News Karnataka Kannada
Monday, April 29 2024
ವಿಶೇಷ

ನೆಲ್ಲಿಕಾಯಿ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information about the amla crop
Photo Credit : Pixabay

ಆಮ್ಲ ಅಥವಾ ಇಂಡಿಯನ್ ಗೂಸ್ ಬೆರಿಸ್ ಎಂದು ಕರೆಯಲ್ಪಡುವ ನೆಲ್ಲಿಕಾಯಿಯು ಹೆಚ್ಚಿನ ಔಷಧಿಯ ಮೌಲ್ಯವನ್ನು ಹೊಂದಿರುವ ಭಾರತದ ಪ್ರಮುಖ ಹಣ್ಣಿನ ಬೆಳೆಯಾಗಿದೆ.

ಈ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಸಿ ಅಂಶ ಹೊಂದಿದ್ದು ಇದು ಲಿವರ್ ನ ಉತ್ತಮ ಟಾನಿಕ್ ಎಂದು ಪರಿಗಣಿಸಲಾಗಿದೆ. ಈ ಹಣ್ಣಿನಿಂದ ಆಯಿಲ್ ಹೇರ್ ಡೈ ಶಾಂಪು ಫೇಸ್ ಕ್ರೀಮ್ ಮತ್ತು ಟೂತ್ ಪೌಡರ್ ನಂತಹ ವಿವಿಧ ಆರೋಗ್ಯ ರಕ್ಷಣಾ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇವುಗಳ ಜೊತೆಗೆ ಆಹಾರದಲ್ಲಿಯೂ ಕೂಡ ಉಪ್ಪಿನಕಾಯಿಯಾಗಿ ಅಥವಾ ಸಾಂಬಾರ್ ಅನ್ನು ತಯಾರಿಸಲು ಬಳಸುತ್ತಾರೆ .

ನೆಲ್ಲಿಕಾಯಿಗಳಿಗೆ ಹವಾಮಾನದ ಅವಶ್ಯಕತೆ : ನೆಲ್ಲಿಕಾಯಿ ಉಷ್ಣವಲಯದ ಸಸ್ಯವಾಗಿದ್ದು ಈ ಸಸಿಕೆ 630 ರಿಂದ 800 ಮಿಲಿಮೀಟರ್ ವಾರ್ಷಿಕ ಮಳೆಯ ಅಗತ್ಯವಿದೆ. ಮೂರು ವರ್ಷದತನಕ ಸಸ್ಯದ ಬೆಳವಣಿಗೆಗೆ ಮೇಜುನ್ ತಿಂಗಳಿನಲ್ಲಿ ಬೀಸುವ ಬಿಸಿ ಗಾಳಿಯಿಂದ ಮತ್ತು ಚಳಿಗಾಲದಲ್ಲಿ ಹಿಮದಿಂದ ರಕ್ಷಿಸಬೇಕಾಗುತ್ತದೆ ಪ್ರೌಢ ಸಸ್ಯಗಳು ಘನೀಕರಿಸುವ ತಾಪಮಾನವನ್ನು ಮತ್ತು 46 ಡಿಗ್ರಿ ಸೆಲ್ಸಿಯವರೆಗಿನ ಬಿಸಿ ತಾಪಮಾನವನ್ನು ಸಹಿಸಿಕೊಳ್ಳಬಲ್ಲವು.

ನೆಲ್ಲಿಕಾಯಿಗೆ ಮಣ್ಣಿನ ಅವಶ್ಯಕತೆ : ನೆಲ್ಲಿಕಾಯಿ ಕೃಷಿಗೆ ಸಂಪೂರ್ಣವಾಗಿ ಮರಳು ಮಣ್ಣನ್ನು ಹೊರತುಪಡಿಸಿ ಹಗುರವಾದ ಮತ್ತು ಮಧ್ಯಮ ಭಾರವಾದ ಮಣ್ಣು ಸೂಕ್ತವಾಗಿದೆ. ಮರವು ಶಿಷ್ಟ ಪ್ರದೇಶಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಿದೆ ಮತ್ತು ಮಧ್ಯಮ ಕ್ಷಾರಿಯ ಮಣ್ಣಿನಲ್ಲಿಯೂ ಸಹ ಬೆಳೆಯಬಹುದು.

ನೆಲ್ಲಿಕಾಯಿ ಗಿಡದ ನಟಿ ವಿಧಾನ: ನೆಲ್ಲಿಕಾಯಿ ಸಸಿಗಳನ್ನು ನಾಟಿ ಮಾಡಲು ಮೇ ಜೂನ್ ಅವಧಿಯಲ್ಲಿ 4.5 ಮೀಟರ್ ಅಂತರದಲ್ಲಿ ಅಗೆಯಬೇಕು. ಹಾಗೂ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಂತೆ 10 ರಿಂದ 15 ದಿನಗಳವರೆಗೆ ಹೊಂಡಗಳನ್ನು ಹಾಗೆ ಬಿಡಬೇಕು. ಸಸಿಗಳನ್ನು ನಾಟಿ ಮಾಡುವ ಮೊದಲು ಪ್ರತಿ ಹೊಂಡಕ್ಕೆ ಹೊಲ ಗೊಬ್ಬರ ಮತ್ತು ರಂಜಕವನ್ನು ಬೆರೆಸಿ ಮೇಲ್ಮೈ ಮಣ್ಣಿನಿಂದ ತುಂಬಿಸಬೇಕು.

ನೆಲ್ಲಿಕಾಯಿ ಸಸಿಗಳಿಗೆ ನೀರಿನ ಅವಶ್ಯಕತೆ : ಅಳಿಯ ನೆಲ್ಲಿಕಾಯಿ ಸಸ್ಯಗಳಿಗೆ ಬೇಸಿಗೆ ತಿಂಗಳಲ್ಲಿ 15 ದಿನಗಳ ಮಧ್ಯಂತರದಲ್ಲಿ ನೀರು ಹಾಕುವುದು ಅಗತ್ಯವಾಗಿರುತ್ತದೆ. ಮಾನ್ಸೂನ್ ಮಳೆಯ ನಂತರ ಅಕ್ಟೋಬರ್ ಡಿಸೆಂಬರ್ ಅವಧಿಯಲ್ಲಿ ಪ್ರತಿ ಮರಕ್ಕೆ ಹನಿ ನೀರಾವರಿ ಮೂಲಕ ದಿವಸಕ್ಕೆ ಸುಮಾರು 25 ರಿಂದ 30 ಲೀಟರ್ ನೀರನ್ನು ನೀಡಬೇಕು ಹನಿ ನೀರಾವರಿ ಆಮ್ಲ ಸಸ್ಯಗಳಿಗೆ ನೀರುಣಿಸಲು ಉತ್ತಮ ಮಾರ್ಗವಾಗಿದೆ.

ಅಂತರ ಬೇಸಾಯವಾಗಿ ನೆಲ್ಲಿಕಾಯಿ: ಹಸಿ ಬೇಳೆ ಕಾಳು ಗೋವಿನ ಜೋಳ ಮತ್ತು ಹುರುಳಿ ಕಾಳುಗಳಂತಹ ಅಂತರ ಬೆಳೆಯನ್ನು ಆಮ್ಲ ಬೇಸಾಯದಲ್ಲಿ ಎಂಟು ವರ್ಷಗಳ ವರೆಗೆ ಬೆಳೆಯಬಹುದು.

ನೆಲ್ಲಿಕಾಯಿಯ ಕೊಯ್ಲು: ನೆಲ್ಲಿಕಾಯಿ ಸಸ್ಯಗಳು ನೆಟ್ಟ ಸುಮಾರು ನಾಲ್ಕರಿಂದ ಐದು ವರ್ಷಗಳ ನಂತರ ಫಲ ನೀಡಲು ಪ್ರಾರಂಭಿಸುತ್ತವೆ. ಹಣ್ಣುಗಳು ತಿಳಿ ಹಸಿರು ಬಣ್ಣದಿಂದ ಮಂದ ಹಸಿರು ಹಳದಿ ಬಣ್ಣಕ್ಕೆ ಬಂದಾಗ ಫೆಬ್ರವರಿಯಲ್ಲಿ ಕೊಯ್ಲು ಮಾಡಲಾಗುತ್ತದೆ.

ನೆಲ್ಲಿಕಾಯಿ ಆರೋಗ್ಯ ಪ್ರಯೋಜನಗಳು: ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಸೌಂದರ್ಯ ಮತ್ತು ಆರೋಗ್ಯ ವೃದ್ಧಿ ಸೇರಿದಂತೆ ಹತ್ತಾರು ಪ್ರಯೋಜನಗಳಿವೆ. ಆಯುರ್ವೇದದ ಪ್ರಕಾರ ನೆಲ್ಲಿಕಾಯಿ ನಿಯಮಿತ ಸೇವನೆಯಿಂದ ಕೂದಲು ಉದುರುವಿಕೆ ಅಸಿಡಿಟಿ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಬಹುದು ಮಾತ್ರವಲ್ಲದೆ ತೂಕ ಇಳಿಸಲು ಸಹಕಾರಿಯಾಗಿದ್ದು ಥೈರಾಯ್ಡ್ ಮತ್ತು ಮಧುಮೇಹ ನಿಯಂತ್ರಣದಲ್ಲಿ ಇಡಬಹುದು.

# ಮೃದು ತ್ವಚೆಗೆ ಸಹಕಾರಿ

# ಕಣ್ಣಿನ ದೃಷ್ಟಿಗೆ ಉತ್ತಮ

# ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ

# ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

# ನೆಲ್ಲಿಕಾಯಿಯ ಜ್ಯೂಸ್ ಕುಡಿಯುವುದರಿಂದ ಎನರ್ಜಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು