News Karnataka Kannada
Monday, April 29 2024
ಅಂಕಣ

ಮುಖದ ಅಂದ ಹೆಚ್ಚಿಸಲು ಬಳಸಿ ಈರುಳ್ಳಿ ಫೇಸ್ ಪ್ಯಾಕ್

Use onion face pack to enhance the beauty of the face
Photo Credit : Freepik

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಅದಕ್ಕಾಗಿ ನಾವು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನು ಹಚ್ಚಿಕೊಳ್ಳುತ್ತಾ ಇದ್ದರೆ, ಅದರಿಂದ ಅಡ್ಡ ಪರಿಣಾಮವೇ ಜಾಸ್ತಿ. ಅದರ ಬದಲು ನಾವು ಈರುಳ್ಳಿ ಬಳಸಿಕೊಂಡು ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಮುಖದ ಸೌಂದರ್ಯವನ್ನು ಕೆಡಿಸುವಂತಹ ಮೊಡವೆ ಸಮಸ್ಯೆ, ಬ್ಲಾಕ್ಹೆಡ್ಸ್, ಕಪ್ಪು ಕಲೆ, ಬಿಸಿಲಿನಿಂದ ಆಗುವಂತಹ ಟ್ಯಾನ್ ಇಂಥಹ ಸಮಸ್ಯೆಗಳಿಂದ ದೂರಾಗ ಬಹುದು.

ಈರುಳ್ಳಿ ಫೇಸ್ ಪ್ಯಾಕ್ ತಯಾರಿಸಲು ಈರುಳ್ಳಿಯನ್ನು ಜಜ್ಜಿ ರಸ ತೆಗೆದು ಅದಕ್ಕೆ ಲಿಂಬೆ ರಸ ಮಿಶ್ರಣ ಮಾಡಿ ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆದು ಕೊಳ್ಳಿ.

ಈರುಳ್ಳಿ ರಸಕ್ಕೆ ಜೇನುತುಪ್ಪ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿ ನಂತರ 15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಅಂದ ಹೆಚ್ಚುತ್ತದೆ.

ಈರುಳ್ಳಿ ರಸ ತಯಾರಿಸಿಕೊಂಡು ಅದಕ್ಕೆ ಸ್ಪಲ್ಪ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ಪಲ್ಪ ಸಮಯ ಹಾಗೆ ಬಿಟ್ಟು ನಂತರ ಚೆನ್ನಾಗಿ ಮುಖ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಈರುಳ್ಳಿಯನ್ನು ಗ್ರೈನ್ ಮಾಡಿ ಅಥವಾ ಜಜ್ಜಿ ರಸ ತೆಗೆದು ಅದಕ್ಕೆ ಕಡಲೆ ಹಿಟ್ಟು, ಹಾಲು ಮತ್ತು ಜಾಯಿಕಾಯಿ ಹುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ನಂತರ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಮುಖ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಕ್ರಮೇಣ ಹೆಚ್ಚುತ್ತದೆ.

ಈರುಳ್ಳಿಯನ್ನು ಗ್ರೈನ್ ಮಾಡಿ, ಅದರ ರಸವನ್ನು ತೆಗೆದಿಟ್ಟುಕೊಳ್ಳಿ. ನಂತರ ಆ ರಸಕ್ಕೆ ಅಕ್ಕಿ ಹಿಟ್ಟು, ಅಲೋವೆರಾ ಜೆಲ್ ಮತ್ತು ಕಾರ್ನ್‌ಫ್ಲೋರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ. ಹೀಗೆ ಮಾಡುವುದರಿಂದ ಮುಖದ ಅಂದ ಹೆಚ್ಚುತ್ತದೆ.

ಈರುಳ್ಳಿ ರಸ ತಯಾರಿಸಿಕೊಂಡು ಅದಕ್ಕೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮೊಡವೆ ಇರುವಲ್ಲಿಗೆ ಹಚ್ಚಿ ಹೀಗೆ ಮಾಡುವುದರಿಂದ ಮೊಡವೆಗಳು ಮಾಯವಾಗಿ ಮುಖದ ಸೌಂದರ್ಯ ಹೆಚ್ಚುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು