ಮೈಸೂರು: ಚಿಕ್ಕ ಮಕ್ಕಳು ಜಾರು ಬಂಡೆಯಲ್ಲಿ ಜಾರುವುದನ್ನ ನೋಡಿದ್ದೇವೆ ಇಲ್ಲೊಂದು ಆನೆ ಮರಿ ಇಳಿ ಜಾರಿನಿಂದ ಇಳಿಯಲು ಜಾರು ಬಂಡೆಯ ಉಪಾಯ ಮಾಡಿರುವ ವಿಡಿಯೋ ಈಗ ಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಮೈಸೂರು ಮಡಿಕೇರಿ ಅರಣ್ಯ ಭಾಗದಲ್ಲಿ ಈಗ ಮಳೆಯಾಗುತ್ತಿದ್ದು, ಈ ಭಾಗದಲ್ಲಿ ಹೆಚ್ಚಿನ ಆನೆ ಸಂತತಿ ಇದ್ದು ಗುಂಪಿನಿಂದ ಬೇರ್ಪಟ್ಟ ಆನೆ ಮರಿಯೊಂದು ಇಳಿಜಾರಿನಲ್ಲಿ ಇಳಿಯಲು ಕಷ್ಟ ಪಟ್ಟು ಕೊನೆಗೆ ತನ್ನ ಮುಂದಿನ ಎರಡು ಕಾಲುಗಳನ್ನ ಮಂಡಿಯೂರಿ ಜಾರು ಬಂಡೆ ರೀತಿಯಲ್ಲಿ ಜಾರಿಕೊಂಡ ಇಳಿಯುತ್ತಿರುವ ಈ ವಿಡಿಯೋವನ್ನ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆಗೆದು ಸಮಾಜಿಕ ಜಾಲಾತಾಣಗಳಲ್ಲಿ ಹರಿಬಿಟ್ಟಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋ ಯಾವ ಸ್ಥಳದಲ್ಲಿ ತೆಗೆದದ್ದು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.