News Karnataka Kannada
Sunday, May 05 2024
ಅಂಕಣ

ಹೆಣ್ಣಿನ ಅಂದ ಹೆಚ್ಚಿಸುವ ವೈವಿಧ್ಯಮಯ ಕೇಶವಿನ್ಯಾಸ

Gayathri Gowda
Photo Credit : IANS

ಹೆಣ್ಣು ಸೌಂದರ್ಯ ಪ್ರೀಯೆ, ಆಕೆ ತನ್ನ ಸಹಜ ಸೌಂದರ್ಯವನ್ನು ಹೆಚ್ಚಿಸಲು ಹೊಸ ಹೊಸ ದಾರಿಯನ್ನು ಕಂಡುಕೊಳ್ಳುತ್ತಾಳೆ. ಅದರಲ್ಲೂ ಇಂದು ಯುವಸಮುದಾಯ ಸೆಲೆಬ್ರೆಟಿಗಳ ಲೈಫ್ ಸ್ಟೈಲ್ ಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಸೆಲೆಬ್ರಿಟಿಗಳು ಧರಿಸುವ ಉಂಗುರ, ವಾಚ್, ಡ್ರೆಸ್, ಆಭರಣ, ಚಪ್ಪಲಿ ಇವೆಲ್ಲವನ್ನೂ ಗಮನಿಸುತ್ತಾರೆ. ಇದರ ಜೊತೆಗೆ ಕೇಶ ವಿನ್ಯಾಸದ ಕಡೆಯೂ ಕಣ್ಣಾಹಿಸುತ್ತಾರೆ.

ಇಂದು ಹೆಣ್ಣು ಹೊಸ ಹೊಸ ಶೈಲಿಯಲ್ಲಿ ಕೇಶ ವಿನ್ಯಾಸ ಮಾಡಿಕೊಳ್ಳುತ್ತಾಳೆ. ಪೋನಿ, ಹೈ ಪೋನಿ, ಜಡೆ ಇವೆಲ್ಲವನ್ನು ಬಿಟ್ಟು ಹೊಸ ಹೊಸ ಹೇರ್ ಸ್ಟೈಲ್ ಗಳನ್ನು ತಾನೇ ಮಾಡಿಕೊಳ್ಳುತ್ತಿದ್ದಾಳೆ. ಈ ಪ್ರಯೋಗಕ್ಕೆ ಸಹಕಾರಿಯಾಗುತ್ತಿರುವುದು ಯೂಟ್ಯೂಬ್ ಚಾನೆಲ್‌ಗಳು. ಇಂದು ಹಲವಾರು ಕೇಶವಿನ್ಯಾಸಕ್ಕೆ ಸೀಮಿತವಾದಂತಹ ಯೂಟ್ಯೂಬ್ ಚಾನೆಲ್‌ಗಳಿವೆ. ಅದರಲ್ಲಿ ಹೆಣ್ಣು ಮಕ್ಕಳಿಗೆ ಮನೆಯಲ್ಲೇ ಹೇರ್ ಸೈಲ್ ಮಾಡಿಕೊಳ್ಳಲು ಸುಲಭ ವಿಧಾನದ ಮೂಲಕ ತಿಳಿಸಿಕೊಡುತ್ತದೆ.

ಕಾಲೇಜು ಹುಡುಗಿಯರು ಹೆಚ್ಚಾಗಿ ಹೈ ಪೋನಿಯನ್ನೇ ಹಾಕುತ್ತಾರೆ. ದಿನನಿತ್ಯ ಈ ಹೇರ್ ಸ್ಟೈಲ್ ಮಾಡುವುದರಿಂದ ಹೇರ್ ಫಾಲ್ ಸಮಸ್ಯೆ ಕಂಡುಬರಬಹುದು. ಕೂದಲನ್ನು ಹೀಗೆ ಕಟ್ಟುವಾಗ ಎಳೆದು ಕಟ್ಟಬೇಕಾಗುತ್ತದೆ ಹಾಗು ರಬ್ಬರ್ ಬ್ಯಾಂಡ್ ಬಳಸಬೇಕಾಗುತ್ತದೆ. ಇದರಿಂದ ಕೂದಲು ಉದುರಬಹುದು. ಮಾತ್ರವಲ್ಲದೇ ಕೆಲವರಿಗೆ ಹೈ ಪೋನಿ ಹಾಕುವುದರಿಂದ ತಲೆ ನೋವು ಆಗುವಂತಹ ಸಮಸ್ಯೆ ಕೂಡ ಆಗುತ್ತದೆ.

ಹೇರ್ ಸ್ಟೈಲ್ ಮಾಡುವಾಗ ಆದಷ್ಟು ಲೂಸ್ ಆಗಿ ಕೂದಲು ಕಟ್ಟಿದರೆ ಕೂದಲಿಗೆ ಆಗುವಂತಹ ಸಮಸ್ಯೆಯನ್ನು ತಡೆಯಬಹುದು. ನಿತ್ಯವೂ ಭಿನ್ನ ಭಿನ್ನ ಕೇಶವಿನ್ಯಾಸ ಮಾಡುವುದರಿಂದ ಕೂದಲಿಗೆ ಸಮಸ್ಯೆ ಆಗುವ ಸಾಧ್ಯತೆಯೂ ಇದೆ. ಇನ್ನು ದಿನಾಲೂ ಒಂದೇ ಹೇರ್ ಸ್ಟೈಲ್ ಮಾಡುದರಿಂದ ಕೂದಲು ಉದುರುವಂತಹ ಸಮಸ್ಯೆಯೂ ಆಗಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು