News Karnataka Kannada
Sunday, April 28 2024
ಅಂಕಣ

ಅಣ್ಣ-ತಂಗಿ ಸಂಬಂಧ ಎರಡು ದೇಹ ಒಂದೇ ಆತ್ಮ ಇದ್ದಂತೆ!

Brother and Sister Two Bodies One Soul
Photo Credit : Pixabay

ಪ್ರತಿಯೊಂದು ಸಂಬಂಧವು ತನ್ನದೇ ಆದ ರೀತಿಯಲ್ಲಿ ವಿಶೇಷವಾಗಿದೆ. ಪ್ರತಿಯೊಂದು ಅಣ್ಣ ತಂಗಿಯ ಸಂಬಂಧ ಮಧುರ ಮತ್ತು ಪ್ರೀತಿಯಿಂದ ಕೂಡಿರುತ್ತದೆ. ಪ್ರತಿಯೊಬ್ಬ ಅಣ್ಣ ತಂಗಿಯು ಜಗಳವಾಡುತ್ತಾರೆ ಮತ್ತು ಅಷ್ಟೇ ಪ್ರೀತಿಯಿಂದ ಒಬ್ಬರೊಬ್ಬರು ಗೌರವಿಸುತ್ತಾರೆ. ಒಬ್ಬ ಅಣ್ಣ ತನ್ನ ತಂಗಿಯನ್ನು ಎಲ್ಲಾ ರೀತಿಯಲ್ಲೂ ರಕ್ಷಿಸುತ್ತಾನೆ.

ಪ್ರತಿಯೊಬ್ಬ ಸಹೋದರ ಮತ್ತು ಸಹೋದರಿಯ ಸಂಬಂಧ ಪ್ರೀತಿ ಕೀಟಲೆಯ ಸಂಬಂಧ ಆಗಿದ್ದರೂ ಕೂಡ ಒಬ್ಬರಿಗೊಬ್ಬರು ಪ್ರಾಣ ನೀಡಲು ರೆಡಿ ಇರುತ್ತಾರೆ. ಆದರೆ ತಮ್ಮ ಅತೀ ಪ್ರೀತಿಯ ಅಥವ ಅಮೂಲ್ಯವಾದದನ್ನು ಹಂಚಿಕೊಳ್ಳಲು ರೆಡಿ ಇರುವುದಿಲ್ಲ. ಕೇಳದೆ ತೆಗೆದುಕೊಂಡರೆ ಮಹಾಯುಧ್ಧ ಗ್ಯಾರಂಟಿ. ಅಪ್ಪ ಅಮ್ಮ ಬೈದಾಗ ಒಬ್ಬರಿಗೊಬ್ಬ ಖುಷಿಪಡುತ್ತಾರೆ ಮತ್ತು ಅದೇ ವಿಷಯಕ್ಕೆ ಕಾಲೇಳೆಯುತ್ತಿರುತ್ತಾರೆ. ಕೀಟಲೆ ಮಾಡಿ ಸದಾ ಅಪ್ಪ ಅಮ್ಮನ ಹತ್ರ ದೂರು ಹೇಳಲು ಯಾವಾಗಲೂ ರೆಡಿ.

ಪರಸ್ಪರ ಒಬ್ಬರಿಗೋಬ್ಬರು ತಮ್ಮ ರಹಸ್ಯವನ್ನು ಬಿಚ್ಚಿಡಲು ಸೂಕ್ತ ವ್ಯಕ್ತಿಗಳಾಗಿರುತ್ತಾರೆ. ಯಾರೊಂದಿಗೂ ಬಿಟ್ಟುಕೊಡುದಿಲ್ಲ ಎಂಬ ದೃಡನಂಬಿಕೆ ಇರುತ್ತದೆ. ಇವರಿಗಿಂತ ವಿಶ್ವಸಾರ್ಹನೀಯ ವ್ಯಕ್ತಿ ಯಾರು ಇಲ್ಲ. ಸಿಕ್ರೇಟ್‌ನ್ನು ಸಿಕ್ರೇಟ್ ಆಗಿ ಇಡುವುದರಲ್ಲಿ ನಿಪುಣರು ಆಗಿರುವ ಇವರು, ತಮ್ಮ ಬೇಡಿಕೆಯನ್ನು ಇಡೇರಿಸಿಲ್ಲ ಅಂದರೆ ಅಷ್ಟೆ ಕತೆ. ಕೆಲವೊಮ್ಮೆ ಬ್ಲಾಕ್‌ಮೇಲ್ ಮಾಡಿ ತಮ್ಮ ಬೇಡಿಕೆಯನ್ನು ಇಡೇರಿಸುವುತ್ತಾರೆ.

ಅಣ್ಣನ್ನನು ಸುಲಿಗೆ ಮಾಡುವ ತಂಗಿ ನ್ಯಾಯ ಸಮ್ಮತವಾದ ಪ್ರೀತಿ ಅಡಕವಾಗಿರುತ್ತದೆ ಹೊರತು ಬೇರೆನೂ ಅಲ್ಲ. ಅಣ್ಣ ಜೇಬಿಗೆ ಕತ್ತರಿ ಹಾಕುವುದೆಂದರೆ ತುಂಬಾನೇ ಇಷ್ಟ.ಜಗತ್ತಿನಲ್ಲಿ ತನಗಿಂತ ಅದೃಷ್ಟವಂತ ಬೇರೆ ಯಾರು ಇಲ್ಲ ಯಾಕೆಂದರೆ ನನಗೆ ಒಬ್ಬಳು ತಂಗಿ ಇದ್ದಾಳೆ. ತಂಗಿಯ ನೋವನ್ನು ನೋಡೊದಕ್ಕೆ ಆಗದಿರುವವನು, ತಂಗಿಯ ಕಣ್ಣೀರನ್ನು ಸಹಿಸೋಕ್ಕೆ ಆಗದೆ ಇರುವವನು ಅಣ್ಣ.

ಒಬ್ಬರಿಗೊಬ್ಬರು ಕಿತ್ತಡಾದ ದಿನವಿಲ್ಲ ಆದರೆ ಒಬ್ಬರ ಪರ ನಿಲ್ಲಲೂ ಸದಾ ಮುಂದೆ ಇರುತ್ತಾರೆ. ತಂಗಿ ಇಷ್ಟಪಟ್ಟಿದನ್ನು ಕಷ್ಟ ಪಟ್ಟಾದರು ತಂದು ಕೊಡುತ್ತಾನೆ ಅಣ್ಣ. ತಂಗಿಗೆ ಮದುವೆ ಗೊತ್ತಾದ ಕ್ಷಣದಿಂದ ಖುಷಿಯಿಂದ ಕುಣಿಯುತ್ತಾನೆ. ಮದುವೆಯ ದಿನ ತಂಗಿನ ಗಂಡನ ಮನೆಗೆ ಕಳಿಸುವಾಗ ಎಲ್ಲರಿಗಿಂತ ಹೆಚ್ಚು ಸಂಕಟ ಪಡುವವನು ಈ ಅಣ್ಣನೇ. ಇನ್ನು ತಂಗಿನೂ ಕಮ್ಮಿ ಇಲ್ಲ ಅಣ್ಣನಿಗೆ ಮದುವೆ ಆಯಿತ್ತು ಎಂದರೆ ನನ್ನ ಮೇಲಿನ ಪ್ರೀತಿ ಕಮ್ಮಿ ಆಗುತ್ತದೆ ಎಂದು ತಪ್ಪು ಕಲ್ಪನೆಯಲ್ಲಿ ಅತ್ತಿಗೆಯ ಮೇಲೆ ಅಸೂಯೆ ಪಡುತ್ತಾಳೆ.

ಅಣ್ಣ ತಂಗಿಯ ಸಂಬಂಧ ಅತೀ ಪ್ರೀತಿಯ ಮತ್ತು ತುಂಬಾನೇ ಹಚ್ಚಿಕೊಂಡಿರುವ ಸಂಬಂಧವಾಗಿದೆ. ನಮ್ಮ ಜೀವನದಲ್ಲಿ ಒಬ್ಬ ಅಣ್ಣ ಅಥಾವ ಒಬ್ಬ ತಂಗಿ ಹುಟ್ಟಿರಲು ತಾನು ತುಂಬಾನೇ ಅದೃಷ್ಟ ಮಾಡಿರುತ್ತೇವೆ ಎಂದು ಕೋಳ್ಳುವವರು ತುಂಬಾ ಮಂದಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು