News Karnataka Kannada
Saturday, May 11 2024
ವಿಶೇಷ

ಮುಂಬೈ: ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರಿಗೆ ಅಚ್ಚರಿ, ಬಾಲಕಿಯ ಹೊಟ್ಟೆಯಲ್ಲಿ ಕೂದಲಿನ ಉಂಡೆ

Mumbai girl's stomach gets a lump of hair in her abdomen, doctors surprised by surgery
Photo Credit : IANS

ಮುಂಬೈ:  ದಾದರ್‌ನ 10 ವರ್ಷದ ಬಾಲಕಿಯ ಹೊಟ್ಟೆಯಿಂದ 100 ಗ್ರಾಂ ತೂಕದ ಕೂದಲಿನ ಉಂಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ‘ಟ್ರೈಕೋಫಾಗಿಯಾಸ್’ ಎಂಬ ವಿಲಕ್ಷಣ ಅಸ್ವಸ್ಥತೆಯಿಂದ ಬಳಲುತ್ತಿರುವ ಕಿಯಾರಾ ಬನ್ಸಾಲ್ ಎಂಬ ಬಾಲಕಿ ಕೂದಲು ತಿನ್ನುವ ಅಭ್ಯಾಸವಿತ್ತು. ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಮಕ್ಕಳಿಗಾಗಿ ಪರೇಲ್‌ನಲ್ಲಿರುವ ಬಾಯಿ ಜೆರ್ಬೈ ವಾಡಿಯಾ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಮಕ್ಕಳ ಶಸ್ತ್ರಚಿಕಿತ್ಸಕ ಪರಾಗ್ ಕರ್ಕೇರ ಅವರು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಬಾಲಕಿಯ ಹೊಟ್ಟೆಯಲ್ಲಿ ಗಡ್ಡೆ ಇರುವುದು ತಿಳಿದು ಬಂದಿದೆ.

ನಾವು CT-ಸ್ಕ್ಯಾನ್ ನಡೆಸಿದ ವೇಳೆ ಟ್ರೈಕೋಬೆಜೋರ್’ ಅಥವಾ ಕೂದಲಿನ ರಾಶಿ ಸಣ್ಣಕರುಳಿನ ಭಾಗದಲ್ಲಿ ಕೂದಲಿನ ಉಂಡೆ ಇತ್ತು ಎಂದು ಅವರು ತಿಳಿಸಿದ್ದಾರೆ. ಕೂದಲು ಹೊಟ್ಟೆಯಲ್ಲಿ ಕರಗುವುದಿಲ್ಲವಾದ್ದರಿಂದ, ಅದು ಜೀರ್ಣಾಂಗ ವ್ಯವಸ್ಥೆಯಲ್ಲಿ ಉಳಿಯುತ್ತದೆ, ಮತ್ತು ನಂತರ ಅದು ಚೆಂಡಾಗಿ ಅಥವಾ ದ್ರವ್ಯರಾಶಿಯಾಗಿ ಬದಲಾಗುತ್ತದೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ ತಂಡವು ಕಿಯಾರಾ ಅವರ ಹೊಟ್ಟೆಯಿಂದ ಕೂದಲು ಉಂಡೆಯನ್ನು ತೆಗೆದುಹಾಕಲು ಎರಡು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿತ್ತು.
ಕಿಯಾರಾ ಅವರ ಈ ಅಭ್ಯಾಸದ ಬಗ್ಗೆ ಪೋಷಕರಿಗೂ ತಿಳಿದಿರಲಿಲ್ಲ, ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಕೂದಲಿನಿಂದಾಗಿ ಕರುಳಿನ ಅಡಚಣೆ, ಹೊಟ್ಟೆಯ ಗೋಡೆ ಮತ್ತು ಸಣ್ಣ ಕರುಳಿನಲ್ಲಿ ರಂಧ್ರಗಳಂತಹ ತೊಂದರೆಗಳಿಗೆ ಕಾರಣವಾಗಬಹುದು ಎಂದು ಕರ್ಕೇರಾ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು