ರಾಂಚಿ : ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ಜಿಮ್ ಮೇಟ್ನಲ್ಲಿ ಗೆಳೆಯನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದೀಗ ಕೇಕ್ ಕಟ್ ಮಾಡಿ ಜಿಮ್ನಲ್ಲಿ ಧೋನಿ ಅವರು ಗೆಳೆಯನ ಬರ್ತ್ ಡೇ ಆಚರಿಸುತ್ತಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಲ್ಲದೆ ಧೋನಿ ಕ್ಲೀನ್ ಶೇವ್ ಮಾಡಿ ಹೊಸ ಲುಕ್ನಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಹತ್ತಿರವಾಗುತ್ತಿರುವುದರಿಂದ ಧೋನಿ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ.