News Karnataka Kannada
Thursday, May 02 2024
ವಿಶೇಷ

ವಿಶ್ವ ಭೂಮಿ ದಿನ: ಮನುಷ್ಯನ ಅಭಿವೃದ್ಧಿ ಭೂಮಿಗೆ ಕಂಟಕವಾಗದಿರಲಿ

World Earth Day: Let man's development not be a hindrance to the earth
Photo Credit : Pixabay

ಏಪ್ರಿಲ್‌ 22 ವಿಶ್ವ ಭೂಮಿ ದಿನ. ಈ ಭೂಮಿಯಲ್ಲಿ ಮನುಷ್ಯ ಮಾತ್ರವಲ್ಲ ಎಷ್ಟೋ ಜೀವ ಸಂಕುಲಗಳು, ಸೂಕ್ಷಾಣುಗಳು, ಸಸ್ಯಗಳು ಹೀಗೆ ಭೂಮಿ ತನ್ನ ಒಡಲಿನಲ್ಲಿ ಎಲ್ಲವನ್ನು ತುಂಬಿಕೊಂಡು ಜೀವ ರಾಶಿಗಳನ್ನು ಸಾಕಿ ಸಲುಹುತ್ತಿದೆ. ಆದರೆ ಈ ಭೂಮಿಯಲ್ಲಿ ಇರುವ ಜೀವಿಗಳಲ್ಲಿ ಭೂಮಿಗೆ ಕಂಟಕವಾಗಿರುವುದು ಮನುಷ್ಯ ಮಾತ್ರ.

ಆಧುನಿಕತೆ ಬೆಳೆದಂತೆ ಅದು ಭೂಮಿಗೆ ಕಂಟಕವಾಗುತ್ತಿದೆ, ಅದರ ವ್ಯತಿರಿಕ್ತ ಪರಿಣಾಮ ಈಗಾಗಲೇ ಅರಿವಾಗಿದೆ. ಭೂಮಿಗೆ ಕಂಟಕವಾದರೆ ಮನುಷ್ಯರಿಗೆ ಮಾತ್ರವಲ್ಲ, ಯಾವುದೇ ಜೀವಿಗಳಿಗೆ ಉಳಿಗಾಲವಿಲ್ಲ. ಈ ಭೂಮಿಯ ರಕ್ಷಣೆಯ ಬಗ್ಗೆ ಜಾಗ್ರತೆ ಮೂಡಿಸಲು ವಿಶ್ವ ಭೂಮಿ ದಿನವನ್ನು ಆಚರಿಸಲಾಗುವುದು.

ವಿಶ್ವ ಭೂಮಿ ದಿನದ ಇತಿಹಾಸ ಶ್ವ ಭೂ ದಿನವನ್ನು ಮೊದಲ ಬಾರಿಗೆ1970 , ಏಪ್ರಿಲ್ 22ರಂದು ಆಚರಿಸಲಾಯಿತು. 1969 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ UNSEO ಸಮ್ಮೇಳನದ ಸಮಯದಲ್ಲಿ, ಶಾಂತಿ ಕಾರ್ಯಕರ್ತ ಜಾನ್ ಮೆಕ್ ಕಾನ್ನೆಲ್ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಇದರ ಬಗ್ಗೆ ಪ್ರಸ್ತಾಪಿಸಿದರು. ವಿಶ್ವ ಭೂ ದಿನವನ್ನು ಮೊದಲು 1970 ಮಾರ್ಚ್‌ 21ರಂದು ನಡೆಸಲು ಪ್ರಸ್ತಾಪಿಸಲಾಗಿತ್ತು. ನಂತರ, ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಗೇಲಾರ್ಡ್ ನೆಲ್ಸನ್ 22 ಏಪ್ರಿಲ್ 1970 ರಂದು ರಾಷ್ಟ್ರವ್ಯಾಪಿ ಪರಿಸರ ಜ್ಞಾನೋದಯವನ್ನು ನಡೆಸಲು ಪ್ರಸ್ತಾಪಿಸಿದರು ಮತ್ತು ಅದನ್ನು ‘ಅರ್ಥ್ ಡೇ’ ಎಂದು ಮರುನಾಮಕರಣ ಮಾಡಿದರು. ಅಲ್ಲಿಂದ ವಿಶ್ವ ಭೂಮಿಯ ದಿನ ಆಚರಿಸಲಾಗುತ್ತಿದೆ.

ಈ ದಿನದ ಆಚರಣೆ ಇಂದಿಗೆ ಮಾತ್ರ ಸೀಮಿತವಲ್ಲ. ನಾವೆಲ್ಲಾ ಪ್ರತಿ ದಿನ ಪ್ರತಿಯೊಂದು ಕಾರ್ಯ ಮಾಡುವಾಗ ಭೂಮಿಯ ಬಗ್ಗೆ ಚಿಂತಿಸಬೇಕು. ಭೂಮಿಗೆ ಹಾನಿಯಾಗುವ ಕಾರ್ಯಗಳನ್ನು ಮಾಡಬಾರದು. ಈ ಭೂಮಿಯ ರಕ್ಷಣೆ ನಾವು ನಮ್ಮ ಮುಂದಿನ ಪೀಳಿಗೆಗೆ ಕೊಡುತ್ತಿರುವ ಅತೀ ಬೆಲೆ ಬಾಳುವ ಕೊಡುಗೆಯಾಗಿದೆ. ಆಸ್ತಿ, ಅಂತಸ್ತು ಏನೇ ಮಾಡಿದರೂ ಈ ಭೂಮಿ ಹಾಳಾದರೆ ಉಳಿಯಲು ಸಾಧ್ಯವೇ? ಆದ್ದರಿಂದ ಈ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ ಹಾಗೂ ಅನಿವಾರ್ಯವಾಗಿದೆ.

ಭೂಮಿಯ ದಿನದ ಮಹತ್ವವೇನು?
ಭೂಮಿಯ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಲು ಭೂ ದಿನದ ಈ ದಿನವನ್ನು ಮೀಸಲಿಡಲಾಗಿದೆ. ನಾವು ಎಲ್ಲಾ ಜೀವಿಗಳು ನಮ್ಮ ಜೀವನವನ್ನು ಭೂಮಿ ಎಂಬ ಸುಂದರ ಗ್ರಹದಲ್ಲಿ ಕಳೆಯುತ್ತೇವೆ. ಭೂಮಿಯು ನಮಗೆ ವಾಸಿಸಲು ಸ್ಥಳವನ್ನು ನೀಡುತ್ತದೆ ಮತ್ತು ಈ ಭೂಮಿಯಿಂದಾಗಿ ನಾವು ಆಹಾರ, ನೀರು ಮತ್ತು ಗಾಳಿಯನ್ನು ಸಹ ಪಡೆಯುತ್ತೇವೆ. ನಮ್ಮ ಭೂಮಿಯು ವಿಶ್ವದಲ್ಲಿ ಜೀವ ಇರುವ ಏಕೈಕ ತಿಳಿದಿರುವ ಗ್ರಹವಾಗಿದೆ. ಭೂಮಿಯ ಮೇಲಿನ ಜೀವವನ್ನು ಉಳಿಸಲು, ಭೂಮಿಯ ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಕೆಲವು ದಶಕಗಳ ಹಿಂದೆ ಭೂಮಿಯು ಸುಂದರ ಭೂಮಿಯಾಗಿತ್ತು ಆದರೆ ಇಂದು ಮಾಲಿನ್ಯದಿಂದಾಗಿ ಭೂಮಿ ಸುಂದರವಾಗಿಲ್ಲ, ದಿನದಿಂದ ದಿನಕ್ಕೆ ಮಾಲಿನ್ಯದ ಮಟ್ಟವು ಕ್ರಮೇಣ ಹೆಚ್ಚುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಈ ಭೂಮಿ ಸಂಪೂರ್ಣ ಅಪಾಯಕ್ಕೆ ಸಿಲುಕಿ ನಾಶವಾಗುವುದನ್ನು ತಡೆಯಲು ಸಾಧ್ಯವಿಲ್ಲ.

ದಿನದಿಂದ ದಿನಕ್ಕೆ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ, ಈ ಹಸಿರು ಭೂಮಿ ನಿಧಾನವಾಗಿ ನಾಶವಾಗುತ್ತಿದೆ, ಪರಿಸರ ನಮಗೆ ಸಾಕಷ್ಟು ನೀಡುತ್ತದೆ, ಆದರೆ ಪ್ರಸ್ತುತ ಪರಿಸರ ಮಾಲಿನ್ಯದಿಂದ ಕಲುಷಿತವಾಗುತ್ತಿದೆ. ಭೂಮಿಯ ಸಮತೋಲನ ಉಳಿಯಲು ನಾವೆಲ್ಲರೂ ಒಟ್ಟಾಗಿ ಈ ಪರಿಸರವನ್ನು ಉಳಿಸುವ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ.

ಭೂಮಿಯ ದಿನ 2023 ಥೀಮ್
ಭೂಮಿಯ ದಿನವು ಭೂಮಿಯ ಪರಿಸರವನ್ನು ಆಚರಿಸಲು ಮತ್ತು ಮಾಲಿನ್ಯದ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಗುರುತಿಸಲಾದ ವಾರ್ಷಿಕ ಕಾರ್ಯಕ್ರಮವಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜಾಗತಿಕ ಹವಾಮಾನ ಬಿಕ್ಕಟ್ಟನ್ನು ಸುಧಾರಿಸಲು ಪ್ರತಿ ವರ್ಷ ಏಪ್ರಿಲ್ 22 ರಂದು ದಿನವನ್ನು ಆಚರಿಸಲಾಗುತ್ತದೆ.

ಪ್ರತಿ ವರ್ಷವೂ ಒಂದು ಥೀಮ್ ಅನ್ನು ಭೂಮಿಯ ದಿನವನ್ನು ಆಚರಿಸಲು ನಿರ್ಧರಿಸಲಾಗುತ್ತದೆ ಮತ್ತು ಈ ವಿಷಯದ ಆಧಾರದ ಮೇಲೆ ಜನರಿಗೆ ಅರಿವು ಮೂಡಿಸಲಾಗುತ್ತದೆ. ಭೂಮಿಯ ದಿನದ 2023 ರ ಥೀಮ್ “ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ”. ನಮ್ಮ ಪರಿಸರವನ್ನು ಸುಧಾರಿಸಲು ಮತ್ತು ನಮ್ಮ ಭವಿಷ್ಯದ ಪೀಳಿಗೆಗೆ ಉತ್ತಮ ಮತ್ತು ಸುರಕ್ಷಿತ ಭವಿಷ್ಯವನ್ನು ನೀಡಲು ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಲು ಪ್ರಪಂಚದಾದ್ಯಂತದ ವ್ಯವಹಾರಗಳು, ಸರ್ಕಾರಗಳು ಮತ್ತು ನಾಗರಿಕರ ಅಗತ್ಯವನ್ನು ಎತ್ತಿ ತೋರಿಸಲು ಈ ಥೀಮ್ ಅನ್ನು ರಚಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು