News Karnataka Kannada
Sunday, April 28 2024
ಮನರಂಜನೆ

ಮುಂಬೈ: ದಿ ಕೇರಳ ಸ್ಟೋರಿ ಭಯಾನಕ ಕಥೆ ಕೇಳಿ ನಿದ್ದೆ ಮಾಡದ ಅದಾ ಶರ್ಮಾ

Adah Sharma who couldn't sleep after listening to the horror story of The Kerala Story
Photo Credit : By Author

ಮುಂಬೈ: ‘ಹಸೀ ತೋ ಫಸಿ’ ಮತ್ತು ‘ಕಮಾಂಡೋ 3’ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟಿ ಅದಾ ಶರ್ಮಾ ಅವರು ಸುದೀಪ್ತೋ ಸೇನ್ ನಿರ್ದೇಶಿಸಿರುವ ಚಿತ್ರ ‘ದಿ ಕೇರಳ ಸ್ಟೋರಿ’ಗೆ ಆಯ್ಕೆಯಾಗಿದ್ದಾರೆ.

ಕಥೆ ಕೇಳಿದ ನಂತರ ಕೆಲವು ರಾತ್ರಿ ನಿದ್ದೆ ಬರಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ. ಸೇನ್‌ ನನಗೆ “ನನಗೆ ಕಥೆಯನ್ನು ವಿವರಿಸಿದಾಗ ಅದು ತುಂಬಾ ಭಯಾನಕವಾಗಿತ್ತು, ನಾನು ಅದರ ಬಗ್ಗೆ ಯೋಚಿಸುತ್ತಾ ಕೆಲವು ರಾತ್ರಿಗಳು ನಿದ್ರೆ ಮಾಡಲಿಲ್ಲ. ನಾನು ಈ ರೀತಿಯ ಚಿತ್ರದಲ್ಲಿ ನಟಿಸಲು
ಅವಕಾಶ ಸಿಕ್ಕಿರುವುದಕ್ಕೆ ಸಿಕ್ಕಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ಇಸ್ಲಾಂಗೆ ಮತಾಂತರಗೊಂಡು ಇಸ್ಲಾಮಿಕ್ ಸ್ಟೇಟ್‌ಗೆ ಸೇರುವ ಮಲಯಾಳಿ ನರ್ಸ್ ಫಾತಿಮಾ ಬಾ ಪಾತ್ರದಲ್ಲಿ ಅದಾ ನಟಿಸುತ್ತಿದ್ದಾರೆ. ಕೇರಳದಿಂದ ನಾಪತ್ತೆಯಾದ ಮತ್ತು ನಂತರ ಐಎಸ್ ಭಯೋತ್ಪಾದಕರಾಗಿ ಮಾರ್ಪಟ್ಟ 32,000 ಮಹಿಳೆಯರಲ್ಲಿ ಈಕೆಯೂ ಸೇರಿದ್ದಾಳೆ.

“ದಿ ಕೇರಳ ಸ್ಟೋರಿ ಒಂದು ಹಿಂದಿ ಚಿತ್ರ ಆದ್ದರಿಂದ ಅವರು ಹಿಂದಿ ಮತ್ತು ಮಲಯಾಳಂ ಮಾತನಾಡಬಲ್ಲ ಬಾಲಿವುಡ್ ನಟಿಯನ್ನು ಬಯಸಿದ್ದರು. ನಾನು ಮಲಯಾಳಿ, ಹಾಗಾಗಿ ನಾನು ಎರಡೂ ಭಾಷೆಗಳನ್ನು ಮಾತನಾಡುತ್ತೇನೆ ಹಾಗಾಗಿ ಆಯ್ಕೆ ಮಾಡಿಕೊಂಡಿರಬಹುದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು