ಕಾಲ ಬದಲಾಗುತ್ತಿರುವಂತೆ ಜನರು ಬದಲಾಗುತ್ತಿದ್ದಾರೆ. ಆಹಾರ ಶೈಲಿಯಿಂದ ಹಿಡಿದು ನಾವು ಉಡುವ ಉಡುಪು ಹಾಗೂ ತಿನ್ನುವ ಆಹಾರಗಳು ಬದಲಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮದುವೆಗೆ ನೀಡುವ ಆಮಂತ್ರಣ ಪ್ರತಿಕೆ ವಿಭಿನ್ನವಾಗಿರದಿದ್ದರೆ ಹೇಗೆ ತಾನೆ ಸರಿ ಹೋಗುತ್ತದೆ.
ಅಂತಹುದೆ ಮದುವೆ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಝೀಲಾರಸನ್ ಹಾಗೂ ವಸನಂತಕುಮಾರಿ ಅವರ ವಿಶೇಷ ಮದುವೆ ಆಮಂತ್ರಣ ಪ್ರತಿಕೆಗೆ ಹಲವಾರು ಮೆಚ್ಚುಗೆಗಳು ಬರುತ್ತಿದೆ.
ಸಾಮಾನ್ಯವಾಗಿ ಮದುವೆ ಪ್ರತಿಕೆಗಳು ಕಾಗದದಲ್ಲಿ ವಿನ್ಯಾಸಗೊಳಿಸಿ ಮುದ್ರಿಸಿದರೆ ಇಲ್ಲೊಬ್ಬ ವೈದ್ಯರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಟ್ಯಾಬೆಲ್ಟ್ ಕವರ್ ರೀತಿಯಲ್ಲಿ ಮುದ್ರಿಸಿದ್ದಾರೆ. ಹೌದು ಕೇಳಲು ಆಶ್ಚರ್ಯವಾದರೂ ನಿಜ ತಮ್ಮ ಮದುವೆ ಕಾಗದವನ್ನು ಮಾತ್ರೆಗಳ ಕವರ್ ಹೇಗೆ ಇರುತ್ತದೆಯೋ ಅದೇ ರೀತಿಯಾಗಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ತಯಾರಿಸಿದ್ದಾರೆ.
ಮಾತ್ರೆಯ ಕವರ್ ಹಿಂದಿನ ಭಾಗದಲ್ಲಿ ಒಂದು ಮಾತ್ರೆಯ ಯಾವೆಲ್ಲಾ ವಿಷಯಗಳು ಎಲ್ಲಿ ಇರುತ್ತದೆಯೋ ಅಲ್ಲೆಲ್ಲ ಅವರ ತಮಗೆ ಸಂಬಂಧಿಸಿದ ವಿಷಯಗಳನ್ನು ಮುದ್ರಿಸಿದ್ದಾರೆ. ಉದಾಹರಣೆಗೆ ಮಾತ್ರೆಗಳ ಎಕ್ಸ್ ಪೈರಿ ಡೇಟ್ಗಳಲ್ಲಿ ಮದುವೆಯ ದಿನಾಂಕ, ಸಮಯ ಮುದ್ರಿಸಲಾಗಿದೆ.
ಮಾತ್ರೆಗಳ ಕಂಪನಿ ಹೆಸರಿರುವಲ್ಲಿ ಮ್ಯಾನಿಫ್ಯಾಕ್ಚರ್ಡ್ ಬೈ ಎಂದು ಬರೆದು ಹೆತ್ತವರ ಹೆಸರನ್ನು ಮುದ್ರಿಸಿದ್ದಾರೆ. ಹಾಗೂ ಸೂಚನೆಯ ಬಳಿ ತಮ್ಮ ಎಲ್ಲಾ ಸ್ನೇಹಿತ ಹಾಗೂ ಸಂಬಂಧಿಕರು ತಪ್ಪದೆ ಮದುವೆಗೆ ಹಾಜರಾಗಬೇಕು ಎಂದೂ ಸಹ ಬರೆಯಲಾಗಿದೆ.
ಈ ರೀತಿಯಾಗಿ ವಿಭಿನ್ನ ರೀತಿಯಲ್ಲಿ ಮದುವೆಯ ಆಮಂತ್ರಣ ಪತ್ರಿಕೆಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ.