ಸಾಸಿವೆ ಬೆಳೆ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಭಾರತದಲ್ಲಿ ತಯಾರಿಸುವ ಪ್ರತಿಯೊಂದು ಅಡುಗೆಯ ಒಗ್ಗರಣೆಗೆ ಸಾಸಿವೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೂಸಿಫೆರಾ ಕುಟುಂಬಕ್ಕೆ ಸೇರಿದ ಈ ಸಾಸಿವೆ ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಸಾಸಿವೆ ಬೀಜವನ್ನು ಭಾರತದ ತರಕಾರಿ ಮತ್ತು ಮೇಲೋಗರಗಳ ತಯಾರಿಕೆಯಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ. ಸಾಸಿವೆ ಮತ್ತು ಎಣ್ಣೆಯನ್ನು ಮುಖ್ಯವಾಗಿ ಉಪ್ಪಿನಕಾಯಿಗೆ ಬಳಸಲಾಗುತ್ತದೆ. ಜೊತೆಗೆ ದನಕರುಗಳ ಆಹಾರಕ್ಕಾಗಿಯೂ ಸಹ ಬಳಸಲಾಗುತ್ತದೆ.

ಭಾರತದಲ್ಲಿ ಸಾಸಿವೆ ಉತ್ಪಾದನೆ: ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಹರಿಯಾಣ, ಅಸ್ಸಾಂ ಭಾರತದಲ್ಲಿ ಸಾಸಿವೆ ಬೀಜ ಉತ್ಪಾದಿಸುವ ರಾಜ್ಯವಾಗಿದೆ.

ಹವಾಮಾನದ ಅವಶ್ಯಕತೆ: ಸಾಸಿವೆಯನ್ನು ಉಪೋಷ್ಣವಲಯದ ಹವಾಮಾನದಲ್ಲಿ ಬೆಳೆಯಲಾಗುತ್ತದೆ. ಒಣ ಮತ್ತು ತಂಪಾದ ವಾತಾವರಣದಲ್ಲಿ ಬೆಳೆಯಲಾಗುತ್ತದೆ. ಆದ್ದರಿಂದ ಸಾಸಿವೆಯನ್ನು ಹೆಚ್ಚಾಗಿ ರಾಬಿ ಋತುವಿನ ಬೆಳೆಯಾಗಿ ಬೆಳೆಯಲಾಗುತ್ತದೆ. ಸಾಸಿವೆಗೆ 10 ಡಿಗ್ರಿ ಯಿಂದ 25ಡಿಗ್ರಿ ತನಕ ತಾಪಮಾನದ ಅಗತ್ಯವಿರುತ್ತದೆ.

ಮಣ್ಣಿನ ಅವಶ್ಯಕತೆ: ಭಾರಿ ಲೋಮಮಿ ಮಣ್ಣು ಈ ಸಾಸಿವೆ ಬೆಳೆಗೆ ಉತ್ತಮವಾಗಿರುತ್ತದೆ. ಬಿತ್ತನೆಯ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರುವುದು ಅಗತ್ಯವಾಗಿರುತ್ತದೆ.

ಬಿತ್ತನೆ ವಿಧಾನ: ಸಾಸಿವೆಯನ್ನು ಸಾಮಾನ್ಯಾಗಿ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಲ್ಲಿ ಬೆಳೆಯಲಾಗುತ್ತದೆ. ಸಾಸಿವೆಯನ್ನು ಒಂದು ಮಿಶ್ರ ಬೆಳೆಯಾಗಿಯೂ ಸಹ ಬೆಳೆಸಬಹುದಾಗಿದೆ. ಸಾಸಿವೆ ಗಿಡಗಳನ್ನು ಸುಮಾರು 45:20 ಸೆಂ ಮೀ ಅಂತರದಲ್ಲಿ ನೆಡಬೇಕು.
ಸಾಸಿವೆ ಬೆಳೆಯನ್ನು ಗೋಧಿ ಮತ್ತು ಉದ್ದಿನ ಬೇಳೆಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಸಬಹುದಾಗಿದೆ.

ಸಾಸಿವೆಯಿಂದ ಆರೋಗ್ಯ ಪ್ರಯೋಜನಗಳು:
• ಅಸ್ತಮಾ ರೋಗ ಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
• ಜೀರ್ಣಂಗವ್ಯೂಹದ ಕ್ಯಾನ್ಸರ್ ತಡೆಗಟ್ಟಲು ಸಹಾಯಮಾಡುತ್ತದೆ
• ಸಂಧಿವಾತವನ್ನು ಕಡಿಮೆ ಮಾಡುತ್ತದೆ
• ಸ್ನಾಯು ನೋವನ್ನು ತಡೆಯುತ್ತದೆ
• ಬೊಜ್ಜು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ

Ashika S

Recent Posts

ಕಾಂಗ್ರೆಸ್ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದ ಕಾರ್ಯಕರ್ತರು

ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲವು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವರಾಧ್ಯ ದಳವಾಯಿ ಸುಂಬಡ ಅವರು…

3 mins ago

ದೇಶ ಭಕ್ತಿಯನ್ನು ಮೋದಿಯವರಿಗೆ ಗುತ್ತಿಗೆ ಕೊಟ್ಟಿಲ್ಲ: ಲಕ್ಷ್ಮಣ ಸವದಿ

ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಮಾಜಿ ಮುಖ್ಯಮಂತ್ರಿ…

9 mins ago

ಶನಿವಾರಸಂತೆ ಹಲ್ಲೆ ಪ್ರಕರಣ : ನಿಷ್ಪಕ್ಷಪಾತ ತನಿಖೆಗೆ ಹನೀಫ್ ಒತ್ತಾಯ

ಕಳೆದ ಚುನಾವಣಾ ದಿನದಂದು ಕ್ಷುಲ್ಲಕ ವಿಚಾರವಾಗಿ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತವಾದ…

21 mins ago

ಅಕ್ಕನ ಮದುವೆ ಸಂಭ್ರಮ : ಮೆಹಂದಿ ಶಾಸ್ತ್ರದಲ್ಲಿ ಡ್ಯಾನ್ಸ್‌ ಮಾಡ್ತಿದ್ದ ತಂಗಿಗೆ ಹೃದಯಾಘಾತ

ಸೋದರಿಯ ಮದುವೆ ಮೆಹಂದಿ ಶಾಸ್ತ್ರದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ವೇಳೆ ಸಹೋದರಿಗೆ ಹೃದಯಾಘಾತ ಸಂಭವಿಸಿದ ಘಟನೆ ಮೀರತ್​ನಲ್ಲಿ ನಡೆದಿದೆ. ರಿಂಷಾ (18)…

35 mins ago

ಖೂಬಾರವರ ಗೆಲುವಿಗಾಗಿ ನಾವು ಒಂದಾಗಿದ್ದೇವೆ : ಬಂಡೆಪ್ಪ ಖಾಶೆಂಪುರ್

ಕೇಂದ್ರ ಸಚಿವರು, ಬೀದರ್ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿರುವ ಭಗವಂತ ಖೂಬಾರವರ ಗೆಲುವಿಗಾಗಿ ನಾವು, ಬೆಲ್ದಾಳೆಯವರು ಒಂದಾಗಿದ್ದೇವೆ ಎಂದು ಮಾಜಿ…

56 mins ago

ಬಣಕಲ್ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಬಾವಾ ನಿಧನ

ಬಣಕಲ್ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಬಾವಾ(87) ತೀವೃ ಹೃದಯಾಘಾತದಿಂದ ಬಣಕಲ್ ನಲ್ಲಿ ನಿಧನರಾದರು. ಅಹ್ಮದ್ ಭಾವಾರವರು ಹಿರಿಯ ಕಾಂಗ್ರೆಸ್…

1 hour ago