Categories: ಅಂಕಣ

ಮುಖದ ಮೇಲಿನ ಮೊಡವೆ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಸೌಂದರ್ಯದ ಬಗ್ಗೆ ಸಾಮಾನ್ಯವಾಗಿ ಎಲ್ಲಾ ಯುವತಿಯರಿಗೂ ಕಾಳಜಿ ಇದ್ದೇ ಇರುತ್ತದೆ. ಸಣ್ಣ ವಯಸ್ಸಿನಲ್ಲಿ ಮುಖದ ಸೌಂದರ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಆದರೆ ದಿನಕಳೆದಂತೆ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಅದರಲ್ಲೂ ಯೌವನದಲ್ಲಿ ಮುಖದ ಮೇಲೆ ಮೊಡವೆಗಳು, ಬ್ಲಾಕ್ಹೆಡ್ ಸಮಸ್ಯೆ ಮತ್ತು ಕಪ್ಪು ಕಲೆಗಳು ಇನ್ನಿತರ ತೊಂದರೆಗಳು ಕಂಡು ಬರಲು ಆರಂಭವಾಗಿ, ಮುಖದ ಸೌಂದರ್ಯ ಹಾಳಾಗುವುದು ಮಾತ್ರವಲ್ಲದೆ ಚರ್ಮದ ಕಾಂತಿಯು ಕಳೆದುಕೊಳ್ಳುತ್ತಾ ಬರುತ್ತದೆ. ಆದ್ದರಿಂದ ಇಂದು ನಾವು ಇಂತಹ ಸಮಸ್ಯೆಯಿಂದ ಹೇಗೆ ಪಾರಾಗಬಹುದು ಎಂದು ತಿಳಿದುಕೊಳ್ಳೋಣ. ಬೆಳ್ಳುಳ್ಳಿ ಎಸಳು ಚೆನ್ನಾಗಿ ಜಜ್ಜಿ ಅದಕ್ಕೆ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ ಅದನ್ನು ಮೊಡವೆ ಇರುವ ಕಡೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ, ನಂತರ ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.

ಎರಡು ಲವಂಗ ಮತ್ತು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಪೇಸ್ಟ್ ತಯಾರಿಸಿ ಅದಕ್ಕೆ ಎರಡು ಚಿಟಿಕೆ ಅರಿಶಿನ, ಎರಡು ಮೂರು ಹನಿ ಜೇನುತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ತಯಾರಾದ ಪೇಸ್ಟ್ ಅನ್ನು ಮೊಡವೆ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಡಿ. ಅದರ ನಂತರ ನೀರಿನಿಂದ ಸ್ವಚ್ಛಗೊಳಿಸಿ. ಹೀಗೆ ಕ್ರಮೇಣ ಮಾಡುವುದರಿಂದ ಬಾರೀ ಬೇಗನೆ ರಿಸಲ್ಟ್ ಪಡೆಯಬಹುದು.

ಬೆಳ್ಳುಳ್ಳಿ ಎಸಳನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಅದಕ್ಕೆ ಮೊಸರು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ಮುಖ ತೊಳೆಯಿರಿ. ಅಥವಾ ಮೊಸರು, ಜೇನುತುಪ್ಪ, ಬೆಳ್ಳುಳ್ಳಿ(ಜಜ್ಜಿ ಪೇಸ್ಟ್) ಇವು ಮೂರನನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದು ಕೊಳ್ಳಿ. ಅಥವಾ ಹೀಗೂ ಮಾಡಬಹುದು ಲೋಲೆಸರಕ್ಕೆ ಬೆಳ್ಳುಳ್ಳಿ ರಸ ಹಾಕಿ ಪ್ರತಿನಿತ್ಯ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನಂತರ ಮುಖ ತೊಳೆಯಿರಿ.

ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ನಂತರ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಫ್ರಿಜ್ ನಲ್ಲಿಟ್ಟು ನಂತರ ಎರಡು ದಿನಗಳವರೆಗೆ ಬಳಸಿ ಅದಕ್ಕಿಂತ ಹೆಚ್ಚು ದಿನ ಬಳಸಬೇಡಿ.

ಬ್ಲ್ಯಾಕ್‌ ಹೆಡ್ಸ್‌ ತಡೆಗಟ್ಟಲು ಟೊಮೆಟೊವನ್ನು ಕತ್ತರಿಸಿ, ಅದಕ್ಕೆ ಬೆಳ್ಳುಳ್ಲಿ ಜಜ್ಜಿ ರಸ ಹಾಕಿ ಅದನ್ನು ಮುಖಕ್ಕೆ ಹಚ್ಚಿ ಸ್ಪಲ್ಪ ಸಮಯ ಹಾಗೆ ಬಿಟ್ಟು ಮುಖವನ್ನು ತೊಳೆಯಿರಿ. ಹೀಗೆ ಮಾಡಿದರೆ ಬ್ಲ್ಯಾಕ್‌ ಹೆಡ್ಸ್ ಕಡಿಮೆಯಾಗುತ್ತದೆ.

Gayathri SG

Recent Posts

ಹುಟ್ಟೂರಿಗೆ ಆಗಮಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ ಪಾರ್ಥಿವ ಶರೀರ

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79)…

14 mins ago

ಮಲಯಾಳಂ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ…

1 hour ago

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

2 hours ago

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

2 hours ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

2 hours ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

3 hours ago