Categories: ಅಂಕಣ

ನೈಸರ್ಗಿಕ ಫೋಷಕಾಂಶ ನೀಡುವ ಬಿದಿರಿನ ಅಕ್ಕಿ

ನಮ್ಮ ಹಿರಿಯರು ಯಾಕೆ ಉತ್ತಮ ಆರೋಗ್ಯವನ್ನು ಹೊಂದಿದ್ದರು ಯೋಚನೆ ಮಾಡಲೇಬೇಕಾದ ವಿಷಯ. ಇದಕ್ಕೆ ಯಾವುದೇ ವೈಜ್ಞಾನಿಕ ಉತ್ತರದ ಅವಶ್ಯಕತೆ ಇಲ್ಲ. ಅವರ ಆಹಾರ ಪದ್ಧತಿಯಾಗಿತ್ತು. ಮನುಷ್ಯನ ಜೀವನದಲ್ಲಿ ಪ್ರಮುಖವಾಗಿ ಅತೀ ಅವಶ್ಯಕವಾಗಿ ಬಳಕೆಗೆ ಬರುವಂತಹ ಮರಗಳಲ್ಲಿ ಬಿದಿರು ಕೂಡ ಒಂದು.

ಹಿರಿಯರು ಹೇಳುವ ಪ್ರಕಾರ ಈ ಬಿದಿರಿನಲ್ಲಿ 25 ವರುಷಕ್ಕೆ ಒಮ್ಮೆ ಬಿದಿರಿನ ಬೀಜ ಗೋಚರಿಸುತ್ತದೆ.ಇದನ್ನು ಬಿದಿರಿನ ಅಕ್ಕಿ ಎನ್ನುತ್ತಾರೆ. ಬೆಳ್ಳಗೆ ಎದ್ದು ಬಿದಿರಿನ ಮರದ ಕೆಳಗಡೆ ಸುತ್ತಮುತ್ತ ಮಣ್ಣು, ಕಸ ಕಡ್ಡಿ ಗಳನ್ನು ತೆಗೆದು ಶುಚಿಗೊಳಿಸಿ ಸೆಗಣಿ ಸಾರಿಸಿ ಬರುತ್ತಾರೆ. ನಂತರ ಬಿದಿರಿನ ಅಕ್ಕಿಯನ್ನು ಹೆಕ್ಕಿ ತರಲಾಗುತ್ತದೆ. ಮನೆಗೆ ತಂದ ಅಕ್ಕಿಯನ್ನು ಶುಚಿಗೊಳಿಸಿ ಅದರಿಂದ ದೋಸೆ ಅಥಾವ ರೊಟ್ಟಿಯನ್ನು ಮಾಡಾಲಾಗುವುದು.

ಮರುದಿನ ಬೆಳಗ್ಗೆ ಕಾಫಿ ಮತ್ತು ರೊಟ್ಟಿಯೊಂದನ್ನು ಬಿದಿರಿನ ಮರದ ಕೆಳಗೆ ಇಟ್ಟು ಕೃತಜ್ಞತೆ ಸಲ್ಲಿಸಲಾಗುವುದು.ಇದು ತುಳುನಾಡಿನ ಜನರ ನಂಬಿಕೆ ಕೂಡ ಹೌದು. ಇದರ ಅನ್ನ, ರೊಟ್ಟಿ ಮತ್ತು ದೋಸೆ ಸರ್ವೇ ಸಾಮನ್ಯವಾಗಿ ಮಲೆನಾಡು ಮತ್ತು ತುಳುನಾಡಿನ ಜನರು ಸವಿಯುತ್ತಾರೆ.ಬಿದಿರಿನ ಅಕ್ಕಿಯ ಪಾಯಸ ಕೂಡ ಬಲು ರುಚಿಕರ.

ಇದರ ರುಚಿಯನ್ನು ಸವಿದವರು ಇದರ ಮಹತ್ವವನ್ನು ಕೂಡ ಬಲ್ಲರು.ನೋಡಲು ಗೋಧಿಯಂತೆ ಹೋಲಿಕೆ ಕಂಡರು ಗೋಧಿಯಂತೆ ದುಂಡಗೆ ಇರದೆ ಆಕಾರದಲ್ಲಿ ಸ್ವಲ್ಪ ಕೊಂಚ ಉದ್ದನೆ ಅಕ್ಕಿಯಂತೆನೇ ಇರುತ್ತದೆ. ಫೈಬರ್, ಫ್ರೋಟೀನ್‌ಗಳು ಮತ್ತು ವಿಟಮಿನ್‌ಗಳು ಹೇರಳವಾಗಿದೆ.ಶರೀರದಲ್ಲಿ ಸಕ್ಕರೆಯ ಅಂಶವನ್ನು ಸರಿದೂಗಿಸಲು ಇದು ಸಹಕಾರಿ.

ದಕ್ಷೀಣ ಭಾರತದಲ್ಲಿ ಇದರಲ್ಲಿ ಕಿಚಿಡಿ, ಪೊಂಗಲ್ ಮಾಡಲು ಉಪಯೋಗಿಸುತ್ತಾರೆ. ಭಿದಿರಿನ ಅಕ್ಕಿಯನ್ನು ಹೆಚ್ಚಾಗಿ ಆದಿವಾಸಿ ಸಮುದಾಯದ ಜನರು ಬಳಸುತ್ತಾರೆ ಎಂಬ ನಂಬಿಕೆಯಿದೆ. ಆದರೆ ಹಳ್ಳಿಗಾಡಿನ ಮತ್ತು ಮಲೆನಾಡಿನ ಜನರು ಇದರ ಮಹತ್ವವನ್ನು ಕಂಡಿರುತ್ತಾರೆ.

ತುಳುನಾಡಿನ ಜನರು ಇದನ್ನು “ರಾಜನ್ ಬಾರ್” ಎನ್ನುತ್ತಾರೆ.ಕೇರಳಿಗರು ಮುಲಯಾರಿ ಎಂದು ಕರೆಯುತ್ತಾರೆ. ಇಂದು ಸುಭವಾಗಿ ಲಭ್ಯವಿಲ್ಲದ ಬಿದಿರಿನ ಅಕ್ಕಿ ಸಾವಯವ ಮೇಳಗಳಲ್ಲಿ ಜನರಿಗೆ ಲಭ್ಯವಿರುತ್ತದೆ. ಅಂದಹಾಗೆ ಬಿದಿರಿನ ಅಕ್ಕಿ ದುಬಾರಿ ಬೆಲೆಗೆ ಮಾರಾಟವಾಗುತ್ತದೆ. 250ಗ್ರಾಂ ಗೆ 350 ರೂ ಕನಿಷ್ಟ ಬೆಲೆಯಾಗಿರುತ್ತದೆ. ಇಂದು ಆನ್ ಲೈನ್ ಮಾರಾಟ ಮಾರುಕಟ್ಟೆಯಲ್ಲಿಯು ಲಭ್ಯ. ಸಾವಯವ ಕೃಷಿ ಉತ್ಪನ್ನಗಳ ಜೋತೆ ಇದನ್ನು ಕೂಡ ಮಾರಾಟ ಮಾಡಲಾಗುವುದು.

ಬಿದಿರಿನ ಅಕ್ಕಿಯ ಇತರ ಔಷಧಿಯ ಗುಣಗಳು ಸಂಧಿವಾತ ಮತ್ತು ಕೀಲು ನೋವನ್ನು ಕಡಿಮೆ ಮಾಡುತ್ತದೆ,ಮಧುಮೇಹದ ನಿಯಂತ್ರಣ,ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಟಮಿನ್ ಕೊರತೆಯನ್ನು ನಿವಾರಿಸುತ್ತದೆ. ಪ್ರೋಟೀನ್ ಭರಿತ ಆಹಾರವಾಗಿರುವುದರಿಂದ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಒಟ್ಟಿನಲ್ಲಿ ದುಬಾರಿಯ ಬಿದಿರಿನ ಅಕ್ಕಿಯು ಹಳ್ಳಿ ಜನರು ಸುಲಭದಲ್ಲಿ ಪಡೆಯುವ ಅಕ್ಕಿಯನ್ನು ಒಮ್ಮೆಯಾದರು ರುಚಿ ನೋಡಲೆಬೇಕು.

Sneha Gowda

Recent Posts

ಜೈಪುರದ ನಾಲ್ಕು ಶಾಲೆಗಳಿಗೆ ಬಾಂಬ್​ ಬೆದರಿಕೆ

ಜೈಪುರದ ಪೊಲೀಸರು ಸೋಮವಾರ ಕನಿಷ್ಠ ನಾಲ್ಕು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ ಎಂದು ವರದಿ ಮಾಡಿದ್ದಾರೆ. ಸಂತ್ರಸ್ತ…

18 mins ago

ನಾಳೆ ಮೋದಿ 3ನೇ ಬಾರಿ ನಾಮಪತ್ರ ಸಲ್ಲಿಕೆ : ಇಂದು ರೋಡ್‌ ಶೋ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ಬೆಳಿಗ್ಗೆ ವಾರಾಣಸಿಯಲ್ಲಿ ಲೋಕಸಭೆ ಚುನಾವಣೆ ಬಿಜೆಪಿ ಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೆ ಒಂದು…

32 mins ago

ಇಂದು ಎಚ್‌ ಡಿ ರೇವಣ್ಣ ಬೇಲ್​ ಅರ್ಜಿ ವಿಚಾರಣೆ

ಕಿಡ್ನಾಪ್‌ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರು ಇಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ…

2 hours ago

ಚುನಾವಣೆಗೂ ಮುನ್ನ ಸ್ಫೋಟ : ಮೂವರು ಅಪ್ರಾಪ್ತರು ಸೇರಿ ನಾಲ್ವರು ಸಾವು!

ಚುನಾವಣೆಗೂ ಮುನ್ನ ದಿನವೇ ಜಾರ್ಖಂಡ್‌ನ ಪಲಮುವಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು…

2 hours ago

ಚುನಾವಣೆ ಹೊತ್ತಲ್ಲೆ ಶಂಕಿತ ಪಾಕ್ ಡ್ರೋನ್ ಹಾರಾಟ : ಸೇನೆಯಿಂದ ಗುಂಡಿನ ದಾಳಿ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಎಲ್‌ಒಸಿ ಬಳಿ ಶನಿವಾರ ತಡರಾತ್ರಿ ಶಂಕಿತ ಪಾಕಿಸ್ತಾನಿ ಡ್ರೋನ್ ಮೇಲೆ ಭಾರತೀಯ ಸೇನಾ…

2 hours ago

ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ನಿರೀಕ್ಷೆ: ಯೆಲ್ಲೋ ಅಲರ್ಟ್

ಇಂದು ರಾಜ್ಯದ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ,…

3 hours ago