News Karnataka Kannada
Thursday, May 02 2024
ವಿಶೇಷ

ವಿಶ್ವ ಆರೋಗ್ಯ ದಿನದಂದು ಸ್ವಚ್ಛ ಜೀವನಕ್ಕೆ ಆದ್ಯತೆ ನೀಡೋಣ

Let's give priority to clean living on World Health Day
Photo Credit : Freepik

ಏಪ್ರಿಲ್ 7ನ್ನು ವಿಶ್ವ ಆರೋಗ್ಯದಿನವಾಗಿ ಆಚರಿಸಲಾಗುತ್ತಿದೆ. ನಾವೆಲ್ಲರೂ ಖುಷಿಯಾಗಿ, ನೆಮ್ಮದಿಯಾಗಿರಬೇಕಾದರೆ ಆರೋಗ್ಯವಾಗಿರಬೇಕು. ಆರೋಗ್ಯವಾಗಿರಬೇಕಾದರೆ ಶಿಸ್ತುಬದ್ಧ ಸ್ವಚ್ಛ ಜೀವನ ಅಗತ್ಯವಾಗಿದೆ.

ನಾವು ಎಲ್ಲಿಗೆ ಹೋದರೂ ಮರಳಿ ಮನೆಗೆ ಬಂದ ಮೇಲೆಯೇ ಏನೋ ಒಂದು ರೀತಿಯ ತೃಪ್ತಿ. ಮನೆ ಹೇಗೆಯೇ ಇರಲಿ. ಅದು ನಮ್ಮ ಮನೆ. ಮನೆ ಅರಮನೆಯಾಗಿರಬೇಕಿಲ್ಲ. ಗುಡಿಸಲಾದರೂ ನಡೆಯುತ್ತದೆ. ಆ ಮನೆ ನಮಗೆ ಒಂದಷ್ಟು ನೆಮ್ಮದಿ, ವಿಶ್ರಾಂತಿ ನೀಡುವಂತಿದ್ದರೆ ಸಾಕು.

ಇವತ್ತು ನಮ್ಮನ್ನು ಕೆಲವು ರೋಗಗಳು ಕಾಡುತ್ತಿದ್ದರೆ ಅದಕ್ಕೆ ಕಾರಣ ನಮ್ಮ ಅಶುಚಿತ್ವ ಎಂದರೆ ತಪ್ಪಾಗಲಾರದು. ಆದುದರಿಂದ ಅಡುಗೆಮನೆ, ಸ್ನಾನ, ಶೌಚಾಲಯ ಎಲ್ಲವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲೂ ಮಕ್ಕಳಿರುವ ಮನೆಯಾದರೆ ಇನ್ನಷ್ಟು ಕಾಳಜಿಅಗತ್ಯ. ಹೊರಗೂ ಒಳಗೂ ದುಡಿಯುವ ಮಹಿಳೆಯರಿಗೆ ಮನೆ ಕೆಲಸ ಎನ್ನುವುದು ತಲೆನೋವು ತರುತ್ತದೆ. ಆದರೂ ಇರುವ ಕಾಲಾವಕಾಶದಲ್ಲಿ ಮನೆಯತ್ತವೂ ನಿಗಾ ವಹಿಸಲೇ ಬೇಕು.

ಬಹಳಷ್ಟು ಜನಕ್ಕೆ ಬೇರೆಯವರ ಮನೆಯಲ್ಲಿ ಇರುವುದೆಲ್ಲವೂ ನಮ್ಮ ಮನೆಗೆ ಬೇಕು. ಆದರೆ ಅದನ್ನು ಹೇಗಿಡಬೇಕೆಂಬುದೇ ಗೊತ್ತಿಲ್ಲ. ಸಿಕ್ಕಿದನೆಲ್ಲ ತಂದು ಸ್ಟೋರ್ ರೂಂ ರೀತಿ ಗುಡ್ಡೆ ಹಾಕುವುದಕ್ಕಿಂತ ಅಗತ್ಯ ವಸ್ತುಗಳನ್ನು ಮಾತ್ರ ಮನೆಗೆ ತರುವುದು ಉತ್ತಮ. ಮತ್ತು ಅವುಗಳನ್ನು ಜೋಡಿಸಿಡುವುದು ಕೂಡ ಕಲೆಯೇ. ಅಗತ್ಯವಿಲ್ಲದ ವಸ್ತು ತಂದು ಅವುಗಳನ್ನು ಎಲ್ಲೋ ಒಂದು ಕಡೆ ಇಟ್ಟು ಧೂಳು ಹಿಡಿಸೋದಕ್ಕಿಂತ ತರದಿರುವುದೇ ಉತ್ತಮ.

ಪ್ರತಿ ಮನೆಗೂ ಒಂದು ವಾಸನೆಯಿರುತ್ತದೆ. ಅದು ದುರ್ವಾಸನೆಯಾಗಬಾರದು. ಇತ್ತೀಚೆಗೆ ಮನೆಗಳು ಸುವಾಸನೆಯಿಂದ ಕೂಡಿರಲು ಹಲವು ಬಗೆಯ ರೂಂಪ್ರಷ್ನರ್‌ಗಳು ಬಂದಿವೆ. ಅವುಗಳನ್ನು ಬಳಸಬಹುದು. ಮನೆ ಸ್ವಚ್ಛವಾಗಿಲ್ಲಾಂದ್ರೆ ಜಿರಳೆ, ಇಲಿ, ತಿಗಣೆಗಳು ವಾಸ್ತವ್ಯ ಹೂಡಿಬಿಡುತ್ತವೆ. ಅವುಗಳಿಂದ ದೂರವಿರಬೇಕಾದರೆ ಮನೆಯನ್ನು ಚೊಕ್ಕಟವಾಗಿಡುವುದು ಒಳ್ಳೆಯದು.

ದೊಡ್ಡ ಬೆಲೆ ಬಾಳುವ ವಸ್ತುಗಳು ಮನೆಯನ್ನು ಅಲಂಕರಿಸಬಹುದು ಆದರೆ ಎಲ್ಲದಕ್ಕಿಂತ ಆರೋಗ್ಯ ಮುಖ್ಯ. ಅದು ಸಾಧ್ಯವಾಗಬೇಕಾದರೆ ಮನೆ ಸ್ವಚ್ಛವಾಗಿರಬೇಕಷ್ಟೆ.

ಆಫೀಸಿನಲ್ಲಿ ಕೆಲಸ ಮಾಡಿ ಸುಸ್ತಾಗಿರುತ್ತೇವೆ. ಇನ್ನೇನೋ ಕಾರಣಗಳಿಗೆ ದೇಹ ದಣಿದಿರುತ್ತದೆ ಆಗಲೆಲ್ಲಾ ಮನೆಗೆ ಹೋಗಿ ವಿಶ್ರಾಂತಿ ಪಡೆಯೋಣ ಎಂದುಕೊಳ್ಳುತ್ತೇವೆ. ಮನೆ ತಲುಪಿದ ಮೇಲೆ ಅಬ್ಬಾ ಎಂದು ನಿಟ್ಟುಸಿರು ಬಿಡುತ್ತೇವೆ. ಹೀಗಿರುವಾಗ ನಾವು ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದರಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುತ್ತದೆ.

ಮನೆ ಎನ್ನುವುದು ನಮ್ಮ ಹೊರಗಿನ ಎಲ್ಲ ಒತ್ತಡಗಳನ್ನು ದೂರ ತಳ್ಳಿ ಒಂದಷ್ಟು ನೆಮ್ಮದಿ ನೀಡುವ ತಾಣ ಮನೆ. ಇಂತಹ ಮನೆಯ ಬಗ್ಗೆ ಒಂದಷ್ಟು ಮುತುವರ್ಜಿ ವಹಿಸಿ ಸುಂದರವಾಗಿಟ್ಟುಕೊಂಡರೆ ಆರೋಗ್ಯ ವೃದ್ಧಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು