News Karnataka Kannada
Sunday, May 19 2024
ನುಡಿಚಿತ್ರ

ಹಿಮಾಲಯದಿಂದ ಬಂದ ನವರಂಗಿ!

Photo Credit :

ಹಿಮಾಲಯದಿಂದ ಬಂದ ನವರಂಗಿ!

ಮೈಸೂರು: ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಚಳಿಯನ್ನು ಸಹಿಸದ ಹೆಚ್ಚಿನ ಹಕ್ಕಿಗಳು ಉತ್ತರ ಭಾರತದಿಂದ ದಕ್ಷಿಣ ಭಾರತದತ್ತ ಬರುವುದು ಸಾಮಾನ್ಯವಾಗಿದೆ. ಹೀಗೆ ಬರುವ ಹಕ್ಕಿಗಳು ಒಂದಷ್ಟು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕಂಡು ಬರುತ್ತಿವೆ.

ಇದೀಗ ಗುಂಡ್ಲುಪೇಟೆಯ ವನ್ಯಜೀವಿ ಛಾಯಾಗ್ರಾಹಕರಾದ ಆರ್.ಕೆ.ಮಧು ಮತ್ತು ಚಿದಾನಂದ ಎಂಬುವರು ವಲಸೆ ಬಂದ ಹಕ್ಕಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುವುದಲ್ಲದೆ ಅವುಗಳ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಅವರ ಕ್ಯಾಮರಾ ಕಣ್ಣಿಗೆ ಹಿಮಾಲಯದ ಅಪರೂಪದ ಅತಿಥಿ ಸಿಕ್ಕಿ ಬಿದ್ದಿದೆ.

ಈಗಾಗಲೇ ಪಕ್ಷಿಗಳನ್ನು ಗುರುತಿಸಿ ಅವುಗಳ ಮಾಹಿತಿ ಕಲೆಹಾಕುತ್ತಿರುವ ಇವರಿಗೆ ಇದೀಗ ಮತ್ತೊಂದು ಪುಟ್ಟ ಹಕ್ಕಿ ಕಾಣ ಸಿಕ್ಕಿರುವುದದು ಸಂತೋಷ ತಂದಿದೆ. ಇವರ ಕಣ್ಣಿಗೆ ಕಾಣಸಿಕ್ಕಿರುವ ಹಕ್ಕಿಗಳ ಪೈಕಿ ಈಗಾಗಲೇ 4 ಚಿಕ್ಕ ಹಕ್ಕಿಗಳು ಹಿಮಾಲಯದಿಂದ ಗುಂಡ್ಲುಪೇಟೆಗೆ ಬಂದಿವೆ ಎನ್ನಲಾಗುತ್ತಿದೆ.

ಗುಂಡ್ಲುಪೇಟೆಯ ಕೆಬ್ಬೆಕಟ್ಟೆ ಹಳ್ಳದ ಕಾಲುವೆಯಲ್ಲಿ ಈ ಹಕ್ಕಿಗಳು ಕಂಡು ಬಂದಿದ್ದು, ಅದನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವಲ್ಲಿ ಮಧು ಮತ್ತು ಚಿದಾನಂದ ಯಶಸ್ವಿಯಾಗಿದ್ದಾರೆ. ಈ ಹಕ್ಕಿ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಅವರು ಈ ಹಕ್ಕಿಯ ಹೆಸರು ನವರಂಗಿ ಎಂದೂ, ಹಿಮಾಲಯದಿಂದ ಬಂದಿರುವುದಾಗಿ ಹೇಳಿದ್ದಾರೆ.

ಇಂಡಿಯನ್ ಪಿಟ್ಟಾ ಎಂಬ ಹೆಸರು ಇದಕ್ಕಿದೆ. ಪಿಟ್ಟ ಬ್ರಾಚಿಯುರಾ ವರ್ಗಕ್ಕೆ ಸೇರಿರುವ ಇದು ಮೈನಾ ಹಕ್ಕಿಯ ಗಾತ್ರವನ್ನು ಹೊಂದಿದೆ. ಬೆನ್ನ ಮೇಲೆ ಹಸಿರು, ನೀಲಿ, ಕಂದು, ಕಪ್ಪು ವರ್ಣ ಇದರದ್ದಾಗಿದೆ. ತಳಭಾಗದಲ್ಲಿ ಹಳದಿ, ಕೆಂಪು, ಕಿತ್ತಲೆ, ವರ್ಣ ಹೊಂದಿದ್ದರೆ ಕತ್ತು ಬಿಳಿಯಾಗಿದೆ. ಕಣ್ಣಬಳಿ ಕಪ್ಪುರೇಖೆ ಇದೆ. ಕಾಲು ಗುಲಾಬಿ ವರ್ಣವಿದೆ. ಸುಮಾರು ಒಂಬತ್ತು ಬಣ್ಣವನ್ನು ತನ್ನ ಮೈಮೇಲೆ ಎಳೆದುಕೊಂಡಿರುವ ಇವು ಬೆಳಗ್ಗೆಯಾಗುತ್ತಿದ್ದಂತೆಯೇ ಗೂಡು ಬಿಟ್ಟು ಬಂದರೆ ಸಂಜೆ 6ಗಂಟೆಗೆಲ್ಲ ಮತ್ತೆ ಗೂಡು ಸೇರುತ್ತವೆ. ಸಮಯಪಾಲನೆ ಮಾಡುವುದರಲ್ಲಿ ಇವು ಎತ್ತಿದಕೈ. ಸಂಜೆ 6 ಗಂಟೆಗೆ ಗುಂಪು ಸೇರಿ ಮರಗಳಲ್ಲಿ ವಾಸ್ತವ್ಯ ಹೂಡುತ್ತವೆ. ಹೀಗಾಗಿ ಇವುಗಳಿಗೆ ಸಿಕ್ಸ್ವೋ ಕ್ಲಾಕ್ ಬರ್ಡ್ ಎಂಬ ಅನ್ವರ್ಥ ನಾಮ ಇದೆಯಂತೆ.

ಹಿಮಾಲಯ ಪರ್ವತ ಪ್ರದೇಶ, ಈಶಾನ್ಯ ಭಾರತದಲ್ಲಿ ಇವು ಕಂಡು ಬರುತ್ತವೆ. ಚಳಿಗಾಲದಲ್ಲಿ ದಕ್ಷಿಣಭಾರತದ ಕಡೆ ವಲಸೆ ಬರುವ ಇವು ಮೇ ನಂತರ ತವರಿಗೆ ಮರಳಿ ಜೂನ್- ಅಕ್ಟೋಬರ್ ನಲ್ಲಿ ಹಿಮಾಲಯದಲ್ಲಿ ಸಂತನೋತ್ಪತ್ತಿ ಮಾಡುತ್ತವೆ. ನೆಲ ಅಥವಾ ಮರಗಿಡಗಳ ಕೆಳಗಿನ ಕೊಂಬೆಗಳಲ್ಲಿ ಗೂಡುಮಾಡಿ ನಾಲ್ಕೈದು ಮೊಟೆಯಿಟ್ಟು ಮರಿಮಾಉತ್ತವೆ. ಒಂದಷ್ಟು ದೂರ ಕುಪ್ಪಳಿಸಿ. ಮತ್ತೊಂದಷ್ಟು ದೂರ ಹಾರಾಡಿ ಆಹಾರ ಸಂಗ್ರಹಿಸುತ್ತವೆ. ಒಟ್ಟಾರೆ ಇವು ನಿರುಪದ್ರವಿಯಾಗಿದ್ದು, ಅಳಿವಿನಂಚಿನಲ್ಲಿವೆ ಎಂದರೆ ತಪ್ಪಾಗಲಾರದು…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು