News Karnataka Kannada
Friday, May 03 2024
ಲೇಖನ

ಆಧಾರ್-ಪಾನ್ ಜೋಡಣೆ ಸಂಬಂಧಿತ ಹೊಸ ವಂಚನೆಯ ಬಗ್ಗೆ ಹುಷಾರಾಗಿರಿ

Beware of new fraud related to Aadhaar-PAN linkage
Photo Credit : Pixabay

ದೇಶದಲ್ಲಿ ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಆಧಾರ್ ಕಾರ್ಡ್ ಮತ್ತು ಪರ್ಮನೆಂಟ್ ಅಕೌಂಟ್ ನಂಬರ್ (ಪಾನ್) ಕಾರ್ಡ್ ಲಿಂಡ್ ಅಥವಾ ಜೋಡಣೆ ದಿನಾಂಕ ಗಡುವು ಮಾರ್ಚ್‌ 31ರಿಂದ ಜೂನ್‌ 30ಕ್ಕೆ ವಿಸ್ತರಣೆಯಾಗಿದೆ. ಪ್ರಸ್ತುತ ಜೂನ್‌ 30ರವರೆಗೆ 1ಸಾವಿರ ರೂ. ದಂಡಕಟ್ಟಿ ಸಕ್ರಿಯಗೊಳಿಸಬಹುದು. ಈ ಗಡುವನ್ನು ಜೂನ್‌ 30ರವರೆಗೆ ವಿಸ್ತರಿಸಲಾಗಿದೆ.

ನಿಷ್ಕ್ರಿಯಗೊಂಡ ಪಾನ್ ಕಾರ್ಡನ್ನು ಪುನಃ ಸಕ್ರಿಯಗೊಳಿಸಲು 1000 ರೂಪಾಯಿ ದಂಡ ಕಟ್ಟಿ ಅವಕಾಶವಿದೆ.  ಈ ಗಡುವನ್ನು ಜೂನ್ 30ರವರೆಗೂ ವಿಸ್ತರಿಸ ಲಾಗಿದೆ. ಒಂದು ವೇಳೆ ಜೋಡಣೆ ಮಾಡದಿದ್ದರೆ ಪಾನ್ ಕಾರ್ಡ್ ರದ್ದಾಗಲಿದೆ, ಬ್ಯಾಂಕಿಂಗ್ ವ್ಯವ ಹಾರಗಳು ಸಾಧ್ಯವಾಗು ವುದಿಲ್ಲ. ಅಲ್ಲದೇ ಆದಾಯ ತೆರಿಗೆ ಪಾವತಿ ಮಾಡುವಾಗ ಶೇ.10ರಷ್ಟು ತೆರಿಗೆ ಹೆಚ್ಚು ಪಾವತಿ ಮಾಡಬೇಕು ಎಂಬ ಕಾರಣಕ್ಕಾಗಿ ಜನರು ಸಹ ಆತಂಕಗೊಂಡಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡ ವಂಚಕರು ಹಲವು ಸೈಬರ್‌ ಅಪರಾಧಗಳನ್ನು ಮಾಡುತ್ತಿದ್ದಾರೆ.

ವಂಚನೆ ಹೇಗೆ ಮಾಡುತ್ತಾರೆ : ನಿಮಗೆ ಮೊದಲು ಎಸ್‌ಎಂಎಸ್‌  ಅಥವಾ ವಾಟ್ಸಪ್ ಮೆಸೇಜ್ ಬರುತ್ತದೆ – ನೀವು ಆಧಾರ್ ಮತ್ತು ಪಾನ್ ಜೋಡಣೆ ಮಾಡಲು ಕೂಡಲೇ ಈ ಸಂಖ್ಯೆಗೆ ಕರೆ ಮಾಡಿ, ಇಲ್ಲದಿದ್ದರೆ ನಿಮ್ಮ ಪಾನ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುವುದು. ನೀವು ಹೆದರಿಕೊಂಡು ಕೊಟ್ಟಿರುವ ಸಂಖ್ಯೆಗೆ ಕರೆ ಮಾಡಿದರೆ , ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಸರ್ಕಾರಿ ಅಧಿಕಾರಿಯೆಂದು ಗುರುತಿಸಿಕೊಂಡು ತಮಗೆ ಜೋಡಣೆ ಮಾಡಲು ಸಹಾಯ ಮಾಡುತ್ತೇನೆಂದು ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್  ವಿವರವನ್ನು ವಾಟ್ಸಪ್‌ ಮೂಲಕ ಪಡೆಯುತ್ತಾನೆ.  ನಂತರ OTP ಪಡೆದು ಈ ಕಳಗಿನ ವಿಧದಲ್ಲಿ ನಿಮ್ಮನ್ನು ವಂಚಿಸುತ್ತಾನೆ.

1. ಸಂಸ್ಕರಣಾ ಶುಲ್ಕ ಅಂತ ಹೇಳಿ ಮುನ್ನೂರರಿಂದ ಸಾವಿರ ರೂಪಾಯಿವರೆಗೆ ತನ್ನ ನಂಬರಿಗೆ UPI ಮಾಡಿ ಎಂದು ಸೂಚಿಸುತ್ತಾರೆ.
2. ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಉಪಯೋಗಿಸಿ ಹೊಸ ಬ್ಯಾಂಕ್‌ ಖಾತೆಯನ್ನುಆರಂಭಿಸುತ್ತಾರೆ  ಬಳಿಕ ಮನಿ  ಲಾಂಡರಿಂಗಾಗಿ (ಅಕ್ರಮ ಹಣವರ್ಗಾವಣೆಗಾಗಿ) ಖಾತೆಯನ್ನು  ಬಳಸುತ್ತಾರೆ. ಆವೇಳೆ ನೀವು ಪೊಲೀಸರಿಗೆ ಸಿಕ್ಕಿ ಬೀಳುವ ಅಪಾಯವಿದೆ.

3. ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಬಳಿಸಿ ಸಾಲವನ್ನು ಅಥವಾ ಕ್ರೆಡಿಟ್ ಕಾರ್ಡನ್ನು ಪಡೆಯುತ್ತಾರೆ.
ವಂಚನೆಯಿಂದ ಹೇಗೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು :

1. ಆಧಾರ್ ಮತ್ತು ಪಾನ್ ಕಾರ್ಡನ್ನು ಜೋಡಿಸಲು ನೀವು WWW.incometax.gov.in ಜಾಲತಾಣವನ್ನು ಉಪಯೋಗಿಸಿ.  ಬೇರಾವಜಾಲತಾಣದ ಮೂಲಕ ಜೋಡಣೆ ಸಾಧ್ಯವಿಲ್ಲ.
2. ಯಾರೊ೦ದಿಗೂ ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡಿನ ಚಿತ್ರವನ್ನು ಹಂಚಿಕೊಳ್ಳಬೇಡಿ, ಹಾಗೊಂದು ರೀತಿ ಕೊಡಲೇಬೇಕಾದರೆ ಅದರ ಜೆರಾಕ್ಸ್ ರಾಪಿಯ ಚಿತ್ರವನ್ನು ಕೊಡಿ ಮತ್ತು ಯಾವ ಕಾರಣಕ್ಕೆ ಕೊಡುತ್ತಿರುವಿರೆಂದು ದಿನಾಂಕದೊಂದಿಗೆ ಬರೆಯಿರಿ,
3. ನಿಮ್ಮ ಹೆಸರು, ವಯಸ್ಸು ಅಥವಾ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಮತ್ತು ಪಾನ್ ಬದಲು ಡ್ರೈವಿಂಗ್ ಲೈಸನ್ಸ್‌ ಆಥವಾ ವೋಟರ್ ಐಡಿ ಬಳಸಿ.
4. ನಿಮ್ಮ ಸಿಬಿಲ್ ಸ್ಕೂಲ್ ಮತ್ತು ವರದಿಯನ್ನು ಹಾಗು incometax ಜಾಲತಾಣದಲ್ಲಿ AIS ವರದಿಯನ್ನು ನಿಯಮಿತವಾಗಿ  ಪರೀಕ್ಷಿಸುತ್ತಿರಿ.
6. ನೀವು ಆಧಾರ್ ಕಾರ್ಡಿನ ವರ್ಚುಯಲ್ ID ಯನ್ನು ಬೇಕೆಂದಾಗ ಆಧಾರ್ ಜಾಲತಾಣದಲ್ಲಿ ಸೃಷ್ಟಿಸಿ ದೃಢೀಕರಣಕ್ಕಾಗಿ ಬಳಸಿ ನಂತರ ಬದಲಿಸಬಹುದು. ನೀವು ಆಧಾರ್ ಕಾರ್ಡ್ ಪಡೆದ ಮೇಲೆ ಪಾನ್ ಕಾರ್ಡ್ ಮಾಯಿಸಿದ್ದರೆ, ಪುನಃ ಜೋಡಣೆಯ ಅವಶ್ಯಕತೆ ಇರುವುದಿಲ್ಲ.

ನೀವು ವಂಚನೆಗೆ ಒಳಗಾಗಿದ್ದರೆ: ಕೂಡಲೇ ನೀವು 1931 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ, ನಿಮ್ಮ ಆಧಾರ್ ಕಾರ್ಡನ್ನು uidai.gov.in ಜಾಲತಾಣದಲ್ಲಿ ಲಾಕ್‌ ಮಾಡಿ, ಅಕೌಂಟ್ ತೆರೆದ ಅಥವಾ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಕೊಟ್ಟ ಬ್ಯಾಂಕಿನಲ್ಲೂ ದೂರು ದಾಖಲಿಸಿ ಹಾಗು ಕಾನೂನು ಕ್ರಮ ಜರುಗಿಸಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು