News Karnataka Kannada
Sunday, April 28 2024
ಅಂಕಣ

ಗಾಂಭೀರ್ಯತೆಯ ನಡೆ ನಮ್ಮದಾಗಿಸಿ ಕೊಂಡು ಯಶಸ್ಸನ್ನು ಸಾಧಿಸೋಣ…

Sushma
Photo Credit : Freepik

ಇತ್ತೀಚೆಗಷ್ಟೇ ಕಾಡಾನೆ ರಸ್ತೆ ಉದ್ದಕ್ಕೂ ನಡೆಯುತ್ತಿತ್ತು. ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಮೈಕ್ ನಲ್ಲಿ ಎಚ್ಚರಿಕೆಯನ್ನು ನೀಡುತ್ತಾ ಸಾಗುತ್ತಿದ್ದರು. ವಿಶೇಷವೆನೆಂದರೆ ಕಾಡಾನೆಯು ತುಂಬಾನೇ ತಾಳ್ಮೆಯಿಂದ ನಡೆಯುತ್ತಿದ್ದದು.

ಊರ ಜನರೆಲ್ಲ ಕೆಕೇ ಹಾಕುತ್ತಿದ್ದರು ಆದರೆ ಆನೆಗೆ ಇದರ ಚಿಂತೆ ಇರಲಿಲ್ಲ, ಒಂದಷ್ಟು ಜನ ತಮ್ಮ ಮೊಬೈಲಿನಲ್ಲಿ ಈ ದೃಶ್ಯವನ್ನು ಸರೆಹಿಡಿಯುತ್ತಿದ್ದರು. ಆದರೂ ಯಾವುದೇ ಆಕ್ಷೇಪಣೆ ಆನೆಗಿರಲ್ಲಿಲ್ಲ. ತುಂಬಾನೇ ತಾಳ್ಮೆ ಘನತೆ ಗಾಂಭೀರ್ಯತೆಯಿಂದ ನಡೆಯುತ್ತಿತ್ತು.

ಸಾಮನ್ಯವಾಗಿ ಆನೆ ನಡೆಯುವುದೇ ಎಂದಾದರು ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ ಒಂದು ಗಾಂಭೀರ್ಯತೆಯು ಕಾಣುತ್ತದೆ. ತನ್ನ ಸುತ್ತ ಮುತ್ತ ಎನು ನಡೆಯುತ್ತಿದೆ ಎಂಬುದರನ ಅರಿವು ಇದಕ್ಕಿರಲ್ಲಿಲ್ಲ. ಇಲ್ಲಿ ನಾವು ಕಲಿಯಬೇಕಿರುವುದು ಸುತ್ತಮುತ್ತ ನಡೆಯುವ ಕೆಟ್ಟ ಸಂಗತಿಗಳು ಅದರಲ್ಲೂ ನಮ್ಮಗೆ ಪೂರಕವಾಗದಿರುವ ವಿಷಯಗಳು ಯಾವುದನ್ನು ಲೆಕ್ಕಿಸದೆ ಮುನ್ನಡೆಯುವುದು.

ನಮ್ಮ ಸುತ್ತ ಮುತ್ತ ಒಂದಿಷ್ಟು ಜನ ನಮ್ಮನೇ ಗುರಿಯಾಗಿಸಿಕೊಂಡು ಮಾತಾಡುವವರಿರುತ್ತಾರೆ. ಒಂದಿಷ್ಟು ಜನ ನಮ್ಮನೇ ಗಮನಿಸುತ್ತಿರುತ್ತಾರೆ. ನಮ್ಮ ನಡೆ, ನುಡಿ, ಬಟ್ಟೆ, ಮತ್ತೆ ನಮ್ಮ ಚಲನವಲಗಳನ್ನು ಗಮನಿಸಿ ನಮ್ಮ ಬಗ್ಗೆ ಒಂದಿಷ್ಟು ಕತೆ ಕಟ್ಟಿ ಮತಾನಾಡಿ ಮಜಾ ತಗೋಳ್ಳುವವರೆ ಹೆಚ್ಚು.

ನಮ್ಮ ಮೈ ಬಣ್ಣ, ಕಣ್ಣು, ತಲೆಕೂದಲು ಎಲ್ಲವು ಕೆಲವರಿಗೆ ಹಾಟ್ ಟಾಪಿಕ್. ನಿತ್ಯ ಬೆಳಗಾದರೆ ಕೆಲವರಿಗೆ ಕೆಲವರ ಬಗ್ಗೆ ತುಂಬಾನೇ ಕುತುಹಲ. ಇಲ್ಲಸಲ್ಲದ ವಿಚಾರದ ಬಗ್ಗೆ ಮಾತ್ತಾನಾಡುವುದು ಎಲ್ಲಿಲ್ಲದ ಖುಷಿ. ಇದು ನಮ್ಮಗೆ ತುಂಬಾನೇ ಕಿರಿಕಿರಿ ಉಂಟುಮಾಡಬಹುದು. ಮನನೊಂದು ಕೋಳ್ಳುವಂತಹ ಸನ್ನಿವೇಶಗಳು ಪದೆಪದೆ ಬರಬಹುದು. ಇನ್ನು ಕೆಲವೊಮ್ಮೆ ಆತ್ಮವಿಶ್ವಾಸವನ್ನೇ ಕೊಲ್ಲಬಹುದು. ಇದೆನ್ನೆಲ್ಲ ಮೀರಿ ಬದುಕುವುದು ಒಂದು ಸಾಹಸವೇ ಸರಿ. ಇವನ್ನೆಲ್ಲ ಕಡೆಗಣಿಸಿ ಉನ್ನತಿಯತ್ತ ಹೆಜ್ಜೆ ಹಾಕುವುದು, ಪ್ರತಿಯೊಂದನ್ನು ಸವಾಲಾಗಿ ಸ್ವಿಕರಿಸಲು ಕಲಿಯಬೇಕು.

ಯಶಸ್ಸಿನ ದಾರಿ ಉದ್ದಕ್ಕು ಇಂತಹ ಅಡೆತಡೆಗಳು ಬೇಕಾದಷ್ಟು ಬರುತ್ತದೆ ಅದನ್ನೆಲ್ಲಾವನ್ನು ಮೀರಿ ನಡೆಯುವುದು ಆತ್ಮ ತೃಪ್ತಿಯನ್ನು ನೀಡುತ್ತದೆ. ಜೀವನದಲ್ಲಿ ಬರುವಂತಹ ಸಮಸ್ಯೆಗಳನ್ನು ಎದುರಿಸಲು ಆನೆ ನಡಿಗೆ ಉತ್ತಮ ಉದಾಹರಣೆಯಾಗಿದೆ.

ನಡೆದಷ್ಟು ಉದ್ದಕ್ಕು ಗಾಂಭೀರ್ಯತೆಯಿಂದ  ನಡೆಯಬೇಕು. ಅದರೆದೆ ಆದ ಘನತೆಯನ್ನು ಕಾಪಾಡಿಕೊಂಡು ಬದುಕುವುದು. ಸ್ವಾಭಿಮಾನ ಯಾವಾಗಲು ನಮ್ಮ ಪ್ರೇರಣಾ ಶಕ್ತಿಯಾಗಿರಲಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು