ಕೊರೊನಾ ಹೆಚ್ಚಾದರೆ ಸರ್ಕಾರಕ್ಕೆ ಲಾಕ್ಡೌನ್ ಅನಿವಾರ್ಯ; ಆರಗ ಜ್ಞಾನೇಂದ್ರ

ಚಿಕ್ಕಮಗಳೂರು : ಕೊರೊನಾ ಹೆಚ್ಚಾದರೆ ಸರ್ಕಾರಕ್ಕೆ ಲಾಕ್ಡೌನ್ ಅನಿವಾರ್ಯ. ಜನರು ಸಹಕಾರ ಕೊಡದಿದ್ದರೆ ಲಾಕ್ಡೌನ್ ಅನಿವಾರ್ಯ ಎಂದು ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಜನರ ಜೀವ ಉಳಿಸುವುದು ಸರ್ಕಾರದ ಬದ್ಧತೆಯಾಗಿದೆ. ಜನರು ಕೊವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಪಾದಯಾತ್ರೆಗೆ ಅನುಮತಿ ಕೊಡುವುದು ಬಿಡುವುದು ಬೇರೆ ವಿಷಯ ಆದ್ರೆ ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿರುವ ಪಾದಯಾತ್ರೆಗೆ ಬೇಸರವಿದೆ. ಕೊವಿಡ್ ಸಮಯದಲ್ಲಿ ರಾಜಕಾರಣದ ನಡೆ ಸರಿಯಲ್ಲ. ವಿರೋಧ ಪಕ್ಷವಾಗಿ ಹೋರಾಟ ಮಾಡಲು ಅವಕಾಶವಿದೆ. ಆದ್ರೆ, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ಸಿಗರು ಏನೂ ಮಾಡಲಿಲ್ಲ. ಸಿಎಂ ಬದಲಾವಣೆ, ಸಚಿವರ ಕೈಬಿಡುವುದು ಗಾಳಿಸುದ್ದಿ. ಬೊಮ್ಮಾಯಿ ಸರ್ಕಾರದಲ್ಲಿ ಯಾವ ಸಚಿವರನ್ನೂ ಕೈಬಿಡಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಇನ್ನು ಮತ್ತೊಂದೆಡೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ವಿಚಾರಕ್ಕೆ ಸಂಬಂಧಿಸಿ ಜೀವ ಉಳಿಸಿಕೊಳ್ಳಲು ಮುಂಜಾಗ್ರತಾ ಕ್ರಮ ಅನಿವಾರ್ಯ ಎಂದು ಕೊಪ್ಪಳ ನಗರದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಮಿಕ್ರಾನ್ ಪತ್ತೆ ಆಗಿರುವ ಶಂಕೆ ಇದೆ. ಓರ್ವ ಕಾರ್ಮಿಕನಲ್ಲಿ ಒಮಿಕ್ರಾನ್ ಸೋಂಕಿರುವ ಶಂಕೆ ಇದೆ. ಆತನ ಸ್ಯಾಂಪಲ್ಸ್ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.

ಕೊರೊನಾ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಜೀವ ಉಳಿಸಿಕೊಳ್ಳಲು ಮುಂಜಾಗ್ರತಾ ಕ್ರಮ ಅನಿವಾರ್ಯ. ಮುಂದೆ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಲು ಕಠಿಣ ಕ್ರಮ ಅನಿವಾರ್ಯ ಎಂದಿದ್ದಾರೆ.

Gayathri SG

Recent Posts

ಡಿ.ಕೆ ಶಿವಕುಮಾರ್ ಅವರದ್ದೇ ಒಂದು ಪೆನ್ ಡ್ರೈವ್ ಇದೆ : ಯತ್ನಾಳ್ ಸ್ಪೋಟಕ ಹೇಳಿಕೆ

ಬೀದರ್‌ನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಹೇಳಿಕೆ ನೀಡಿದ್ದುಪೆನ್ ಡ್ರೈವ್ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ,ಡಿ.ಕೆ ಶಿವಕುಮಾರ್ ಅವರದ್ದೇ…

48 mins ago

ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿ

ಆಗಿರುವ ಮತ್ತು ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿರಿಸಿ ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಶಾಸಕ ಯಶವಂತರಾಯಗೌಡ…

1 hour ago

ಸಿದ್ದಲಿಂಗ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಸಾವು : ಓರ್ವ ಗಂಭೀರ

ಸಿದ್ದಲಿಂಗ ಮುತ್ಯಾನ ಜಾತ್ರೆಯಲ್ಲಿ ದುರಂತ ಸಂಭವಿಸಿದ್ದು, ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಘಟನೆ ಇಂಡಿ ತಾಲೂಕಿನ…

2 hours ago

ಪ್ರಹ್ಲಾದ ಜೋಶಿ ನಿವಾಸಕ್ಕೆ ಇಂದು ಸಚಿವ ಅರ್ಜುನರಾಮ್ ಮೇಘವಾಲ್ ಭೇಟಿ

ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವ ಅರ್ಜುನರಾಮ್ ಮೇಘವಾಲ್ ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ…

2 hours ago

ಮದುವೆ ದಿಬ್ಬಣದಲ್ಲಿ ಭೀಕರ ಅಪಘಾತ : ಲಾರಿ ಪಲ್ಟಿಯಾಗಿ ಇಬ್ಬರು ಮಹಿಳೆಯರು ಬಲಿ

ಮದುವೆ ದಿಬ್ಬಣದ ಲಾರಿ ಪಲ್ಟಿಯಾಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿರೋ ಘಟನೆ ಕುರುಗೋಡು ತಾಲೂಕಿನ ಏಳುಬೆಂಚಿ ಗ್ರಾಮದ ಬಳಿ ನಡೆದಿದೆ. ಭಾಗ್ಯಮ್ಮ…

2 hours ago

ಶತಕ ಸಿಡಿಸಿದ ವಿಲ್​ ಜಾಕ್ಸ್​ : ಆರ್​ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಗೆಲುವು

ವಿಲ್​ ಜ್ಯಾಕ್ಸ್ ​ಅವರ ಶತಕ ಬಾರಿಸಿದ್ದು ಅವರ ಭರ್ಜರಿ ಬ್ಯಾಟಿಂಗ್‌ಗೆ ಫ್ಯಾನ್ಸ್‌ ಫಿದ ಆಗಿದ್ದಾರೆ. ಇನ್ನು ವಿರಾಟ್​ ಕೊಹ್ಲಿಯ(70*) ಅರ್ಧಶತಕದ…

3 hours ago