News Karnataka Kannada
Tuesday, May 07 2024
ವಿಶೇಷ

ವನ್ಯ ಜೀವಿ ಸಂರಕ್ಷಣೆಗೆ ರೈಲು ಹಳಿಗಳಲ್ಲಿ ‘ಯೂ’ ಆಕಾರದ ಕಂದಕಗಳ ನಿರ್ಮಾಣ

Construction of U-shaped trenches on railway tracks for wildlife conservation
Photo Credit : Pixabay

ಆಮೆ, ಸರಿಸೃಪ ಹಾಗೂ ವನ್ಯಜೀವಿಗಳ ಉಳಿವಿಗಾಗಿ ಪ್ರತಿ ದಿನವೂ ಒಂದಲ್ಲಾ ಒಂದು ರೀತಿಯ ಯೋಜನೆಗಳು ಜಾರಿಗೆ ಬರುತ್ತಿವೆ. ಇದರಿಂದ ಕಾಡಿನ ಪ್ರಾಣಿಗಳಿಗೆ ಹಲವಾರು ಪ್ರಯೋಜನಗಳು ಆಗಿವೆ ಈ ಸಾಲಿಗೆ ಇನ್ನೋಂದು ಮುಖ್ಯ ಯೋಜನೆ ಸೇರಿಕೊಳುವ ಸಾದ್ಯತೆ ಇದೆ ಅದುವೇ ರೈಲು ಹಳಿಗಳ ಅಡಿಯಲ್ಲಿ ‘ಯೂ’ ಆಕಾರದ ಕಂದಕಗಳ ನಿರ್ಮಾಣ.

ಕಾಡಿನ ಮಧ್ಯೆ ಮುಖ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಈ ‘ಯೂ’ ಆಕಾರದ ಕೊಳವೆಗಳ ನಿರ್ಮಾಣದಿಂದ ಹಲವು ಸಣ್ಣ ಪುಟ್ಟ ವಿಶೇಷ ಪ್ರಾಣಿಗಳನ್ನು ಬದುಕಿಸಬಹುದು. ಸಂತಾನೋತ್ಪತ್ತಿಗಾಗಿಯೋ ಅಥವಾ ಇನ್ನಾವುದೋ ಕಾರಣಗಳಿಗಾಗಿಯೋ ಪಶ್ಚಿಮ ಘಟ್ಟದ ಇತರ ಭಾಗಗಳಿಗೆ ವಲಸೆ ಹೋಗುವ ಆಮೆ, ಹಾವು, ಏಡಿ, ಹಲ್ಲಿಗಳು ತಮಗೆ ತಲುಪಬೇಕಾದ ಆವಾಸ ಸ್ಥಾನವನ್ನು ತಲುಪಬಹುದು. ಈ ಸಮಯದಲ್ಲಿ ಅವು ಹಳಿಗಳನ್ನು ದಾಟುವಾಗ ರೈಲುಗಳ ಅಡಿಯಲ್ಲಿ ಸಿಲುಕಿಕೊಂಡು ಜೀವ ಕಳೆದುಕೊಳ್ಳುತ್ತವೆ ಈ ಕಾರಣಕ್ಕಾಗಿ ರೈಲು ಹಳಿಗಳ ಕೆಳಭಾಗದಲ್ಲಿ ಯೂ ಆಕಾರದ ಕಂದಕಗಳನ್ನು ನಿರ್ಮಿಸಿದರೆ ಅವುಗಳ ಸಾವನ್ನು ಕಡಿಮೆಗೊಳಿಸಬಹುದು.

ವಿದೇಶಗಳಲ್ಲಿ ಈಗಾಗಲೆ ಈ ಯೋಜನೆ ಜಾರಿಯಲ್ಲಿದ್ದು ಹಲವಾರು ಪ್ರಾಣಿಗಳು ತಮ್ಮ ಪ್ರಾಣ ಕಳೆದುಕೊಳ್ಳದೆ ರೈಲ್ವೆಯನ್ನು ದಾಟುತ್ತಿವೆ. ಮಂಗಳೂರಿನ ವನ್ಯಜೀವಿ ಕಾರ್ಯಕರ್ತ ನಾಗರಾಜ್ ದೇವಾಡಿಗ ಈ ಕುರಿತು ಎಮ್‌ಒಎಫ್‌ಎಫ್‌ಸಿಸಿ ಸಚಿವ ಭೂಪೇಂದ್ರ ಯಾದವ್ ಅವರಿಗೆ ಈಗಾಗಲೇ ಪತ್ರ ಬರೆದಿದ್ದು, ನೈರುತ್ಯ ರೈಲ್ವೆ ಅಡಿಯಲ್ಲಿ ಬರುವ ಪುತ್ತೂರಿನ ಸಮೀಪದ ಕಬಕ ಮತ್ತು ಹಾಸನ ನಡುವೆ ೧೩೯ ಕಿಮೀ ಉದ್ದ ಈ ‘ಯೂ’ ಆಕಾರದ ಕಂದಕಗಳನ್ನು ನಿರ್ಮಿಸಲು ಒತ್ತಾಯಿಸಿದ್ದಾರೆ.

ಈ ವಿಷಯದ ಕುರಿತು ಪರಿಸರವಾದಿ ಹೋರಾಟಗಾರ ದಿನೇಶ್ ಹೊಳ್ಳ ನ್ಯೂಸ್ ಕನ್ನಡದ ಜೊತೆ ಮಾತನಾಡಿ ‘ರೈಲ್ವೆ ಇಲಾಖೆ ಇಂತಹ ಸೂಕ್ಷ್ಮ ವಿಚಾರಗಳಿಗೆ ಒತ್ತು ನೀಡುತ್ತಿರುವುದು ಬಹಳ ಒಳ್ಳೆಯ ವಿಚಾರ ಈ ದೊಡ್ಡ ಪ್ರಾಣಿಗಳ ಒಂದು ಪ್ರಾಮುಖ್ಯತೆ ಎಷ್ಟು ಇದೆಯೋ ಅಷ್ಟೆ ಪ್ರಾಮುಖ್ಯತೆ ಈ ಆಮೆ, ಸರಿಸೃಪಗಳಿಗೆ ನೀಡುವುದು ತುಂಬಾ ಉತ್ತಮ ವಿಷಯ. ಈ ‘ಯೂ’ ಆಕಾರದ ಕಂದಕ ನಿರ್ಮಾಣದಿಂದಾಗಿ ಅದೆಷ್ಟು ಸಣ್ಣ ವನ್ಯ ಜೀವಿಗಳ ಜೀವ ಉಳಿಯುವುದು ಖಂಡಿತ’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು