News Karnataka Kannada
Saturday, May 18 2024
ಲೇಖನ

ದೀಪಾವಳಿಯಂದು ಕರಾವಳಿಗರು ತಯಾರಿಸುವ ವಿಶೇಷ ತಿನಿಸುಗಳು

Special dishes prepared by the coastal people on Diwali
Photo Credit : Wikimedia

ದೀಪಗಳ ಹಬ್ಬ ದೀಪಾವಳಿಯನ್ನು ದೇಶದೆಲ್ಲೆಡೆ ವಿಭಿನ್ನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ ತುಳುನಾಡಿನಲ್ಲಿ ಇತರೆ ಹಬ್ಬಗಳಿಗಿಂತ ವಿಶಿಷ್ಟವಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ದೀಪಾವಳಿಯ ಮೂರೂ ದಿವಸವೂ ಒಂದೊಂದು ರೀತಿಯ ಆಚರಣೆಯಿದ್ದು ಸಂಪ್ರದಾಯಬದ್ಧವಾಗಿ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ.

ಹಿಂದೆ ಹಬ್ಬದ ಮೂರು ದಿನವೂ ವಿವಿಧ ರೀತಿಯಲ್ಲಿ ಪೂಜೆ ಮಾಡುವುದು ಸಂಪ್ರದಾಯವಾಗಿತ್ತು. ಮೊದಲನೆಯ ದಿನ ಸಲಕರಣೆಗಳೊಂದಿಗೆ ಅಕ್ಕಿ, ಅಚ್ಚು ಬೆಲ್ಲ, ತೆಂಗಿನಕಾಯಿ ಇಟ್ಟು ಪೂಜೆ ಮಾಡಿದರೆ ಎರಡನೇ ದಿನ ಅವಲಕ್ಕಿ, ಬೆಲ್ಲ ಮತ್ತು ಕೊನೆಯ ದಿನ ದೋಸೆ ಹಾಗೂ ಇತರೆ ತಿನಿಸುಗಳನ್ನಿಟ್ಟು ಪೂಜೆ ಮಾಡುವುದು ರೂಢಿಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಇದು ಬದಲಾಗಿ ದೀಪಾವಳಿಯ ಕೊನೆಯ ದಿನವಾದ ಬಲಿಪಾಡ್ಯಮಿಯಂದು ವಿಶೇಷ ತಿನಿಸುಗಳನ್ನು ತಯಾರಿಸಿ ಬಹಳ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತದೆ.

ಬೆಳಗ್ಗೆ ಬಿಸಿನೀರಿನ ಅಭ್ಯಂಜನ ಮುಗಿಸಿ ಬಂದೊಡನೆ ಕಷಾಯ ಕುಡಿದು ತಂಪಾಗುತ್ತಾರೆ. ಬಳಿಕ ಬೆಲ್ಲ ಹಾಗೂ ಅವಲಕ್ಕಿ ಮಿಶ್ರಣದ ವಿಶೇಷ ತಿನಿಸಿ ಜೊತೆಗೆ ಕುಂಬಳಕಾಯಿ ದೋಸೆ ಬೆಳಗ್ಗಿನ ಉಪಹಾರ ಇಲ್ಲಿನ ವಿಶೇಷತೆಗಳಲ್ಲೊಂದು. ಅರಿಶಿಣ ಎಲೆ ಕಡುಬು ಕರಾವಳಿ ಭಾಗದ ಜನಪ್ರಿಯ ತಿಂಡಿಗಳಲ್ಲೊಂದು. ಔಷಧೀಯ ಗುಣದ ಜೊತೆಗೆ ಕುಚ್ಚಲಕ್ಕಿ ಬಳಕೆ ಹಾಗೂ ಅರಿಶಿಣ ಎಲೆಯ ಪರಿಮಳದ ಕಾರಣಕ್ಕೆ ಈ ಕಡುಬು ವಿಶೇಷವಾದ ಸುವಾಸನೆ ಹಾಗೂ ರುಚಿಯನ್ನು ಹೊಂದಿರುತ್ತದೆ.

ಇನ್ನು ಈ ದೀಪಾವಳಿಯಂದು ಸಿಹಿ ತಿಂಡಿಗಳಿಗಂತೂ ಕೊರತೆಯೇ ಇಲ್ಲ. ಹೋಳಿಗೆ, ರವೆಲಾಡು, ಕರ್ಜಿಕಾಯಿ, ಪೇಡ,ಚಕ್ಕುಲಿ, ನಿಪ್ಪಟ್ಟು ಹೀಗೆ ವಿಶೇಷ ತಿನಿಸುಗಳು ಹಬ್ಬದ ಕಳೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು