News Karnataka Kannada
Saturday, May 11 2024
ವಿದೇಶ

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ ಹೆದ್ದಾರಿಗಳಲ್ಲಿ ಇವಿ ಚಾರ್ಜಿಂಗ್‌ ಸ್ಟೇಶನ್‌, ಸಚಿವ ಹೇಳಿಕೆ

EV charging stations on New Zealand highways, says minister
Photo Credit : IANS

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನಲ್ಲಿ ಮೊದಲ ರಾಷ್ಟ್ರೀಯ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಸ್ಟೇಶನ್‌ ಆರಂಭವಾಗಿದೆ. ದೇಶದ ಪ್ರತಿಯೊಂದು ಪಟ್ಟಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಒದಗಿಸುವ ಯೋಜನೆಯನ್ನು ಅಲ್ಲಿನ ಸರ್ಕಾರ ರೂಪಿಸಿದೆ. ಹೆದ್ದಾರಿಗಳಲ್ಲಿ ಪ್ರತಿ 150-200 ಚಾರ್ಜಿಂಗ್ ಹಬ್‌ಗಳನ್ನು ಆರಂಭಿಸಲು ಚಿಂತಿಸಲಾಗಿದೆ.

ಕೈಗೆಟುಕುವ, ಅನುಕೂಲಕರ ಮತ್ತು ವಿಶ್ವಾಸಾರ್ಹವಾದ ವಿಶ್ವ ದರ್ಜೆಯ ಇವಿ ಮೂಲಸೌಕರ್ಯವನ್ನು ಹೊಂದುವುದು ನಮ್ಮ ಉದ್ದೇಶ ಎಂದು ಸಾರಿಗೆ ಸಚಿವ ಮೈಕೆಲ್ ವುಡ್ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

ಲಘು ವಾಹನಗಳಿಂದ ಮಾಲಿನ್ಯ ಹೊರಸೂಸುವಿಕೆಯು ನ್ಯೂಜಿಲೆಂಡ್‌ನಲ್ಲಿ ಹೆಚ್ಚಿದೆ. ಪರಿಸರ ಸ್ನೇಹಿ ಮತ್ತು ಮಿತವ್ಯಯವಾಗಿರುವ ಇವಿ ವಾಹನಗಳಿಗೆ ಉತ್ತೇಜಿಸುವುದು ಅಗತ್ಯ ಎಂದು ಅವರು ತಿಳಿಸಿದರು.

ಮುಖ್ಯ ಹೆದ್ದಾರಿಗಳಲ್ಲಿ ಪ್ರತಿ 150-200 ಕಿಮೀ ಪ್ರಯಾಣದ ಚಾರ್ಜಿಂಗ್ ಹಬ್‌ಗಳನ್ನು ಒದಗಿಸುವ ಗುರಿಗಳನ್ನು ಹೊಂದಿದೆ, ನಗರ ಪ್ರದೇಶಗಳಲ್ಲಿ ಪ್ರತಿ 20-40 ಇವಿಗಳಿಗೆ ಸಾರ್ವಜನಿಕ ಚಾರ್ಜರ್ ಮತ್ತು 2,000 ಅಥವಾ ಅದಕ್ಕಿಂತ ಹೆಚ್ಚಿನ ಜನರಿರುವ ಎಲ್ಲಾ ವಸಾಹತುಗಳಿಗೆ ಸಮುದಾಯ ಸೌಲಭ್ಯ ಹೊಂದಲು ನಿರ್ಧರಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು