News Karnataka Kannada
Saturday, April 27 2024
ಅಂಕಣ

ನಗುವ ಮಾಟಗಾರರಿಂದ ಸದಾ ಎಚ್ಚರವಿರಬೇಕು

Always beware of laughing sorcerers
Photo Credit : Freepik

ನಾವು ಮತ್ತು ನಮ್ಮ ಕೆಲಸ ಇಷ್ಟೆ ನಮ್ಮ ಬದುಕು. ನಮ್ಮ ಕೆಲಸವೇ ನಮ್ಮಗೆ ಎಲ್ಲ ಅಂದುಕೊಂಡು ಸವೆಯುವ ಜನ ನಮ್ಮ ಸುತ್ತಮುತ್ತ ಇರುತ್ತಾರೆ.

ಆಕೆ ನಗುವ ಮಾಟಗಾತಿ. ತನ್ನ ಒಂದು ನಗೆಯಿಂದಲೇ ಎಲ್ಲರನ್ನು ತನ್ನ ಹತ್ತಿರ ಸೆಳೆಯುವ ಶಕ್ತಿಯುಳ್ಳವಳು ಆಕೆ. ಒಂದು ಪ್ರತಿಷ್ಟಿತ ಸಂಸ್ಥೆಯ ಒಂದು ವಿಭಾಗದ ಮುಖ್ಯಸ್ಥೆ. ಅಲ್ಲಿಗೆ ಒಬ್ಬ ಬಡಪಾಯಿ ಶ್ರಮ ಜೀವಿ ಕೈ ಕೆಳಗೆ ಕೆಲಸ ಮಾಡಲು ಸೇರಿಕೋಳ್ಳುತ್ತಾರೆ. ಯಂಗ್ ಆಂಡ್ ಎರ್ನಜ್ಟಿಕ್ ಆಗಿರುವ ವ್ಯಕ್ತಿಗೆ ತನ್ನ ಪ್ರತಿಭೆಯನ್ನು ಬಳಸಿಕೊಂಡು ಎನಾದರು ಮಾಡಬೇಕೆಂಬ ಕನಸ್ಸು ಕಟ್ಟಿ ಕೊಂಡಿರುತ್ತಾನೆ ಈ ಶ್ರಮ ಜೀವಿ.

ಇದಕ್ಕೆ ತಕ್ಕದಾಗಿ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತಾರೆ. ನಮ್ಮ ವಿಭಾಗವು ಬೇಳೆಯಲು ಎನು ಬೇಕು ಕೇಳಿ ಎಲ್ಲವನ್ನು ಮೇಲಾಧೀಕಾರಿಗಳಿಂದ ಕೋಡಿಸುತ್ತೇನೆ ಎನ್ನುತ್ತಾರೆ. ತುಂಬಾನೇ ಆತ್ಮೀಯತೆ, ಆಸಕ್ತಿ ಮತ್ತು ಗೌರವನ್ನು ತೋರಿಸುತ್ತಾರೆ. ಈ ಪರಿಶ್ರಮ ಜೀವಿ ಹೇಳಿದಕ್ಕೆ, ಕೇಳಿದಕ್ಕೆಲ್ಲ ಎಸ್, ಒಕೆ ಹೇಳುವ ಪರಿಪಾಠವಾಗುತ್ತದೆ.

ತನ್ನ ಮೇಲಾಧಿಕಾರಿ ಹೇಳಿದ ಹಾಗೆ ಎಲ್ಲ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವುದರಲ್ಲಿ ಏನೊ ಒಂದು ಖುಷಿ. ಇತ್ತ ಮುಖ್ಯಸ್ಥರು ಕೂಡ ಹೇಳಿದಕ್ಕೆಲ್ಲ ಹೂಂ ಎನ್ನತ್ತಾರೆ. ಇಲ್ಲಿ ಮುಖ್ಯವಾಗಿ ಮುಖ್ಯಸ್ಥರಿಗೆ ಗೊತ್ತಿರುತ್ತದೆ ಶ್ರಮ ಜೀವಿಯ ಯೋಚನೆಗಳು ಮತ್ತು ಯೋಜನೆಗಳು ತುಂಬಾನೇ ಚೆನ್ನಾಗಿದೆ ಎಂದು. ಇವರ ಶ್ರಮ ಮತ್ತು ಪ್ರತಿಭೆನೇ ಸಂಸ್ಥೆ ಮತ್ತು ವಿಭಾಗ ಬೆಳೆಯಲು ಮುಖ್ಯ ಬಂಡವಾಳ.

ಈ ಬಡಪಾಯಿ ಶ್ರಮ ಜೀವಿಗೂ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತೆ ಖುಷಿಯಾಗಿರುತ್ತದೆ. ಎಲ್ಲೂ ಸಿಗದ ಅವಕಾಶ ಇಲ್ಲಿ ಸಿಕ್ಕಿದೆ.ಯಾರು ನೀಡದ ಅವಕಾಶ ಇವರು ನೀಡಿದ್ದಾರೆ. ಇವರು ನಮ್ಮ ಮೇಲೆ ತೋರಿಸಿರುವ ವಿಶ್ವಾಸ ನಂಬಿಕೆ ಬದ್ಧನಾಗಿ ಕೆಲಸ ಮಾಡಬೇಕು ಎಂಬ ಜೋಶ್ ನಲ್ಲಿ ತಮ್ಮ ಎಲ್ಲಾ ಪ್ರತಿಭೆಯನ್ನು ಧಾರೆಎರೆಯುತ್ತಾನೆ.

ಎಲ್ಲಾವು ಚೆನ್ನಾಗಿ ನಡೆಯುತ್ತಿದೆ ಎನ್ನುವಾಗಲೇ ಒಂದು ಸಣ್ಣ ತಪ್ಪಿಗೆ ಇಲ್ಲಸಲ್ಲದ ಅಪಧನೆಯನು ತಲೆಗೆ ಕಟ್ಟಿ ಕೆಲಸದಿಂದ ದೂರಾಗುವ ಮತ್ತು ಕೈತೊಳೆಯಬೇಕಾಗುತ್ತದೆ. ಇದೆಲ್ಲವು ಮುಖ್ಯಸ್ಥ ಮತ್ತು ಮೇಲಾಧಿಕಾರಿ ತನ್ನ ನಗುವಿನಿಂದಲೇ ಸಾಧಿಸುತ್ತಾರೆ.

ತುಂಬಾನೇ ನಯವಾಗಿ, ಆತ್ಮೀಯವಾಗಿ ಮಾತಾನಾಡುವ ಇವರು ಅಮ್ಮ, ಮಗ ಅಂತ ಕರೆಯುತ್ತಾರೆ. ಇನ್ನು ಕೆಲವರು ನಮ್ಮ ಮೂಲಕ ತಮ್ಮ ಇಚ್ಛೆಯನ್ನು ಈಡೇರಿಸಿ ಕೋಳ್ಳುತ್ತಾರೆ. ತಾವು ಮಾಡಬೇಕೆಂದಿರುವ ಕೆಲಸವನ್ನು ಇನ್ನೋಬ್ಬರ ಮೂಲಕ ಮಾಡಿಸಿ ಕೊನೆಗೆ ನಾನು ಮಾಡಿದ್ದು ಎಂದು ಬಿಗಿಯುತ್ತಾರೆ.

ಜೊತೆಗೆ ತಮ್ಮ ಜೀವನದ ಕೆಲವೊಂದು ಸ್ವರಾಸ್ಯಭರಿತ ವಿಷಯವನ್ನು ಹಂಚಿಕೊಂಡು ಇನ್ನಷ್ಟು ಆತ್ಮೀಯತೆನ್ನು ತೋರುತ್ತಾರೆ. ಆದರೆ ಮುಂದೆ ಒಂದು ದಿನ ಕತ್ತು ಕೊಯ್ಯುವ ಕೆಲಸವನ್ನು ಮಾಡುತ್ತಾರೆ ಅಂತ ಸ್ವಲ್ಪನು ಸುಳಿವು ಸಿಗುವುದಿಲ್ಲ.
ಇಂತವರು ಎಲ್ಲ ಕಡೆ ಸಿಗುತ್ತಾರೆ ಆತ್ಮವಿಶ್ವಾಸ ಕಳೆದು ಕೊಳ್ಳುವ ಮುನ್ನ ಎಚ್ಚರವಾಗಿರಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು