News Karnataka Kannada
Sunday, April 28 2024
ಪರಿಸರ

ಪರಿಸರ ಸ್ನೇಹಿ ಹಾವುಗಳ ರಕ್ಷಣೆ ಅಗತ್ಯ: ಸ್ನೇಕ್ ನರೇಶ್

Eco-friendly snakes need to be protected: Snake Naresh
Photo Credit : News Kannada

ಜೀವ ಜಾಲದ ಪ್ರಮುಖ ಕೊಂಡಿಯಾದ ಸಮತೋಲನ ಹಾವುಗಳ ರಕ್ಷಣೆಯಾಗದಿದ್ದರೆ ಏರುಪೇರುಯಾಗುತ್ತದೆ ಎಂದು ಉರಗ ರಕ್ಷಕ ಸ್ನೇಕ್ ನರೇಶ್ ನುಡಿದರು.

ಅವರು ಉಪ್ಪಳ್ಳಿಯ ಮಾಡೆಲ್ ಇಂಗ್ಲೀಷ್ ಪ್ರೌಢಶಾಲೆಯಲ್ಲಿ ವಿಶ್ವ ವನ್ಯಜೀವಿ ದಿನಾಚರಣೆಯ ಅಂಗವಾಗಿ ಕಿಪ್ಲಿಂಗ್ ಸ್ಕೌಟ್ ಗೈಡ್ ದಳಗಳು ಆಯೋ ಜಿಸಿದ್ದ ರೈತಮಿತ್ರ ಉರಗ ವಿಷಯದ ಬಗ್ಗೆ ಪ್ರಾತ್ಯಕ್ಷತೆಯೊಂದಿಗೆ ಉಪನ್ಯಾಸ ನೀಡಿದರು.

ಕೇವಲ ಕೆಲವೇ ಹಾವುಗಳು ವಿಷಕಾರಿಯಾದವು ಮತ್ತು ಸಾಧಾರಣವಾಗಿ ಅವು ಕಚ್ಚಿದಾಗ ನಮ್ಮ ಸೇರುವ ದೇಹ ಮಾರಣಾಂತಿಕವಾಗಿರುವುದಿಲ್ಲ, ಆದರೂ ಅವುಗಳ ಬಗ್ಗೆ ಇರುವ ಭಯ ಮತ್ತು ಅನಾವಶ್ಯಕ ಆತಂಕದಿಂದ ಹೃದಯಘಾತ ದಿಂದ ಸಾಯುವವರೇ ಹೆಚ್ಚು ಎಂದರು.

ಹಾವುಗಳನ್ನು ಕಂಡಕೂಡಲೇ ಸಾಯಿ ಸಲು ಮುಂದಾಗಬಾರದು. ಪರಿಣಿತರನ್ನು ಕರೆಯಿಸಿ ಅವುಗಳನ್ನು ಹಿಡಿದು ರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಬೇಕು. ಅವ್ಯಾಹತವಾಗಿ ಆ ಮೂಕ ಪ್ರಾಣಿಗಳನ್ನು ನಿರ್ನಾಮ ಮಾಡುವುದರಿಂದ ಮುಂದೊಂದು ದಿನ ನಾವು ಆಹಾರವಿಲ್ಲದೆ ಸಾಯಬೇಕಾಗಿ ಬರಬಹುದು ಎಂದರು.

ಕಾಳಿಂಗ ಸರ್ಪ ಅತ್ಯಂತ ವಿಷಕಾರಿಯಾದರೂ ಅದರ ಕಡಿತದಿಂದ ಸತ್ತವರ ಸಂಖ್ಯೆ ಕೇವಲ ಐದು ಎಂದು ಅಂಕಿ ಅಂಶಗಳು ಹೇಳುತ್ತವೆ. ನಮಗೆ ಹಾವುಗಳನ್ನು ಕಂಡರೆ ಇರುವುದಕ್ಕಿಂತ ಅವುಗಳಿಗೆ ನಮ್ಮ ಭಯವಿರುತ್ತದೆ. ತಮಗೆ ಅಪಾಯವಿರಬಹುದು ಎನಿಸಿದಾಗ ಮಾತ್ರ ಕಚ್ಚಲು ಮುಂದಾಗುತ್ತದೆ ಎಂದರು.

ಹಾಲು ಕುಡಿಯುತ್ತವೆ, ಸೇಡು ತೀರಿಸಿಕೊಳ್ಳುತ್ತವೆ, ಬಾಲದಲ್ಲಿ ಹೊಡೆಯುತ್ತವೆ, ಕಣ್ಣಿಗೆ ಗುರಿ ಇಡುತ್ತವೆ ಎಂಬೆಲ್ಲ ಸುಳ್ಳು ಮಾಹಿತಿ ಅಥವಾ ಮೂಡನಂಬಿಕೆಗೆ ಕಿವಿ ಕೊಡಬೇಡಿ ಎಂದರು.ವಿಶ್ವ ವನ್ಯ ಜೀವಿ ದಿನದ ಮಹತ್ವದ ಬಗ್ಗೆ ಮಾತನಾಡಿದ ಶಾಲಾ ಮುಖ್ಯಸ್ಥ ಎಂ.ಎನ್ ಷಡಕ್ಷರಿ, ಹಾವುಗಳು ರೈತನ ಮಿತ್ರ. ಬಿಲಗಳಿಗೆ ನುಗ್ಗಿ ಇಲಿಗಳನ್ನು ತಿನ್ನುವ ಜೈವಿಕ ನಿಯಂತ್ರಣದಿಂದ, ಮೂಶಿಕಗಳು ಹಾಳುಗೆಡೆವುವ ನಮ್ಮ ಆಹಾರವನ್ನು ರಕ್ಷಿಸುತ್ತವೆ. ಒಂದು ಜೊತೆ ಇಲಿ, ಒಂದು ವರ್ಷದಲ್ಲಿ ಐನೂರಾಗುತ್ತದೆ, ಅವುಗಳು ತಿನ್ನುವ ಹಾಗೂ ಹಾಳು ಮಾಡುವ ಆಹಾರ ಅಪಾರ, ಪುರಾಣಗಳ ಕಾಲದಿಂದ ನಾಗದೇವತೆಯನ್ನು ಆರಾದಿಸುತ್ತಿದ್ದು, ಕಲ್ಲನಾಗರ ಕಂಡರೆ ಹಾಲನೆರೆ ಎಂಬುವರು ದಿಟನಾಗರ ಕಂಡರೆ ಕೊಲ್ಲೆಂಬುವರಯ್ಯ ಎನ್ನುವುದು ವಿಪರ್ಯಾಸ.

ಎಳೆಯ ವಯಸ್ಸಿನಿಂದಲೇ ಪರಿಸರದ ಬಗ್ಗೆ ಜ್ಞಾನ ಮತ್ತು ಪ್ರೀತಿ ಬೆಳೆಸಿಕೊಳ್ಳಬೇಕು. ವನ್ಯ ಪ್ರಾಣಿಗಳ ಉತ್ಪನ್ನಗಳನ್ನು ಕೊಳ್ಳದೆ ಇರುವುದು ಪರಿಸರ ಸಂರಕಣೆಯ ಮೊದಲ ಹೆಜ್ಜೆ ಎಂದರು.

ಹಾವುಗಳ ಬಗ್ಗೆ ವಿದ್ಯಾರ್ಥಿಗಳು ತಮಗಿದ್ದ ಸಂಶಯಗಳನ್ನು ಪ್ರಶ್ನೆ ಕೇಳುವುದರ ಮೂಲಕ ಪರಿಹರಿಸಿಕೊ ಂಡರು.ಅಗತಾನೇ ಹಿಡಿದಿದ್ದ ಒಂದು ನಾಗರ ಹಾವು ಮತ್ತು ಕೆರೆ ಹಾವುಗಳನ್ನು ತೋರಿಸಿ ಅವುಗಳ ಸ್ವಭಾವಗಳನ್ನು ವಿವರಿಸಿದರು. ಕೆರೆ ಹಾವನ್ನು ಮಕ್ಕಳು ಮತ್ತು ಶಿಕ್ಷಕರು ಮುಟ್ಟಿ ನೋಡುವುದರ ಮೂಲಕ ಭಯ ಮುಕ್ತರಾದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಯೋಗೀಶ್, ಮತ್ತಿತರ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು