ವೆಲ್ಲಿಂಗ್ಟನ್: ಯುವಕ – ಯುವತಿಯರ ಬ್ರೇಕ್ ಆಪ್ ಸಮಸ್ಯೆಗಳನ್ನು ಆಲಿಸಲು, ಸಲಹೆ ನೀಡಲು ನ್ಯೂಜಿಲೆಂಡ್ ಸರ್ಕಾರವು ‘ಲವ್ಬೆಟರ್’ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಸಚಿವರೊಬ್ಬರು ಬುಧವಾರ ಹೇಳಿದ್ದಾರೆ.
ಲವ್ಬೆಟರ್ ಅಭಿಯಾನ ಮೂಲಕ ಸರ್ಕಾರ ಬ್ರೇಕ್ ಅಪ್ ಮಾಡಿಕೊಂಡವರಲ್ಲಿ ಧನಾತ್ಮಕ ಯೋಚನೆಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂದು ನ್ಯೂಜಿಲೆಂಡ್ ಸಾಮಾಜಿಕ ಅಭಿವೃದ್ಧಿ ಮತ್ತು ಉದ್ಯೋಗದ ಸಹಾಯಕ ಸಚಿವ ಪ್ರಿಯಾಂಕಾ ರಾಧಾಕೃಷ್ಣನ್ ಹೇಳಿದ್ದಾರೆ.
ಕೌಟುಂಬಿಕ ಹಿಂಸೆ ಮತ್ತು ಲೈಂಗಿಕ ಹಿಂಸೆಯನ್ನು ತೊಡೆದುಹಾಕುವುದು ಈ ಅಭಿಯಾನದ ಮೂಲ ಉದ್ದೇಶ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. 1200 ಯುವಕ, ಯುವತಿಯರು ತಮ್ಮ ಪ್ರೀತಿಯಲ್ಲಿ ಉಂಟಾದ ನೋವು, ಬ್ರೇಕ್ ಅಪ್ ಸಮಯದಲ್ಲಿ ಸಾಂತ್ವನ, ಸಲಹೆ ಬೇಕೆಂದು ಕೇಳಿದ್ದಾರೆ ಎಂದು ರಾಧಾಕೃಷ್ಣನ್ ತಿಳಿಸಿದ್ದಾರೆ.