News Karnataka Kannada
Monday, April 29 2024
ಅಂಕಣ

ಕಾಂತಿಯುತ ತ್ವಚೆಗಾಗಿ ಬಳಸಿ ಹಾಗಲಕಾಯಿ ಫೇಸ್‌ಪ್ಯಾಕ್

Use bitter gourd face pack for glowing skin
Photo Credit : Freepik

ಹಾಗಲಕಾಯಿ ತಿನ್ನಲು ಕಹಿಯಾದರೂ ಇದು ಅನೇಕ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಅತ್ತ ಆರೋಗ್ಯದ ದೃಷ್ಟಿಯಿಂದ ನೋಡಿದಾಗಲೂ ಪ್ರಯೋಜನಕಾರಿ ಇತ್ತ ಸೌಂದರ್ಯದ ದೃಷ್ಟಿಯಿಂದಲೂ ಉಪಯೋಗಕಾರಿಯಾಗಿದೆ. ಇಂದು ನಾವು ಈ ಹಾಗಲಕಾಯಿ ಮುಖದ ಮೇಲಿನ ಸುಕ್ಕುಗಳು, ಮೊಡವೆಗಳು ಮತ್ತು ವಯಸ್ಸಿನ ಕಲೆಗಳನ್ನು ನಿವಾರಿಸಲು ಹೇಗೆ ಸಹಕಾರಿ ಎಂಬುದನ್ನು ತಿಳಿದುಕೊಳ್ಳೋಣ.

ಹಾಗಲಕಾಯಿ ಫೇಸ್‌ಪ್ಯಾಕ್ ತಯಾರಿಸಲು ಮೊದಲಿಗೆ, ಹಾಗಲಕಾಯಿ ರಸಕ್ಕೆ ಮೊಟ್ಟೆಯ ಹಳದಿ ಲೋಳೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಅದಕ್ಕೆ ಸ್ವಲ್ಪ ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಸ್ವಚ್ಛ ನೀರಿನಿಂದ ತೊಳೆದು ಕೊಳ್ಳಿ. ಹೀಗೆ ಕ್ರಮೇಣ ಮಾಡುವುದರಿಂದ ಮುಖದ ಮೇಲಿನ ಸುಕ್ಕು ಮಾಯವಾಗುತ್ತದೆ.

ಹಾಗಲಕಾಯಿಯನ್ನು ಚೆನ್ನಾಗಿ ಜಜ್ಜಿ ಅಥವಾ ಗ್ರೈನ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ ನಂತರ ಅದಕ್ಕೆ ಜೇನುತುಪ್ಪ ಮತ್ತು ಮೊಸರು ಸೇರಿಸಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಹೀಗೆ ಕ್ರಮೇಣ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಹಾಗಲಕಾಯಿ ಚೆನ್ನಾಗಿ ಗ್ರೈನ್ ಮಾಡಿ ಅದರ ರಸ ತೆಗೆದು ಕರಿಬೇವಿನ ಎಲೆಯನ್ನು ಜಜ್ಜಿ ಹಾಕಿ ಮಿಕ್ಸ್ ಮಾಡಿ. ನಂತರ ಈ ತಯಾರಾದ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ ಒಣಗಲು ಬಿಡಿ ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಮೇಲಿನ ಮೊಡವೆಗಳು ಮತ್ತು ಕಲೆಗಳು ಮಾಯವಾಗುತ್ತದೆ.

ಮುಖದ ಮೇಲಿನ ಕಲೆ ತೆಗೆದು ಹಾಕಲು ಹಾಗಲ ಕಾಯಿ ಜ್ಯೂಸ್ ಗೆ ಕಿತ್ತಳೆ ಹಣ್ಣಿನ ರಸ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ. ಅದು ಒಣಗಿದ ಮೇಲೆ ಮುಖವನ್ನು ತೊಳೆಯಿರಿ. ಇದರಿಂದ ಮುಖದ ಕಲೆ ನಿವಾರಣೆಯಾಗಿ ಅಂದ ಹೆಚ್ಚುತ್ತದೆ.

ಹಾಗಲಕಾಯಿ ಬೀಜಗಳನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿ. ನಂತರ ಅದಕ್ಕೆ ಜೇನುತುಪ್ಪ, ಮೊಸರನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯ ಹಾಗೆ ಬಿಡಿ ನಂತರ ಚೆನ್ನಾಗಿ ಮುಖ ತೊಳೆದುಕೊಳ್ಳಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು