Categories: ಅಂಕಣ

ಪರಿಸರದೊಂದಿಗೆ ಮನುಷ್ಯನ ಸಹನಡಿಗೆಯ ಕಥನವೇ ಬೆಟ್ಟದ ಜೀವ

“ಬೆಟ್ಟದ ಜೀವ” ಶಿವರಾಮ ಕಾರಂತರ ಮೇರುಕೃತಿಗಳಲ್ಲೊಂದು. ಬೆಟ್ಟದ ಪರಿಸರದಲ್ಲಿ ತೋಟ ಮಾಡಿಕೊಂಡು ಬದುಕುವ ಗೋಪಾಲಯ್ಯ ಮತ್ತು ಶಂಕರಿ ಎನ್ನುವ, ಇಳಿವಯಸ್ಸಿನಲ್ಲೂ ಜೀವನೋತ್ಸಾಹ ಕಳೆದುಕೊಳ್ಳದ ಅಪರ್ವಲ ದಂಪತಿಯ ಜೀವನಗಾಥೆಯಿದು. ಪರಿಸರದೊಂದಿಗೆ ಮನುಷ್ಯ ಪ್ರಕೃತಿಯ ಸಹನಡಿಗೆಯ ಕಥನವಿದು. ಇಂಥ ಅದ್ಭುತ ಕಾದಂಬರಿಯನ್ನು ಅದರ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ದೃಶ್ಯರೂಪಕ್ಕೆ ರೂಪಾಂತರಿಸುವಲ್ಲಿ ನರ್ದೇ ಶಕ ಪಿ.ಶೇಷಾದ್ರಿ ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಓಡುನಡಿಗೆಯ ಬದುಕಿನಲ್ಲಿ ನಮಗರಿವಿಲ್ಲದೆಯೇ ನಾವು ಕಳೆದುಕೊಂಡಿರಬಹುದಾದ ಸುಖಗಳನ್ನು `ಬೆಟ್ಟದ ಜೀವ~ ನೆನಪಿಸುತ್ತದೆ. ಶಿವರಾಮಯ್ಯ ನದಿಯಲ್ಲಿ ಮೀಯುವಾಗ, ಗೋಪಾಲಯ್ಯನಿಂದ ಅಭ್ಯಂಜನ ಮಾಡಿಸಿಕೊಳ್ಳುವಾಗ, ಬೆಟ್ಟ ಬಯಲಿನ ಅಗಾಧತೆಗೆ ಕಣ್ಣರಳಿಸುವಾಗ- ಆ ಎಲ್ಲ ಅನುಭವಗಳು ಪ್ರೇಕ್ಷಕನದೂ ಆಗುತ್ತವೆ. ಕಾಡಿನಲ್ಲಿ ವಿಹರಿಸಿ ಬಂದ ಅನುಭವವಾಗುತ್ತದೆ. ಈ ಹಿತಾನುಭವದ ನಡುವೆ ಮಂದ್ರಸ್ವರದಂತೆ ಕೇಳಿಸುತ್ತದೆ- ಮಗನ ಅಗಲಿಕೆಯನ್ನು ಹತ್ತಿಕ್ಕಿಕೊಂಡು ಬದುಕುವ ದಂಪತಿಯ ತಳಮಳ. `ಸುಖ ಇದೆ ಅಂದ್ರೆ ಇದೆ, ಇಲ್ಲ ಅಂದ್ರೆ ಇಲ್ಲ~ ಎನ್ನುವ ಗೋಪಾಲಯ್ಯನ ದೃಷ್ಟಿಕೋನ ಬದುಕಿನ ವಿಮಾರ್ಶೆಯಂತೆ ತೋರುತ್ತದೆ.

ಕಾದಂಬರಿಯಲ್ಲಿನ ಗೋಪಾಲಯ್ಯ ದೈಹಿಕವಾಗಿ ಚಟುವಟಿಕೆಯಿಂದಿರುವ ವ್ಯಕ್ತಿ. ಆದರೆ, ಚಿತ್ರದಲ್ಲಿನ ಗೋಪಾಲಯ್ಯ ದಣಿದಿದ್ದಾನೆ. ಈ ಪಾತ್ರದಲ್ಲಿ ನಟಿಸಿರುವ ದತ್ತಾತ್ರೇಯನವರಿಗೆ ವಯಸ್ಸಾಗಿರುವುದು ಈ ದಣಿವಿಗೆ ಕಾರಣ. ಆದರೆ, ಅವರ ಪ್ರತಿಭೆಯ ಪ್ರಖರತೆಯಲ್ಲಿ ದಣಿವಿನ ಕೊರತೆ ಮುಚ್ಚಿಹೋಗುತ್ತದೆ.ಈ ಮಾತು ಶಿವರಾಮಯ್ಯನ ಪಾತ್ರಧಾರಿ ಸುಚೇಂದ್ರಪ್ರಸಾದ್ ಅವರಿಗೆ ಅನ್ವಯಿಸುವುದಿಲ್ಲ. ಅವರ ಪಾತ್ರ ನರ್ವೊಹಣೆಯಲ್ಲಿ ನಾಟಕೀಯತೆ ಒಡೆದುಕಾಣುತ್ತದೆ. ಶಂಕರಿ ಪಾತ್ರದಲ್ಲಿನ ರಾಮೇಶ್ವರಿ ರ್ಮೆ `ಬೆಟ್ಟದ ಜೀವ~ವೇ ಆಗಿಹೋಗಿದ್ದಾರೆ.

ಸಿನಿಮಾದಲ್ಲಿನ ನಾಯಕ ಸ್ವಾತಂತ್ರ್ಯ್ ಹೋರಾಟಗಾರ. ಪೊಲೀಸರಿಂದ ತಪ್ಪಿಸಿಕೊಂಡು ಕಾಡಿನ ದಾರಿಯಲ್ಲಿ ದಿಕ್ಕುತಪ್ಪಿ ಗೋಪಾಲಯ್ಯನವರ ಮನೆ ಸೇರುತ್ತಾನೆ. ಚಳವಳಿಯ ಈ ಹಿನ್ನೆಲೆ ಕಾದಂಬರಿಯಲ್ಲಿಲ್ಲ. ಸಿನಿಮಾದ ಕೊನೆಯಲ್ಲಿನ ರೆಸರ್ಟ್ ಸಂಸ್ಕೃತಿಯ ಚಿತ್ರಣವೂ ಕಾದಂಬರಿಗೆ ಹೊರತಾದುದು.

ಈ ಬದಲಾವಣೆಗಳಿಂದ ಸಿನಿಮಾಕ್ಕೆ ಉಪಯೋಗವೇನೂ ಆಗಿಲ್ಲ. ಬದಲಾಗಿ, ಈ ವಿವರಗಳು ಕಾದಂಬರಿಯ ಧ್ವನಿಶಕ್ತಿಯನ್ನು ಸರಳಗೊಳಿಸಿದಂತೆ ಕಾಣಿಸುತ್ತದೆ. ಇನ್ನೂ ಬಿಗಿಗೊಳಿಸಬಹುದಾಗಿದ್ದ ಒಳ್ಳೆಯ ಕವಿತೆಯಂತೆ ಬೆಟ್ಟದ ಜೀವ ಗಮನಸೆಳೆಯುತ್ತದೆ. ‘ಕಾಡ ನೋಡ ಹೋಗಿ ಕವಿತೆಯೊಡನೆ ಬಂದೆ’ ಎನ್ನುವ ಹಿತಾನುಭವ ಉಂಟುಮಾಡುವ ಶಕ್ತಿ ಈ ದೃಶ್ಯಕಾವ್ಯದ್ದು.

Sneha Gowda

Recent Posts

ಚಾಮರಾಜನಗರದಲ್ಲಿ ಉಡ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳನ್ನು ಜೀವಂತವಾಗಿ ಸೆರೆ ಹಿಡಿದು ಸಾಗಾಟ ಮಾಡುವ ಜಾಲ ಕಾರ್ಯಾಚರಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಪ್ರಾಣಿಗಳನ್ನು ಬೇಟೆಯಾಡಿ ಮಾಂಸ…

3 mins ago

ಮೈಸೂರಿನಲ್ಲಿ ಪರಶುರಾಮ ಜಯಂತಿ ಕಾರ್ಯಕ್ರಮ

ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪರಶುರಾಮ‌ ಜಯಂತಿ ಅಂಗವಾಗಿ ಚಾಮರಾಜಪುರಂನಲ್ಲಿರುವ ಬ್ರಾಹ್ಮಣ ಯುವ ವೇದಿಕೆ ಕಛೇರಿಯಲ್ಲಿ ಪರಶುರಾಮ ಜಯಂತಿಯನ್ನು…

12 mins ago

ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು

ವಿದ್ಯಾಕಾಶಿ ಧಾರವಾಡದಲ್ಲಿ ಕೆಎಲ್‌ಇ ಸಂಸ್ಥೆಯ ಬಿಬಿಎ ಕಾಲೇಜಿನ ವಿದ್ಯಾರ್ಥಿಗಳು ಪಕ್ಷಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

23 mins ago

ನರೇಂದ್ರ ದಾಭೋಲ್ಕರ್​ ಹತ್ಯೆ ಕೇಸ್: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು…

42 mins ago

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ನಗರದಲ್ಲಿ ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ…

52 mins ago

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

1 hour ago