News Karnataka Kannada
Thursday, May 02 2024
ಪರಿಸರ

ವಿಶ್ವದ ಪ್ರಮುಖ ಹಣ್ಣಿನ ಬೆಳೆ : ಬಾಳೆಹಣ್ಣು

World's leading fruit crop: Banana
Photo Credit : Pixabay

ವಿಶ್ವದ ಪ್ರಮುಖ ಹಣ್ಣಿನ ಬೆಳೆಯಲ್ಲಿ ಒಂದು ಬಾಳೆಹಣ್ಣು. ಇದು ಮುಸೇಸಿಯ ಕುಟುಂಬಕ್ಕೆ ಸೇರಿದೆ. ಉಷ್ಣವಲಯದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ ಮತ್ತು ಆ ಪ್ರದೇಶಗಳಲ್ಲಿ ಹೆಚ್ಚಾಗಿ ಸೇವನೆ ಮಾಡುತ್ತಾರೆ. ಈ ಹಣ್ಣಿನ ಸುವಾಸನೆ, ಇವುಗಳ ಪೌಷ್ಟಿಕಾಂಶದ ಮೌಲ್ಯ ಮತ್ತು ವರ್ಷವಿಡೀಯ ಲಭ್ಯತೆಯಿಂದಾಗಿ ಇದು ವಿಶ್ವದಾದ್ಯಂತ ಹೆಚ್ಚು ಪ್ರಚಲಿತದಲ್ಲಿದೆ.

ಸಾಮಾನ್ಯವಾಗಿ ಸಿಹಿ ಇರುವ ಬಾಳೆಹಣ್ಣುಗನ್ನು ತಾಜಾವಾಗಿಯೇ ತಿನ್ನಲಾಗುತ್ತದೆ. ಆದರೆ ಹಲವು ಬಾರಿ ಹೆಚ್ಚಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಪೈ, ಪ್ಯಾನ್‌ಕೇಕ್, ಬ್ರೆಡ್, ಪುಡ್ಡಿಂಗ್, ಹಾಗೂ ಕೇಕ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಬಾಳೆಹಣ್ಣುಗಳು ಸಿಹಿಗಿಂತ ಹೆಚ್ಚಾಗಿ ಪಿಷ್ಟದ ಅಂಶವನ್ನು ಹೊಂದಿದ್ದು, ಉಷ್ಣವಲಯದ ಪ್ರದೇಶದಲ್ಲಿ ಪ್ರಮುಖ ಆಹಾರದ ಬೆಳೆಯಾಗಿ ಬೆಳೆಸಲಾಗುತ್ತದೆ ಮತ್ತು ಸೇವಿಸಲಾಗುತ್ತದೆ. ಮಾಗಿದ ಹಣ್ಣಿನಲ್ಲಿ 22 ಪ್ರತಿಶತದಷ್ಟು ಕಾಬ್ರೋಹೈಡ್ರೇಟ್ಸ್ ಇರುತ್ತದೆ. ಹಾಗೂ ಪೋಟ್ಯಾಸಿಯಂ, ಮ್ಯಾಂಗನೀಸ್, ವಿಟಮಿನ್ ಬಿ6ಮತ್ತು ಸಿ ಅಧಿಕವಾಗಿರುತ್ತದೆ.

ಬಾಳೆಗಿಡದ ರಚನೆ

ಇದು ಒಂದು ದೈತ್ಯಾಕಾರದ ಗಿಡವಾಗಿದ್ದು ಭೂಮಿಯ ಅಡಿಯಿಂದ ಹೊರಬರುತ್ತದೆ. ಬಾಳೆಗಿಡದ ಕಾಂಡವು 3-6 ಮೀಟರ್ ಅಡಿಇದ್ದು ಗಿಡವನ್ನು ಎತ್ತರಕ್ಕೆ ರೋಪಿಸಲು ಸಹಕಾರಿಯಾಗಿದೆ. ಅಗಲವಾದ ಎಲೆಯನ್ನು ಹೊಂದಿದ್ದು, ನೇರಳೆ ಹಾಗೂ ಕೆಂಪು ಬಣ್ಣದ ತೊಗಟೆಗಳಿಂದ ರಕ್ಷಿಸಲ್ಪಟ್ಟ ಹಳದಿ ಬಣ್ಣದ ಹೂಗಳು ದೊಡ್ಡದಾಗಿ ಬಾಳೆಹಣ್ಣುಗಳು ಉತ್ಪತ್ತಿಯಾಗುತ್ತದೆ.

ಒಂದು ಬಾಳೆ ಗಿಡವು ಕೇವಲ ಒಂದೇ ಬಾಳೆಗೊನೆಯನ್ನು ಬಿಡುತ್ತದೆ. ಇದಾದ ನಂತರ ಆಗಿಡವನ್ನು ಕತ್ತರಿಸಲಾಗುತ್ತದೆ. ಒಂದು ಬಾಳೆಗಿದ ಇದ್ದ ಜಾಗದಲ್ಲಿ ಅವುಗಳ ಬೇರುಗಳ ಮೂಲಕ ಬೇರೆ ಸಣ್ಣ ಗಿಡಗಳು ಹುಟ್ಟಿಕೊಳ್ಳುತ್ತವೆ ಮತ್ತು ಅವುಗಳು ದೊಡ್ಡದಾಗುತ್ತಿದ್ದ ಹಾಗೆ ಮತ್ತೆ ಸಣ್ಣ ಗಿಡಗಳುಹುಟ್ಟುತ್ತವೆ. ಒಂದೇ ಬೇರುಕಾಂಡದ ಜೀವಿತಾವಧಿಯು ಹಲವು ವರ್ಷಗಳವರೆಗೆ ಮುಂದುವರಿಯುತ್ತದೆ.

ಭಾರತದಲ್ಲಿ ವಿಶೇಷ ದಿನಗಳಲ್ಲಿ ಬಾಳೆ ಗಿಡದ ಎಲೆಯಲ್ಲಿ ಊಟ ಮಾಡುವುದು ಒಂದು ವಿಶೇಷವಾಗಿದೆ. ಬಾಳೆಗಿಡದ ಎಲೆ, ಹೂ, ಕಾಂಡ, ಹಣ್ಣು ಹೀಗೆ ಇ ಗಿಡದ ಪ್ರತಿಯೊಂದು ಭಾಗಗಳು ಬಹಳ ಉಪಯುಕ್ತವಾಗಿದೆ.

ಹವಾಮಾನ

ಬಾಳೆ ಗಿಡಗಳು ತೇವಾಂಶವುಳ್ಳ ಉಷ್ಣವಲಯದ ಹವಾಮಾನದಲ್ಲಿ ಆಳವಾದ ಸಡಿಲವಾದ ಮಣ್ಣಿನಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ದಕ್ಷಿಣ ಜಮೈಕಾದಂತಹ ಆರೆ ಶುಷ್ಕ ಪ್ರದೇಶಗಳಲ್ಲಿಯೂ ನೀರಾವರಿ ಅಡಿಯಲ್ಲಿ ಯಶಸ್ವಿಯಾಗಿ ಬೆಳೆಸಲಾಗುತ್ತದೆ.

ಬಾಳೆಹಣ್ಣಿನ ಪ್ರೆಬೇಧಗಳು

ಏಲಕ್ಕಿ ಬಾಳೆಹಣ್ಣು, ರಸ್ತಾಲಿ ಬಾಳೆಹಣ್ಣು, ಪೂವನ್ ಬಾಳೆಹಣ್ಣು, ಮೊಂಥನ್ ಬಾಳೆಹಣ್ಣು, ಬೆಂಡಕಾಯಿ ಬಾಳೆಹಣ್ಣು, ಭೀಮ್ ಕೋಲ್ ಬಾಳೆಹಣ್ಣು, ನೇಂದ್ರ ಬಾಳೆಹಣ್ಣು, ಕೆಂಪು ಬಾಳೆಹಣ್ಣು, ತೆಲ್ಲ ಚಕ್ಕರಕೇಳಿ ಬಾಳೆಹಣ್ಣು, ಕರ್ಪೂರವಲ್ಲಿ ಬಾಳೆಹಣ್ಣು, ಮಲ್ಭೋಗ್ ಬಾಳೆಹಣ್ಣು, ಡ್ವಾರ್ಫ್ ಕ್ಯಾವೆಂಡೀಷ್ ಬಾಳೆಹಣ್ಣು, ರೋಬಸ್ಟಾ ಬಾಳೆಹಣ್ಣು ಇತ್ಯಾದಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು