News Karnataka Kannada
Sunday, April 28 2024
ಅಂಕಣ

ಮನೆಯ ಮೂಲೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬಹುದು

The corner of the house can be used in the right way
Photo Credit : Pixabay

ಮನೆಯಲ್ಲಿ ಲಭ್ಯವಿರುವ ಸ್ಥಳವಾಕಾಶವನ್ನು ಬಳಸಲು ಉತ್ತಮ ಪೂರ್ವಯೋಜಿತ ಯೊಚನೆಯ ಅವಶ್ಯಕ. ಅದೆಷ್ಟೊ ಮಂದಿ ತಮ್ಮ ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ತಂದು ಒಟ್ಟಿನಲ್ಲಿ ಮನೆಯ ತುಂಬ ಹರಡಿರುತ್ತಾರೆ.

ಇಲ್ಲಿ ಮನೆಯ ಸ್ಥಳಾವಕಾಶವನ್ನು ಫರ್ನಿಚರ್ ಗಳು ನುಂಗಿ ಅಚ್ಚುಕಟ್ಟುತನಕ್ಕೆ ಅಡ್ಡಿ ಉಂಟು ಮಾಡುತ್ತದೆ. ಮನೆಯು ಒಂದು ರೀತಿಯಲ್ಲಿ ಸ್ಟೋರ್ ರೂಮ್ ಅನಿಸಿಬಿಡುತ್ತದೆ.

ಅದಕ್ಕೆ ಮನೆಯ ಪ್ರತಿಯೊಂದು ಮೂಲೆಯನ್ನು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ಮನೆಯ ಮೂಲೆಗೆ ಸರಿಹೊಂದುವ ಫರ್ನಿಚರ್ ಗಳನ್ನು ಸೆಲೆಕ್ಟ್ ಮಾಡಿಕೋಳ್ಳಬೇಕು. ಜೋತೆಗೆ ಕರ‍್ಸ್ ಸೆಲೆಕ್ಷನ್ ಗೊಡೆಯ ಬಣ್ಣಕ್ಕೆ ತದ್ವಿರುದ್ಧವಾದ ಬಣ್ಣವಾದಲ್ಲಿ ಇನ್ನು ಉತ್ತಮ ಹಾಗೂ ಆಕರ್ಷಣೀಯ.

ಮನೆಯ ಮೂಲೆಯಲ್ಲಿ ಎತ್ತರದ ಪ್ರದೇಶದಲ್ಲಿ ಒಂದು ಸಣ್ಣಗಾತ್ರದ ಬುಕ್ ಕೇಸ್. ನಮ್ಮ ನೆಚ್ಚಿನ ಪುಸ್ತಕಗಳನ್ನು ಜೋಪಾನಾವಾಗಿ ಅಚ್ಚುಕಟ್ಟಾದ ರೀತಿಯಲ್ಲಿ ಜೋಡಿಸಿಡಲು ಸೂಕ್ತ.

ರಿಲಾಕ್ಸ್ ಆಗಿ ಕೂರಲು ನೀವು ಆಯ್ಕೆ ಮಾಡಿರುವ ಸ್ಥಳದಲ್ಲಿ ರಾಕಿಂಗ್ ಚೇರ್ ಅಥವಾ ಮೃದುವಾದ ಸೋಫಾವನ್ನು ತಮ್ಮಗಿಷ್ಟವಾದ ಆಂಗಲ್ ನಲ್ಲಿ ಜೋಡಿಸಬೇಕು.

ತೇಲುವ ಶೆಲ್ಫ್ ಗಳಲ್ಲಿ ಅದ್ಭುತ ವಿನ್ಯಾಸದ ಗ್ಲಾಸ್ ಗಳನ್ನು ಜೋಡಿಸಿ ಇಡಬಹುದಾಗಿದೆ. ಡೆಸ್ಕ್ಗಳನ್ನು ಜೋಡಿಸಬಹುದು. ರೀಡಿಂಗ್ ಟೇಬಲ್, ಕಂಪ್ಯೂಟರ್ ಟೇಬಲ್ ಹೀಗೆ ವಿಭಿನ್ನವಾಗಿ ಜೋಡಿಸಬಹುದಾಗಿದೆ. ಮನೆಯ ವಿಡೊಂ ಪಕ್ಕದಲ್ಲಿ ಸಂಪೂರ್ಣ ಹೊರಾಂಗಣದ ಚಿತ್ರಣವನ್ನು ನೋಡಿ ಕಾಫಿಯನ್ನು ಸವಿಯಲು ಲೈಟ್ ಆಗಿರುವ ಕುಶನ್ ಸೋಫಗಳನ್ನು ಸೆಟ್ ಮಾಡಿದರೆ ಉತ್ತಮ.

ಸ್ಟೊರೆಜ್‌ಗಾಗಿ ಸ್ಟಯಿಲೀಶ್ ಡ್ರಾಯರ್‌ಗಳನ್ನು ಮನೆಯ ಮೂಲೆಯಲ್ಲಿ ಇಟ್ಟಲ್ಲಿ ಫೈಲ್‌ಗಳನ್ನು , ಅಗತ್ಯ ವಸ್ತುಗಳನ್ನು ಇಡಲು ಸೂಕ್ತ ಸ್ಥಳ. ಮನೆಯ ಕೆಲಸಕ್ಕೆ ಬಳಸಲಾಗುವ ಪೊರಕ್ಕೆ, ನೆಲ ಒರೆಸಲು ಬಳಸುವ ಸಾಮಗ್ರಿಗಳನ್ನು ಅಚ್ಚು ಕಟ್ಟಾಗಿ ಜೋಡಿಸಿಡಬಹುದು. ಒಟ್ಟಿನಲ್ಲಿ ಮನೆಯ ಸ್ಥಳವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಲು ಪ್ಲಾನ್ ಅವಶ್ಯಕ. ಇಲ್ಲವಾದಲ್ಲಿ ಮನೆಯ ಸ್ಥಳವಕಾಶವನ್ನು ಮನೆಯ ಫರ್ನಿಚರಗಳು ನುಂಗುವುದರಲ್ಲಿ ಸಂದೇಹವಿಲ್ಲ. ಮನೆಯಲ್ಲಿ ಒಡಾಡಲು ಕಷ್ಟಕರವಾದಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು