News Karnataka Kannada
Monday, April 29 2024
ಆರೋಗ್ಯ

ಲಂಡನ್: ಬಗೆಹರಿಯದೆ ಉಳಿಯಲಿದೆ ಕೋವಿಡ್‌ ಮೂಲ, ಚೀನಿ ಮಾಜಿ ವಿಜ್ಞಾನಿ

Covid origin will remain unsolved, says former Chinese scientist
Photo Credit : IANS

ಲಂಡನ್: ಜಾಗತಿಕವಾಗಿ 763 ಮಿಲಿಯನ್‌ಗಿಂತಲೂ ಹೆಚ್ಚು ಸೋಂಕಿಗೆ ಒಳಗಾದ ಮತ್ತು 6.9 ಮಿಲಿಯನ್‌ಗಿಂತಲೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ಮಾರಣಾಂತಿಕ ಕೋವಿಡ್ ವೈರಸ್‌ನ ಮೂಲ ಎಂದಿಗೂ ಬಹಿರಂಗವಾಗುವುದಿಲ್ಲ ಎಂದು ಚೀನಾದ ಉನ್ನತ ವಿಜ್ಞಾನಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ಲಂಡನ್‌ನಲ್ಲಿ ನಡೆದ ರೋಡ್ಸ್ ನೀತಿ ಶೃಂಗಸಭೆಯಲ್ಲಿ ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (ಸಿಡಿಸಿ) ಮಾಜಿ ನಿರ್ದೇಶಕ ಡಾ ಜಾರ್ಜ್ ಫು ಗಾವೊ ಮೇಲಿನಂತೆ ಹೇಳಿದರು.

ಕುಖ್ಯಾತ ವುಹಾನ್ ಮಾರುಕಟ್ಟೆಯಲ್ಲಿ ಕೋವಿಡ್ ಮೂಲವು ರಕೂನ್ ನಾಯಿಗಳಿಗೆ ಸಂಬಂಧಿಸಿರಬಹುದು ಎಂಬ ಇತ್ತೀಚಿನ ಅಧ್ಯಯನವನ್ನು ಅವರು ನಿರಾಕರಿಸಿದರು. ಪ್ರಾಣಿಗಳಿಂದ ವೈರಸ್ ಹೊರಹೊಮ್ಮಿದೆ ಎಂದು ತೋರಿಸಲು “ಯಾವುದೇ ಪುರಾವೆಗಳಿಲ್ಲ” ಎಂದು ಗಾವೊ ಹೇಳಿದರು ಎಂದು ಡೈಲಿ ಮೇಲ್ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು