ನಿಮಗಿದು ಗೊತ್ತೆ ಹುಲ್ಲು ಜೋಳದ ವಿಶೇಷತೆ

ಹುಲ್ಲು ಜೋಳವು ಭಾರತದಾದ್ಯಂತ ಬೆಳೆಯುವ ಮುಖ್ಯ ಬೆಳೆಯಲ್ಲಿ ಒಂದಾಗಿದೆ. ಹುಲ್ಲು ಜೋಳವು ಅಕ್ಕಿ ಗೋಧಿ, ಜೋಳ ಹಾಗೂ ಬಾರ್ಲಿಯ ನಂತರ ವಿಶ್ವದ 5ನೇ ಪ್ರಮುಖ ಏಕದಳ ಬೆಳೆಯಾಗಿದೆ. ಹುಲ್ಲುಜೋಳದ ಪೌಷ್ಟಿಕಾಂಶವು ಜೋಳದ ಪೌಷ್ಟಿಕಾಂಶದಂತೆಯೇ ಇದೆ.

ಹುಲ್ಲು ಜೋಳವು ಎಥನಾಲ್ ಉತ್ಪಾದನೆಗೆ ಬಳಸಲಾಗುತ್ತದೆ. ಜೊತೆಗೆ ಅಲ್ಕೋಹಾಲ್, ಪಿಷ್ಟ ಉತ್ಪಾದನೆ, ಅಂಟು ತಯಾರಿಕೆ ಕಾಗದ ಉತ್ಪಾದನೆ ಹಾಗೂ ಜಾನುವಾರುಗಳಿಗೆ ಆಹಾರವಾಗಿ ಬಳಕೆಯಾಗುತ್ತದೆ. ಇವುಗಳನ್ನು ಹಸಿರು ಮೇವು, ಒಣ ಮೇವು ಹಾಗೂ ಹುಲ್ಲು ಆಗಿ ಬಳಸಲಾಗುತ್ತದೆ.
ಭಾರತದಲ್ಲಿ ಹುಲ್ಲು ಜೋಳವನ್ನು ಉತ್ಪಾದಿಸುವ ರಾಜ್ಯಗಳೆಂದರೆ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್, ಯುಪಿ, ಹರಿಯಾಣ ಇತ್ಯಾದಿ.

ಹುಲ್ಲು ಜೋಳವು ಹುಲ್ಲಿನ ಕುಟುಂಬಕ್ಕೆ ಸೇರಿರುವಂತಹ ಧಾನ್ಯವಾಗಿದ್ದು.ಇದು ಪೋಶಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ವೈವಿಧ್ಯತೆಯನ್ನು ಹೊಂದಿದೆ.

ಹುಲ್ಲು ಜೋಳದ ಬೇಸಾಯಕ್ಕೆ ಬೇಕಾದ ಹವಾಮಾನ

ಮೂಲತಹ ಹುಲ್ಲು ಜೋಳವು ಉಷ್ಣವಲಯದ ಬೆಳೆಯಾಗಿದೆ. ಇದು 25 ಡಿಗ್ರಿ ಯಿಂದ 32 ಡಿಗ್ರಿ ನಡುವಿನ ತಾಪಮಾನದಲ್ಲಿ ಚನ್ನಾಗಿ ಬೆಳೆಯುತ್ತದೆ. ಜೋಳಕ್ಕೆ ವಾರ್ಷಿಕವಾಗಿ 40 ಸೆಂಮೀ ಮಳೆಯ ಅಗತ್ಯವಿದೆ. ಜೋಳವು ತೀವ್ರ ಬರ ಸಹಿಷ್ಣು ಬೆಳೆಯಾಗಿದ್ದು ಒಣ ಪ್ರದೇಶಗಳಿಗೆ ಶಿಫಾರಸ್ಸು ಮಾಡಲಾಗಿದೆ.

ಆಹಾರ ಲಾಭಗಳು

ಜೋಳದ ಕೆಲವು ಮುಖ್ಯ ಆರೋಗ್ಯ ಲಾಭಗಳು

• ಹುಲ್ಲುಜೋಳವು ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಂ, ರಂಜಕ, ಪ್ರೋಟಿನ್ ಹಾಗೂ ನಾರಿನಿಂದ ತುಂಬಿದೆ.

• ಹುಲ್ಲು ಜೋಳವು ಹೃದಯಕ್ಕೆ ಆರೋಗ್ಯಕಾರಿ ಎಂದು ತಿಳಿದು ಬಂದಿದೆ. ಜೋಳದ ರೊಟ್ಟಿ ಯನ್ನು ಅದರ ಆರೋಗ್ಯ ಪ್ರಯೋಜನಗಳಿಗಾಗಿ ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

• ಜೋಳವು ದೇಹದ ತೋಕ ಇಳಿಸಲು ಸಹಾಯ ಮಾಡುತ್ತದೆ.

ಹುಲ್ಲು ಜೋಳವನ್ನು ವೈವಿಧ್ಯಮಯವಾಗಿ ಬಳಸಿಕೊಳ್ಳಬಹುದು ನೀವು ಅನ್ನದ ಬದಲಿಗೆ ಇದನ್ನು ಬಳಸಬಹುದು. ಇದನ್ನು ತರಕಾರಿಗಳೊಂದಿಗೆ ಬೇಯಿಸಿ ಆರೋಗ್ಯಕರವಾದ ಆಹಾರವನ್ನು ಸವಿಯಬಹುದು.

Ashika S

Recent Posts

ಕೊಟ್ಟ ಮಾತಿನಂತೆ ಚಿತ್ರ ಬಿಡಿಸಿದ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಫೋಟೋ ಹಿಡಿದು ನಿಂತಿದ್ದ ಯುವತಿಯನ್ನು ಕಂಡು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಯುವತಿಯ ಫೋಟೊ…

36 mins ago

‘ಕಲ್ಕಿ-2898 AD’ ಚಿತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿದ ದೀಪಿಕಾ ಪಡುಕೋಣೆ

ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ 'ಕಲ್ಕಿ-2898 AD' ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ನಟಿ ದೀಪಿಕಾ ಪಡುಕೋಣೆ ತಮ್ಮ ಪಾತ್ರದ ಡಬ್ಬಿಂಗ್‌…

51 mins ago

ಧನುಷ್- ಐಶ್ವರ್ಯ ಇಬ್ಬರೂ ಬೇರೆಯವರೊಟ್ಟಿಗೆ ಡೇಟಿಂಗ್; ಖ್ಯಾತ ಗಾಯಕಿ ಮಾಹಿತಿ

ಕಾಲಿವುಡ್‌ ನಟ ಧನುಷ್‌ ಮತ್ತು ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ.…

59 mins ago

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಎಚ್​.ಡಿ ರೇವಣ್ಣ ಏನಂದ್ರು ?

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಪರಪ್ಪರ ಅಗ್ರಹಾರ ಜೈಲಿನಿಂದ ಬಿಡುಗಡೆ ಹೊಂದಿದ ಶಾಸಕ…

1 hour ago

ಅಂಕಿತಾ ಓದಿದ ಶಾಲೆಗೆ 1 ಕೋಟಿ ರೂ. ಘೋಷಿಸಿದ ಸಿಎಂ ಸಿದ್ದರಾಮಯ್ಯ

ಈ ವರ್ಷದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಫಸ್ಟ್…

2 hours ago

10 ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಏರಿಕೆಯಾಗಿದ್ದು ಎಷ್ಟು?

ಪ್ರಧಾನಿ ನರೇಂದ್ರ ಮೋದಿ ಅವರು ಸತತ 3ನೇ ಬಾರಿ ಲೋಕಸಭಾ ಚುನಾವಣೆಗೆ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇಂದು ಬೆಳಗ್ಗೆ 11.40ರ…

2 hours ago