ಬಾಗಲಕೋಟೆ: ಕಂಟ್ರಿ ಪಿಸ್ತೂಲ್ ನಿಂದ ಯುವನೊಬ್ಬ ಗಾಳಿಯಲ್ಲಿ ಗಂಡು ಹಾರಿಸಿದ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ತೇರದಾಳದಲ್ಲಿ ತಡರಾತ್ರಿ ನಡೆದಿದೆ. ಷಣ್ಮುಖ ಗದಡಿ ಎಂಬುವವರ ಪುತ್ರ ಮೋಹನ್ ಗದಡಿ ಎಂಬ ಯುವಕ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಯುವಕ ಮೋಹನ್ ಗದಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೋಹನ್ ಗದಡಿ ಎಂಬ ಯುವಕ ತನ್ನ ಮನೆಯ ಟೆರೆಸ್ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಿ ವಿಡಿಯೋ ಶೋಟ್ ಮಾಡಿಸಿದ್ದಾನೆ. ಈ ಘಟನೆ ಬಗ್ಗೆ ಸಮಗ್ರ ತನಿಖೆ ಆಗಬೇಕು ತಪ್ಪಿತಸ್ಥರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಇದರ ಜಾಲ ಬಯಲು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ