News Karnataka Kannada
Sunday, April 28 2024
ಅಂಕಣ

ಚಿಕ್ಕಮ್ಮ ಅಂದರೆ ಎಂದಿಗೂ ಬರಿದಾಗದ ಪ್ರೀತಿಯ ಕಣಜ

An aunt is a storehouse of love that never drains
Photo Credit : Pixabay

ಅಮ್ಮ ಎಂದರೆ ಎರಡು ಅಕ್ಷರದಲ್ಲಿ ಅದೇನಿದೆ ಮಹಿಮೆಯೋ ಮುಕ್ಕೋಟಿ ದೇವತೆಗಳು ತಲೆಬಾಗುತ್ತಾರೆ. ಅದೇ ಅಮ್ಮನ ಜೊತೆ ಮಕ್ಕಳ ಪಾಲಿಗೆ ವರವಾಗಿ ಕಾಯುವವಳು ಚಿಕ್ಕಮ್ಮ. ಎಲ್ಲಕಡೆ ದೇವರು ಇರೋದಕ್ಕೆ ಅಗಲ್ಲ ಅಂತ ಅಮ್ಮನನ್ನು ಸೃಷ್ಟಿ ಮಾಡಿದ್ದ ಆದರೆ ಅಮ್ಮ ಇಲ್ಲದ ಕಡೆ ಚಿಕ್ಕಮ್ಮನ್ನು ವರವಾಗಿ ನೀಡಿರುತ್ತಾನೆ.

ಈ ಚಿಕ್ಕಮ್ಮ ಯಾವ ರೂಪದಲ್ಲಿ ಕೂಡ ಇರಬಹುದು. ಅಮ್ಮನ ತಂಗಿ, ಚಿಕ್ಕಪ್ಪನ ಹೆಂಡ್ತಿ ಅಥವಾ ಅಪ್ಪನ ಎರಡನೇ ಸಂಬಂಧ ಆಗಿರಬಹುದು. ಅಮ್ಮನ ತಂಗಿಯಾಗಿರುವ ಚಿಕ್ಕಮ್ಮ ಮಕ್ಕಳಿಗೆ ಪ್ರೀತಿಯ ಆರೈಕೆ ಮಾಡುವಲ್ಲಿ ಹೆಚ್ಚು ಮುತುವರ್ಜಿ ವಹಿಸುತ್ತಾಳೆ. ಅಕ್ಕನ ಮಕ್ಕಳು ಅನ್ನುವುದಕ್ಕಿಂತ ತನ್ನದೇ ಮಕ್ಕಳು ಎನ್ನುವ ಮನೋಭಾವ ಹೆಚ್ಚು ಇವರಿಗೆ.

ಪ್ರತಿಯೊಬ್ಬರ ಜೀವನದಲ್ಲಿಯು ಒಬ್ಬ ಚಿಕ್ಕಮ್ಮ ಇರಲೇ ಬೇಕು. ಅಮ್ಮ ಅರ್ಧ ಅಲ್ಲ ಪೂರ್ತಿ ಜವಾಬ್ದಾರಿಯನ್ನು ನಿಭಾಯಿಸುವವಳು. ಜೊತೆಗೆ ಮಲಗಿಸಿ ಕಥೆ ಹೇಳುವವಳು, ಬಾಯಿಗೆ ಊಟ ಉಣಿಸುವವಳು, ಹೊಸ ಬಟ್ಟೆ ಜೊತೆಗೆ ಅಗತ್ಯವಾದುದನ್ನೇಲ್ಲ ನೀಡುವವಳು. ಮನೆಯವರಲ್ಲಿ ಮಕ್ಕಳು ತಮ್ಮ ಬೇಡಿಕೆ ಇಟ್ಟಾಗ ಅದನ್ನು ಕೊಡಿಸುವಂತೆ ಮನೆಯವರಲ್ಲಿ ಮಕ್ಕಳ ಪರನಿಲ್ಲುವಳು. ಅತೀ ಹೆಚ್ಚು ಮುದ್ದು ಮಾಡುವ ಇವಳು ಎಲ್ಲ ರೀತಿಯಲ್ಲಿಯು ಪ್ರೀತಿಗೆ ಪಾತ್ರಳು.

ಕಥೆ ಹೇಳುವುದರಿಂದ ಹಿಡಿದು ಊರಿಗೆ ಕರೆದೊಯ್ಯುವುದು ಇವಳ ಪ್ರಮುಖ ಕೆಲಸ. ಇದರಿಂದ ಮಕ್ಕಳಿಗೆ ಅಜ್ಜಿ ಮನೆಯ ಸುಖ ಅನುಭವಕ್ಕೆ ದಾರಿ. ಇವಳ ಕಣ್ಣುಗಳಲ್ಲಿ ಪ್ರೀತಿಗೆ ಕಮ್ಮಿ ಇಲ್ಲ. ಅಕ್ಕರೆ ಕೈ ಯಾವತ್ತು ಹಿಂಜರಿಯುವುದಿಲ್ಲ. ಬಿಸಿ ಬಿಸಿ ರುಚಿಯಾದ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿ ತಿನಿಸುವುದು ಇವರಿಗೆ ಎಲ್ಲಿಲ್ಲದ ಖುಷಿ ತರುತ್ತದೆ.

ಹೊಸ ಬಟ್ಟೆ ತೊಡಿಸಿ ಪೋಟೋ ತೆಗಿಸುವುದು ಇನ್ನಷ್ಟು ಖುಷಿಯ ವಿಚಾರ. ಊರ ಜಾತ್ರೆಗೆ ಇವರಿಗೆ ಕರೆದೊಯ್ಯುದು ಕೇಳಿದನ್ನೆಲ್ಲ ಕೊಡಿಸುವ ಇವರಿಗೆ ಖರ್ಚಿನ ಅರಿವೆ ಇರುವುದಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು