News Karnataka Kannada
Monday, April 29 2024
ಅಂಕಣ

ಸೀಬೆ ಹಣ್ಣಿನಲ್ಲಿದೆ ಸೌಂದರ್ಯ ವರ್ಧಕ ಗುಣ

Guava Fruit Face Pack
Photo Credit : Freepik

ಸೀಬೆ ಹಣ್ಣು (ಪೇರಳೆ ಹಣ್ಣು) ಎಲ್ಲರು ಇಷ್ಟ ಪಡುವಂತಹ ಹಣ್ಣು ಎಂದರೆ ತಪ್ಪಾಗಲಾರದು. ಏಕೆಂದರೆ ಇದು ತಿನ್ನಲು ರುಚಿ ಜೊತೆಗೆ ಈ ಸೀಬೆ ಹಣ್ಣಿನಲ್ಲಿ ಅಗಾಧವಾದ ಔಷಧೀಯ ಗುಣಗಳನ್ನು ಹೊಂದಿದೆ ಮಾತ್ರವಲ್ಲದೆ ಸೌಂದರ್ಯ ವೃದ್ಧಿ ಮಾಡುವಂತಹ ಗುಣಗಳನ್ನು ಹೊಂದಿದೆ. ಮುಖದಲ್ಲಿ ಕಾಣಿಸಿಕೊಳ್ಳುವ ಹಲವಾರು ಸಮಸ್ಯೆಗಳಿಗೆ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ಸೀಬೆ ಹಣ್ಣಿನ ಫೇಸ್ ಪ್ಯಾಕ್ ತಯಾರಿಸಲು ಕಲವೊಂದು ಟಿಪ್ಸ್ ಗಳು ಇಲ್ಲಿವೆ ನೋಡಿ.

ಸೀಬೆ ಹಣ್ಣಿನ ಫೇಸ್ ಪ್ಯಾಕ್ ತಯಾರಿ ಮಾಡಲು ಒಂದು ಹಸಿ ಸೀಬೆ ಹಣ್ಣನ್ನು ತೊಳೆದು ಅದರ ಸಿಪ್ಪೆ ಬೇರ್ಪಡಿಸಿ. ಆ ಬೇರ್ಪಡಿಸಿದ ಸಿಪ್ಪೆಯನ್ನು ಮಿಕ್ಸರ್ ನಲ್ಲಿ ಪೇಸ್ಟ್ ತಯಾರಿಸಿಕೊಂಡು ಆ ಪೇಸ್ಟ್ ಗೆ ಒಂದು ಚಮಚ ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮುಖದ ಮೇಲೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಮುಖದ ಕಾಂತಿ ಕ್ರಮೇಣ ಹೆಚ್ಚಾಗುತ್ತದೆ.

ಸೀಬೆ ಹಣ್ಣನ್ನು ಚೆನ್ನಾಗಿ ತುರಿದು ಹಿಂಡಿ ರಸ ತೆಗೆದುಕೊಳ್ಳಿ. ನಂತರ ಅದಕ್ಕೆ ನಿಂಬೆ ಹಣ್ಣಿನ ರಸ ಮತ್ತು ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮುಖದ ಮೇಲೆ ಈ ಫೇಸ್ ಪ್ಯಾಕ್ ಅನ್ನು ಹಚ್ಚಿ, ಸ್ವಲ್ಪ ಹೊತ್ತು ಒಣಗಲು ಬಿಟ್ಟು ನೀರಿನಿಂದ ಮುಖ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ.

ಮುಖದ ಕಾಂತಿ ಹೆಚ್ಚಿಸಲು ಸೀಬೆ ಹಣ್ಣನ್ನು ಸಣ್ಣಗೆ ಹೋಳುಗಲಾಗಿ ಮಾಡಿಕೊಂಡು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ಅದನ್ನು ಮುಖದ ಮೇಲೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಹೊಳಪು ಹೆಚ್ಚುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು