಿದು ಹೋಗುತ್ತಿದ್ದರೆ, ಸಂಬAಧಪಟ್ಟವರ ಗಮನಕ್ಕೆ ತಂದು ಅದನ್ನು ಪೋಲಾಗದಂತೆ ತಡೆಯುವ ಮೂಲಕ ಈ ಬೇಸಿಗೆಯಲ್ಲಿ ಯಾವುದೇ ನೀರಿನ ಸಮಸ್ಯೆಗಳಾಗದಂತೆ ನೋಡಿಕೊಳ್ಳುವುದರ ಜೊತೆಗೆ ನಮ್ಮ ಆರೋಗ್ಯದ ಬಗ್ಗೆಯೂ ನಾವು ಒಂದಿಷ್ಟು ಕಾಳಜಿ ವಹಿಸಬೇಕಾಗಿದ್ದು, ಅನಾವಶ್ಯಕವಾಗಿ ಹೊರಗಡೆ ಹೋಗಬಾರದು, ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಗಡೆ ಹೋಗಬೇಕು. ಈ ಬೇಸಿಗೆಯಲ್ಲಿ ಬೆಳಿಗ್ಗೆ 10 ಗಂಟೆಯಿAದ ಸಂಜೆ 04 ಗಂಟೆಯವರೆಗೆ ಬಿಸಿಲಿನ ಪ್ರಕರತೆ ಹೆಚ್ಚಾಗಿರುತ್ತದೆ. ವಿಶೇಷವಾಗಿ ವೃದ್ಧರು, ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಬಗ್ಗೆಯೂ ನಾವು ವಿಶೇಷ ಕಾಳಜಿ ವಹಿಸಬೇಕು. ಹಣ್ಣು, ತರಕಾರಿ ಮತ್ತು ತಂಪು ಪಾನಿಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು.

ಬೇಸಿಗೆ ಸಂದರ್ಭದಲ್ಲಿ ಕಾಡುಗಳಿಗೆ ಬೆಂಕಿ ಬೀಳುತ್ತಿರುವದನ್ನು ನಾವು ಪ್ರತಿ ವರ್ಷ ಒಂದಲ್ಲ ಒಂದು ಕಡೆ ನೋಡುತ್ತಲೆ ಇದ್ದೇವೆ.

ಯಾರು ಕಾಡುಗಳಿಗೆ ಬೆಂಕಿ ಇಡುವ ಕೆಲಸ ಮಾಡಬಾರದು. ಕಾಡು ನಮ್ಮ ಜೀವನದ ಉಸಿರು ಅದು ನಮಗೆ ಪರಿಶುದ್ದ ಗಾಳಿಯನ್ನು ನೀಡುವದು ಮಾತ್ರವಲ್ಲ ನಮ್ಮ ಪರಿಸರ ಸಮತೋಲನವನ್ನು ಕಾಪಾಡುತ್ತದೆ. ಅದರ ಮಡಿಲಿನಲ್ಲಿ ಸಾವಿರಾರು ಪ್ರಾಣಿ-ಪಕ್ಷಿಗಳು ಜೀವಿಸುತ್ತಿರುತ್ತವೆ. ಕಾಡುಗಳಿಗೆ ಬೆಂಕಿ ಬಿದ್ದಾಗ ಕಾಡು ಮಾತ್ರವಲ್ಲ ಅದರಲ್ಲಿರುವ ಸಾವಿರಾರು ಪ್ರಾಣಿ-ಪಕ್ಷಿಗಳು ತಮ್ಮ ಜೀವ ಕಳೆದುಕೊಳ್ಳುತ್ತವೆ ಮತ್ತು ಅವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಲಾಯನ ಮಾಡುತ್ತವೆ ಹಾಗಾಗಿ ಅದಕ್ಕೆ ಬೆಂಕಿ ಹಚ್ಚುವ ಕಲಸ ಮಾಡಬಾರದು. ಬೇಸಿಗೆ ಸಂದರ್ಭದಲ್ಲಿ ಕಾಡಿನಲ್ಲಿ ನೀರಿನ ಸಮಸ್ಯೆ ಉಂಟಾಗಿ ಪ್ರಾಣಿ-ಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಾ ಇರುತ್ತವೆ. ಅವುಗಳಿಗೆ ಅರಣ್ಯ ಇಲಾಖೆಯಿಂದ ನೀರನ್ನು ಒದಗಿಸಲಾಗುತ್ತದೆ.

ಕಾಡಿಗೆ ಬೆಂಕಿ ಬೀಳದಂತೆ ಅದರ ಸಂರಕ್ಷಣೆ ಮಾಡುವದು ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ ಅದರ ಜೊತೆಗೆ ಆ ಕಾಡಿನ ಅಕ್ಕ-ಪಕ್ಕದ ಗ್ರಾಮಗಳು ಮತ್ತು ಅಲ್ಲಿನ ಜನರ ಜವಾಬ್ದಾರಿಯೂ ಅಷ್ಟೆ ಆಗಿದೆ ಎಂದರೆ ತಪ್ಪಾಗಲಾರದು. ಕಾಡಿನ ಸಂಪತ್ತು ನಮ್ಮ ನಿಮ್ಮೆಲ್ಲರ ಸಂಪತ್ತಾಗಿದ್ದು, ಕಾಡು ಬೆಳೆಸಿ ನಾಡು ಉಳಿಸಿ. “ಮನೆಗೊಂದು ಮಗು, ಮಗುವಿಗೊಂದು ಮರ’’ ಎಂಬ ಘೋಷ-ವಾಕ್ಯಗಳನ್ನು ಕೇಳುತ್ತಲೆ ಇದ್ದೇವೆ. ಪ್ರತಿ ವರ್ಷ ಕಾಡಿನಲ್ಲಿ ಇಂಥ ಅವಘಡಗಳು ನಡೆಯದಂತೆ ಮುಂಜಾಗ್ರತೆಯಾಗಿ ಅರಣ್ಯ ಇಲಾಖೆಯು ಕಾಡಿನ ಅಕ್ಕ-ಪಕ್ಕದ ಗ್ರಾಮಗಳ ಜನರಲ್ಲಿ ಕಾಡಿನ ಮಹತ್ವ ಮತ್ತು ಅದರ ಹಾನಿಯಿಂದ ಪರಿಸರದ ಮೇಲಾಗುವ ದುಷ್ಪರೀಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು ಅವಶ್ಯಕತೆ ಇದೆ.

ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಕಾರ್ಯವನ್ನು ಪರಿಸರ ಪ್ರೇಮಿಗಳು, ಪ್ರಾಣಿ ದಯಾ ಸಂಸ್ಥೆಗಳು ಗಿಡ, ಮರಗಳಿಗೆ ನೀರಿನ ಅರೆವಟ್ಟಿಗೆಗಳನ್ನು ಕಟ್ಟುವುದು ಮಾತ್ರವಲ್ಲದೆ ಬಂಡೀಪುರ ಅಭಯಾರಣ್ಯದಂತ ಪ್ರದೇಶಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರನ್ನು ಹಾಕುವ ಕೆಲಸ ಮಾಡುತ್ತಾರೆ. ಬನ್ನಿ ನಾವು ಈ ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಮಾಡೋಣ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು