News Karnataka Kannada
Saturday, May 04 2024
ಅಂಕಣ

ದಕ್ಷಿಣ ಭಾರತೀಯರ ಉಪಯುಕ್ತ ಆಹಾರ ಬಾಳೆ ದಿಂಡು

A useful south Indian food is banana pillow
Photo Credit : Wikimedia

ಪ್ರತಿಯೊಬ್ಬರ ಮನೆಯ ಊಟದ ಕಥೆ ವಿಭಿನ್ನವಾಗಿರುತ್ತದೆ. ಸಂಪ್ರಾದಾಯಕ್ಕೆ ಅನುಗುಣಾವಾಗಿ ಆಯಾ ಭೌಗೋಳಿಕ ಪ್ರಾಂತ್ಯಕ್ಕೆ ಅನುಗುಣಾವಾಗಿ ಆಹಾರದ ವಿಭಿನ್ನತೆಯನ್ನು ಸಾರುತಿರುತ್ತದೆ. ಆಹಾರ ಪದ್ಧತಿಯು ನಮ್ಮ ಜೀವನ ಶೈಲಿಯನ್ನು ಕೂಡ ನಿರ್ಧರಿಸುತ್ತದೆ.

ಬಾಳೆ ಗಿಡ ಎಲ್ಲರಿಗೂ ಚಿರಪರಿಚಿತ. ಊಟಕ್ಕೆ ಬೇಕು ಬಾಳೆ ಎಲೆ. ಮದುವೆ ಮನೆ, ಹಬ್ಬ ಹರಿದಿನಗಳಲ್ಲಿ ತೋರಣದ ಜೋತೆ ಅಲಂಕಾರಕ್ಕೆ ಬೇಕು ಬಾಳೆ ಗಿಡ, ಚಟ್ನಿಗೆ ಬೇಕು ಬಾಳೆಗೊನೆಯ ಹೂ, ಪಲ್ಯಕ್ಕೆ ಬಾಳೆ ಕಾಯಿ, ಜೀರ್ಣಕ್ರಿಯೆ ಹೆಚ್ಚಿಸಲು ತಿನ್ನಬೇಕು ಬಾಳೆ ಹಣ್ಣು. ಈ ಪಟ್ಟಿಯಲ್ಲಿ ಉಳಿದಿರುವುದು ಬಾಳೆ ದಿಂಡು.

ಬಾಳೆ ದಿಂಡು ದಕ್ಷಿಣ ಭಾರತದಲ್ಲಿನ ಜನರು ಹೆಚ್ಚಾಗಿ ತಮ್ಮ ಆಹಾರದಲ್ಲಿ ಉಪಯುಕ್ತವಾಗಿ ಬಳಸುವ ತರಾಕಾರಿ ವರ್ಗಕ್ಕೆ ಸೇರಿದಾಗಿದೆ. ಬಾಳೆದಿಂಡನ್ನು ಕತ್ತರಿಸಿ ಅದರ ಒಳ ತಿರುಳಿನಂತಿರುವ ದಿಂಡನ್ನು ಹೆಚ್ಚಾಗಿ ಪದಾರ್ಥಕ್ಕೆ ಬಳಕೆಮಾಡುತ್ತಾರೆ.

ಉದ್ದನೆಯ ದಿಂಡನ್ನು ದುಂಡನೆ ಕತ್ತರಿಸಿ ಮತ್ತೆ ಅದನ್ನು ಸಣ್ಣ ಚೌಕ ಆಕರದಲಿ ಚೂರುಗಳಂತೆ ಕತ್ತರಿಸಿ ಪಲ್ಯ ಮಾಡುವ ವಿಧಾನ ದಕ್ಷಿಣ ಭಾರತದ ಜನರ ತುಂಬಾನೇ ಫೆವ್ರೇಟ್. ಪಲ್ಯ, ಜ್ಯೂಸ್, ಸೂಪ್, ಪಾಯಸ, ಹೀಗೆ ಹತ್ತು ಹಲವು ಬಗೆಯಲ್ಲಿ ಆಯಾಪ್ರಾಂತ್ಯಗಳಲ್ಲಿ ಸ್ಥಳೀಯ ಅಭಿರುಚಿಗೆ ತಕ್ಕಂತೆ ಬಾಳೆದಿಂಡಿನಿಂದ ಆಹಾರ ತಯಾರಾಗುತ್ತದೆ.

ಆರೋಗ್ಯವರ್ಧಕ ವಾಗಿರುವ ಈ ಬಾಳೆ ದಿಂಡಿನ ಮಹಿಮೆ ಅಪಾರ. ಬಾಳೆ ದಿಂಡಿನ ರಸವು ಅಜೀರ್ಣ, ಎದೆಯುರಿ, ಮೂತ್ರಪಿಂಡದ ಕಲ್ಲುಗಳು, ಆಮ್ಲೀಯತೆ ಮತ್ತು ತೂಕ ಇಳಿಸಲು ಉತ್ತಮ ಪರಿಹಾರವಾಗಿದೆ. ವಿಟಮಿನ್ ಬಿ6, ಪೊಟ್ಯಾಶೀಯಮ್, ವಿಟಮಿನ್ ಬಿ3, ಕ್ಯಾಲ್ಸಿಯಂ, ಕಬ್ಬಿಣದ ಅಂಶಗಳು, ಸಾಮಾನ್ಯ ಕೆಂಪು ರಕ್ತಕಣಗಳ ಸಂಶ್ಲೇಷಣೆಗೆ ಪ್ರಮುಖವಾಗಿ ಸಹಾಯವಾಗಿದೆ.

ಉತ್ತಮ ಆರೋಗ್ಯಕ್ಕೆ ಬೇಕಾಗಿರುವ ಜೀವಸತ್ವಗಳು ಮತ್ತು ಖನಿಜಾಂಶಗಳು ಹೇರಳವಾಗಿದೆ. ದೇಹದ ಸ್ನಾಯುಗಳು , ಮೂಳೆಗಳು ಮತ್ತು ನರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಲ್ಲಿ ಸಹಕಾರಿ. ಫೈಬರ್ ಅಂಶವನ್ನು ಹೊಂದಿರುವ ಬಾಳೆದಿಂಡು ಕಿತ್ತು ತಿನ್ನುವ ಡಯಾಬಿಟಿಕ್ ಕಾಯಿಲೆಗೂ ಉತ್ತಮ ಪರಿಣಾಮಕಾರಿಯಾಗಿದೆ.ಉಗುರು ಕಚ್ಚುವ ಹವ್ಯಾಸ ಇರುವವರು ಖಂಡಿತವಾಗಿಯು ಇದನ್ನು ತಿನ್ನಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ.

ದಕ್ಷಿಣ ಕನ್ನಡದ ಜನೆತೆಯ ನಂಬಿಕೆ ಪ್ರಕಾರ ಹೊಟ್ಟೆಯೊಳಗಿನ ಕಶ್ಮಲವನ್ನು ಇದು ಕರಗಿಸುತ್ತದೆ. ಮನೆಯ ಹಿರಯರ ಪ್ರಕಾರ ಆಟಿ ತಿಂಗಳಲ್ಲಿ ಅಥಾವ ಬಾಕಿ ದಿನಗಳಲ್ಲಿಯಾದರೂ ಸರಿ ನಾರಿನಂಶ ಇರುವ ಬಾಳೆದಿಂಡಿನ ಆಹಾರವನ್ನು ಒಮ್ಮೆಯಾದರೂ ಸೇವಿಸಲೇ ಬೇಕು ಎನ್ನತ್ತಾರೆ.

ಆದರೆ ಈಗ ವೈದ್ಯಕೀಯವಾಗಿ ಆರೋಗ್ಯದ ಹಿತದೃಷ್ಟಿಯಿಂದಲೂ ಉತ್ತಮವೆನಿಸಿಕೊಂಡಿದೆ. ಆದ್ದರಿಂದಲೇ ಬಾಳೆ ಮನೆಯ ಹಿತ್ತಲಿನಿಂದ ಇಂದು ಸೂಪರ್ ಮಾರ್ಕೆಟ್ ಸೇರಿದೆ. ಇದರ ವಿಶಿಷ್ಟ ಆರೋಗ್ಯವರ್ಧಕ ಗುಣಗಳನ್ನು ಅರಿತವರು ಇಂದು ಆನ್ ಲೈನ್ ಮಾರ್ಕೆಟ್ ನಿಂದಲೂ ತರಿಸಿಕೊಳ್ಳುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು