News Karnataka Kannada
Thursday, May 09 2024
ಅಂಕಣ

ಕೂದಲ ಸೌಂದರ್ಯ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ

Here's a tip to maintain hair beauty
Photo Credit : Freepik

ಸಾಮಾನ್ಯವಾಗಿ ಯುವತಿಯರು ಕೂದಲಿನ ಸೌಂದರ್ಯ ದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಏಕೆಂದರೆ ಕೂದಲು ಸೌಂದರ್ಯದ ಸಂಕೇತ ಎಂದರೆ ತಪ್ಪಾಗದು. ಆದರೆ ಇಂದು ಯುವತಿಯರಿಗೆ ಕೂದಲಿನ ಸಮಸ್ಯೆ ಅಗಾಧವಾಗಿ ಕಾಡುತ್ತಿದೆ. ಕೂದಲು ಉದುರುವುದು, ಕೂದಲ ತುದಿ ಎರಡು ಭಾಗವಾಗುವುದು ಹೀಗೆ ಹಲವಾರು ಸಮಸ್ಯೆಯನ್ನು ಇಂದಿನ ಯುವ ಪೀಳಿಗೆ ಅನುಭವಿಸುತ್ತಿದೆ. ಇಂತಹ ಸಮಸ್ಯೆಯಿಂದ ದೂರಾಗಿ ಕೂದಲ ಸೌಂದರ್ಯ ವೃದ್ಧಿಗೆ ಇಲ್ಲಿದೆ ಕೆಲವು ಸಲಹೆಗಳು.

ಕೂದಲನ್ನು ಆದಷ್ಟು ಅಗಲವಾದ ಹಲ್ಲಿನ ಬಾಚಣಿಗೆಗಳನ್ನುಬಳಸಸುವುದು ಸೂಕ್ತ. ಹೇರ್ ಕಟ್ ಮಾಡಿಸುತ್ತಾ ಇದ್ದರೆ ಒಳ್ಳೆಯದು. ಕೂದಲ ತುಡಿ ಎರಡು ಭಾಗವಾದರೆ ಅದನ್ನು ತೆಗೆದು ಹಾಕಬೇಕು. ಕೂದಲಿಗೆ ಹೊಂದಾಣಿಕೆಯಾಗದ ಶ್ಯಾಪೂ ಮತ್ತು ಕಂಡೀಶನರ್‌ಗಳನ್ನು ಬಳಸುವುದರಿಂದ ಕೂದಲಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಕೂದಲಿನ ಹೊಳಪನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಕೂದಲಿಗೆ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಳ್ಳದ ಶ್ಯಾಂಪುಗಳು ಮತ್ತು ಕಂಡಿಷನರ್‍ಗಳನ್ನು ಆರಿಸಿಕೊಳ್ಳುವುದು ಒಳಿತು.

ಕೂದಲು ಉದುರುವಿಕೆ ತಡೆಯಲು ದಾಸವಾಳದ ಕೆಲವು ಎಲೆಗಳನ್ನು ಜಜ್ಜಿಕೊಂಡು  ಇದಕ್ಕೆ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆ ಹಾಕಿ ಪೇಸ್ಟ್ ಮಾಡಿ ಕೊಂಡು ಕೂದಲಿಗೆ ಹಚ್ಚಿ ಉತ್ತಮ ರಿಸಲ್ಟ್ ಪಡೆರಬಹುದು.

ಇನ್ನು ಕೂದಲ ಸೌಂದರ್ಯ ವೃದ್ಧಿಗೆ ಮೊಟ್ಟೆಯು ಸಹಾಯ ಮಾಡುತ್ತದೆ. ಅದೇಗೆಂದರೆ, ಮೊಟ್ಟೆಯು ಕೂದಲನ್ನು ಬುಡದಿಂದಗಟ್ಟಿಗೊಳಿಸುತ್ತದೆ. ಇನ್ನು ಮೊಟ್ಟೆಯ ಬಿಳಿಭಾಗವನ್ನು ಕೂದಲ ಬುಡಕ್ಕೆ ಹಚ್ಚಿ ಸ್ಪಲ್ಪ ಹೊತ್ತು ಹಾಗೆ ಬಿಡಬೇಕು ಹೀಗೆ ಮಾಡುತ್ತಿದ್ದರು ಉತ್ತಮ ಫಲಿತಾಂಶ ಪಡೆಯಬಹುದು.

ಕೂದಲು ಸದೃಢವಾಗಿ ಬೆಳೆಯಲು ಅಲೊವೆರದ ತಿರುಳಿನೊಂದಿಗೆ ಗಟ್ಟಿಮೊಸರು ಮತ್ತು ತೆಂಗಿನ ಎಣ್ಣೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ತೊಳೆಯಿರಿ ಇದರಿಂದಲೂ ಒಳ್ಳೆಯ ರಿಸಲ್ಟ್ ಪಡೆಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು