News Karnataka Kannada
Sunday, May 05 2024
ವಿಶೇಷ

ರಾಷ್ಟ್ರ ಧ್ವಜದ ಹರಿಕಾರ ಪಿಂಗಲಿ ವೆಂಕಯ್ಯ

Pingali Venkaiah, the pioneer of the national flag
Photo Credit : Wikimedia

ಪಿಂಗಲಿ ವೆಂಕಯ್ಯ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು. ಹೋರಾಟಗಾರರಾಗ ನೆನಪಿಸಿಕೊಳ್ಳುವುದಕ್ಕಿಂತಲು ಮುಖ್ಯ ವಾಗಿ ನಮ್ಮ ದೇಶದ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು.

ಇವರು ಆಗಸ್ಟ್ 2ರ 1876ರಲ್ಲಿ ಆಧ್ರಪ್ರದೇಶದ ಮಚಲಿಪಟ್ಟಣಂ ಬಳಿಯ ಭಟ್ಲಪೆನುಮಾರ್ರು ಎಂಬಲ್ಲಿ ಜನಿಸಿದರು. ತಂದೆ ಹನುಮಂತ ರಾಯುಡು ಹಾಗೂ ವೆಂಕಟ ರತ್ನಂ ಇವರ ಮಗನಾಗಿ ತೆಲುಗು ಬ್ರಾಹ್ಮಣ ಕುಟುಂಬದವರಾಗಿ ಜನಿಸಿದರು.

ತಮ್ಮ 19ನೇ ವಯಸ್ಸಿಗೆ ಬ್ರಿಟಿಷ್ ಭಾರತೀಯ ಸೇನೆಗೆ ಸೇರಿಕೊಂಡ ಇವರು 2ನೇ ಬೋಯರ್ ಯುದ್ಧದ ಸಮಯದಲ್ಲಿ ದಕ್ಷಿಣಾ ಆಫ್ರಿಕಾಕ್ಕೆ ನಿಯೋಜಿಸಲ್ಪಟ್ಟರು. ಇದೇ ಸಂದರ್ಭದಲ್ಲಿ ಪಿಂಗಲಿ ವೆಂಕಯ್ಯ ಅವರು ಮಹಾತ್ಮ ಗಾಂಧೀಜಿಯನ್ನು ಭೇಟಿಯಾಗಿದ್ದರು. ಈ ಯುದ್ಧದ ಸಮಯದಲ್ಲಿ ಸೈನಿಕರು ಬ್ರಿಟನ್ ರಾಷ್ಟ್ರ ಧ್ವಜಕ್ಕೆ ಯೂನಿಯನ್ ಜ್ಯಾಕ್ ಗೌರವ ಸಲ್ಲಿಸಬೇಕಾದಾಗ ಪಿಂಗಾಲಿ ವೆಂಕಯ್ಯ ಅವರಿಗೆ ಭಾರವು ಸಹ ಧ್ವಜವನ್ನು ಹೊಂದಬೇಕು ಎನ್ನುವುದನ್ನು ಅರಿತುಕೊಂಡರು.

1906ರಲ್ಲಿ ಕಲ್ಕತ್ತಾದಲ್ಲಿ ದಾದಾಬಾಯಿ ನವರೋಜಿ ಅವರ ನೇತೃತ್ವದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿವೇಶನದಲ್ಲಿ ಭಾಗವಹಿಸಿ ಕಾಂಗ್ರೆಸ್ ಸಭೆಗಳಲ್ಲಿ ಬ್ರಿಟಿಷ್ ಧ್ವಜಗಳನ್ನು ಬಳಸುವುದನ್ನು ವಿರೋಧಿಸಿದ ಕಾರಣ ಕಾಂಗ್ರೆಸ್ ಗಾಗಿ ಹೊಸ ಧ್ವಜವನ್ನು ಮಾಡಲು ಇದು ಪ್ರೇರೇಪಿಸಿತು.

1947ರ ಸಮಯದಲ್ಲಿ ವಿಜಯವಾಡಕ್ಕೆ ಮಹಾತ್ಮ ಗಾಂಧೀಜಿಯವರು ಆಗಮಿಸುವ ಸಂದರ್ಭದಲ್ಲಿ ಧ್ವಜವನ್ನು ವಿನ್ಯಾಸಗೊಳಿಸಿದರು. ಮತ್ತು ಗಾಂಧೀಜಿಯವರಿಗೆ ಅದನ್ನು ಉಡುಗೊರೆಯಾಗಿ ನೀಡಿದರು.

ಈ ಧ್ವಜವು ಮೊದಲು ಕಡು ಕೆಂಪು ಮತ್ತು ಹಸಿರು ಬಣ್ಣದಲ್ಲಿದ್ದು, ಕೆಂಪು ಹಿಂದೂಗಳನ್ನು ಪ್ರತಿನಿಧಿಇದರೆ, ಹಸಿರು ಬಣ್ಣವು ದೇಶದಲ್ಲಿರುವ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುತ್ತಿತ್ತು. ಇದರ ಜೊತೆಗೆ ಗಾಂಧೀಜಿಯವರ ಸಲಹೆಯ ಮೇರೆಗೆ ಭಾರತದಲ್ಲಿರುವ ಇತರ ಎಲ್ಲಾ ಧರ್ಮ ಮತ್ತು ಪಂಗಡಗಳನ್ನು ಪ್ರತಿನಿಧಿಸಲು ಬಿಳಿ ಬಣ್ಣವನ್ನು ಸೇರಿಸುವ ನಿರ್ಧಾರ ಮಾಡಲಾಯಿತು.

1921ರಿಂದ ಪಿಂಗಾಲಿ ವೆಂಕಯ್ಯ ಅವರ ಈ ಧ್ವಜವನ್ನು ಎಲ್ಲಾ ಕಾಂಗ್ರೆಸ್ ಸಭೆಗಳಲ್ಲಿ ಅನೌಪಚಾರಿಕವಾಗಿ ಬಳಸಲು ಪ್ರಾರಂಭಿಸಲಾಯಿತು.

ಪಿಂಗಾಲಿ ವೆಂಕಯ್ಯ ಅವರು ಉಪನ್ಯಾಸಕ, ಲೇಖಕ, ಭೂವಿಜ್ಞಾನಿ, ಶಿಕ್ಷಣ ತಜ್ಞ, ಕೃಷಿಕ ಹಾಗೂ ಬಹುಭಾಷಾಶಾಸ್ತ್ರಜ್ಞರಾಗಿದ್ದರು. ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಡಿಪ್ಲೋಮಾ ಪಡೆದ ಇವರು ಆಂಧ್ರ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಉರ್ದು, ಜಪಾನಿ ಭಾಷೆ ಸೇರಿದಂತೆ ಹಲವು ಭಾಷೆಗಳನ್ನು ಕಲಿತ್ತಿದ್ದರು. ಭೂ ವಿಜ್ಞಾನದ ಕುರಿತು ತಳ್ಳಿರಾಯ ಎಂಬ ಕೃತಿಯನ್ನು ಸಹ ಬರೆದಿದ್ದಾರೆ.

ಮಹಾತ್ಮಗಾಂಧಿಯವರ ಸಿದ್ದಾಂತಗಳ್ನು ಪಾಲಿಸಿಕೊಂಡು ಬಂದ ಪಿಂಗಾಲಿ ವೆಂಕಯ್ಯನವರು 1963ರಲ್ಲಿ ನಿಧನರಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು