News Karnataka Kannada
Thursday, May 02 2024
ಅಂಕಣ

ನಮ್ಮ ಮನೆ ಮನೆಗಳಲ್ಲಿ ಇರಲಿ ಒಂದು ಮುಗ್ಧ ಜೀವ

Be with us an innocent life
Photo Credit : News Kannada

ಯುವತಿ ಒಬ್ಬಳು ತಾನು ದಿನ ಒಡಾಡುವ ರಸ್ತೆಯಲ್ಲಿ ಒಂದು ನಾಯಿಯನ್ನು ನೋಡುತ್ತಾಳೆ. ಅವಳಿಗೆ ಪ್ರಾಣಿಗಳೆಂದರೆ ಮೋದಲೇ ಪ್ರೀತಿ. ಹಾಗಾಗಿ ಆಕೆ ಆ ನಾಯಿಗೆ ತಾನೆ ಪ್ರತಿ ದಿನ ಊಟ ನೀಡುತ್ತಿರುತ್ತಾಳೆ. ಆ ನಾಯಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ರಸ್ತೆಯಲ್ಲಿ ಒಡಾಡುವ ಕಾರನ್ನು ಪರಿಶೀಲಿಸುತ್ತಿತ್ತು. ತನ್ನ ಮನೆಯವರನ್ನು ಹುಡುಕುತ್ತಿದ್ದ ನಾಯಿಯನ್ನು ಕಂಡು ಮರುಗಿದಳು. ಹೆಗಾದರು ಮಾಡಿ ನಾಯಿಯನ್ನು ತನ್ನ ಕುಟುಂಬದವರ ಸೇರಿಸಬೇಕು ಎಂದು ಶತ ಪ್ರಯತ್ನ ಮಾಡುತ್ತಾಳೆ ಆ ಯುವತಿ. ಸಾಮಾಜಿಕ ಜಾಲತಾಣದಲ್ಲಿ ಈ ನಾಯಿಯ ಕುರಿತು ಒಂದಿಷ್ಟು ಮಾಹಿತಿ ಮತ್ತು ತನ್ನ ಮನೆಯವರಿಗಾಗಿ ಹುಡುಕಾಡುತ್ತಿರುವ ಬಗ್ಗೆ ಎಲ್ಲವನ್ನು ವಿವರವಾಗಿ ಹರಿಯ ಬಿಡುತ್ತಾಳೆ.

ಒಂದು ದಿನ ಮನೆಯವರು ಬಂದೇ ಬಿಡುತ್ತಾರೆ. ಎಲ್ಲಿಲ್ಲದ ಸಂಬ್ರಮ ಖುಷಿ. ಮನೆಯವರು ಅದನ್ನು ಇನ್ನೇನು ತೆಗೆದು ಕೊಂಡು ಹೋಗಬೇಕು ಎಂದು ಕಾರಲ್ಲಿ ಕೂತಾಗ ನಾಯಿ ಕಾಡಲೇ ಗಾಡಿಯಿಂದ ಹೊರಗೆ ಜಿಗಿಯುತ್ತೆ. ಅದು ಆ ಯುವತಿಯತ್ತ ನಡೆಯುತ್ತೆ. ಮನೆಯವರೊಂದಿಗೆ ಹೋಗಲು ನಿರಾಕರಿಸುತ್ತೆ. ಕಾರಣ ಆ ಯುವತಿಯ ಪ್ರೀತಿ. ಕಳೆದ ನಾಲ್ಕು ವರ್ಷಗಳಿಂದ ನಿತ್ಯ ಊಟ ಕೊಟ್ಟ ಆ ಯುವತಿಯನ್ನು ಬಿಟ್ಟು ಹೊಗಲು ರೆಡಿ ಇರುವುದಿಲ್ಲ. ನಾಯಿ ತನ್ನ ಮನೆಯವರನ್ನು ಪ್ರೀತಿಸಿ ಮುದ್ದಿಸಿ ತನ್ನನ್ನು ಇಷ್ಟು ವರ್ಷ ಕಾಪಾಡಿ ಕೊಂಡು ಬಂದ ಆ ಯುವತಿಯಂದಿಗೆ ಹೊರಟು ನಿಲ್ಲುತ್ತದೆ.

ಮನುಷ್ಯ ಮತ್ತು ಪ್ರಾಣಿಗಳ ಭಾವನಾತ್ಮಕ ಸಂಬಂಧಗಳಿಗೆ ಇದು ಸೂಕ್ತ ಉದಾಹರಣೆಯಾಗಿದೆ. ತನ್ನ ಮಾಲಿಕನ ಕುಟುಂಬದಲ್ಲಿ ತಾನು ಒಬ್ಬ ಸದಸ್ಯನಾಗಿ ಇರುತ್ತಾರೆ. ಇವರು ಪ್ರೀತಿಯಿಂದ ನಿಷ್ಟೆಯಿಂದ ಮನುಷ್ಯರೊಂದಿಗೆ ಹೊಂದಿ ಕೊಳ್ಳುವ ಪ್ರೀತಿ ತುಂಬನೇ ಮಿಗಿಲಾದದ್ದು. ಜವಾಬ್ದಾರಿ, ಕರಗದಷ್ಟು ಪ್ರೀತಿ, ಮನಸ್ಸಿಗೂ ಹೃದಯಕ್ಕೂ ಬೇಗನೆ ಹತ್ತಿರವಾಗುವವ ಜೀವ ಎನ್ನಬಹದು.

ಇವರ ಮುಗ್ಧ ಪ್ರೀತಿಯನ್ನು ಅರಿತವರೇ ಧನ್ಯರು. ಮನೆಯಲ್ಲಿ ಒಂದು ಈ ಮುಗ್ಧ ಜೀವ ನಮ್ಮೊಂದಿಗೆ ಇರಲಿ. ಪ್ರೀತಿಗೂ ಸೈ, ಕಾವಲು ಕಾಯೋದಿಕ್ಕೂ ಸೈ ಇವರು. ಇವರೊಂದಿಗಿನ ಒಡನಾಟ ಹೊಂದಿದವರು ಬಲ್ಲವರು ಇವರ ಪ್ರೀತಿ ಆತ್ಮೀಯತೆಯ ಆಳ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು