News Karnataka Kannada
Monday, May 06 2024
ವಿಶೇಷ

ಅಮೃತ್‌ಮಹಲ್‌ ಕಾವಲ್‌ ಅಭಿವೃದ್ಧಿಗೆ ಅಮೃತಘಳಿಗೆ ಕೂಡಿಬರುವುದೆಂದು

A flurry of concrete works in the historic grassland
Photo Credit : News Kannada

ಚಿಕ್ಕಮಗಳೂರು: ಬಾಸೂರು ಐತಿಹಾಸಿಕ ಹುಲ್ಲುಗಾವಲು. ಅದನ್ನು ರಕ್ಷಿಸಬೇಕಾದ ಇಲಾಖೆಗಳ ಉಪೇಕ್ಷೆಯಿಂದಲೇ ಈ ಹುಲ್ಲುಗಾವಲಿನಲ್ಲಿ ಅತೀ ಹೆಚ್ಚಾಗಿ ಅವಶ್ಯಕತೆ ಇಲ್ಲದಿದ್ದರೂ ಕೆರೆ ಹಾಗೂ ರಸ್ತೆಗಳ ಸಿವಿಲ್ ಕಾಮಗಾರಿಗಳು ಹೆಚ್ಚಾಗುತ್ತಿದೆ.

ಅಮೃತ್ ಮಹಲ್‌ಕಾವಲ್ ಇಂದು ನಿನ್ನೆಯ ವಿಶೇಷ ಹುಲ್ಲುಗಾವಲಲ್ಲ. ಅದಕ್ಕೆ ೪೦೦ ವರ್ಷದ ಇತಿಹಾಸವಿದೆ. ವಿಜಯನಗರದ ಅರಸರಿಂದ ಹಿಡಿದು ಮೈಸೂರು ಅರಸರವರೆಗೆ ಕನ್ನಡನಾಡಿನ ವಿಶೇಷ ಗೋವಿನ ತಳಿಯಾದ ಅಮೃತ್‌ಮಹಲ್ ಹಾಗೂ ವನ್ಯಪ್ರಾಣಿಗಳ ಆಹಾರತಾಣವಾಗಿದ್ದ ಈ ಹುಲ್ಲುಗಾವಲು ಸಂರಕ್ಷಣಾ ಪ್ರದೇಶವಾಗಿದೆ. ಈಗಲೂ ಸಹ ಆ ತಳಿಗಳ ಮತ್ತು ಹಲವು ವಿಶೇಷ ರೀತಿಯ ವನ್ಯಮೃಗಗಳ ಆವಾಸಸ್ಥಾನವೂ ಆಗಿರುವುದು ವಿಶೇಷ.

ಅಮೃತ್‌ಮಹಲ್ ತಳಿಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿ ಪಡಿಸಲು ಈ ಹುಲ್ಲುಗಾವಲನ್ನು ಯಾವುದೇ ರೀತಿಯ ಅನ್ಯ ಚಟುವಟಿಕೆಗಳಿಗೆ ಬಳಸದೆ ಸಂರಕ್ಷಿಸಬೇಕು. ಈ ಜಿಲ್ಲೆಯಲ್ಲಿ ಕಾವಲ್ ಸ್ವರೂಪದಲ್ಲಿ ಉಳಿದಿರುವ ಬಾಸೂರು ಕಾವಲ್ ೧೮೨೦ ಎಕರೆ ವಿಸ್ತೀರ್ಣವಿದ್ದು, ಈ ಕಾವಲ್‌ನಲ್ಲಿ ಅಮೃತ್‌ಮಹಲ್ ತಳಿಗಳ ಜೊತೆಗೆ ಕೃಷ್ಣಮೃಗ, ತೋಳ ಮತ್ತು ನರಿ ಹಾಗೂ ಅತ್ಯಂತ ಅಪರೂಪದ ಪಕ್ಷಿ ಪ್ರಭೇದಗಳನ್ನು ಕಾಣಬಹುದು.

ಈ ಹುಲ್ಲುಗಾವಲು ಬಯಲು ಸೀಮೆಯ ಮಳೆನೀರು ಹೀರುವ ಸೋಸುಕಗಳೂ ಆಗಿದ್ದು, ಇದನ್ನು ಯಾವುದೇ ರೀತಿ ಅನ್ಯಉದ್ದೇಶಕ್ಕೆ ಬಳಸದಂತೆ ನ್ಯಾಯಾಲಯದ ಆದೇಶವೂಇದೆ. ಹಿಂದೆ ಈ ಹುಲ್ಲುಗಾವಲನ್ನು ಹಲವರು ಒತ್ತುವರಿ ಮಾಡಿದ್ದು, ನ್ಯಾಯಾಲಯದ ಆದೇಶದ ಅನ್ವಯ ತೆರವುಗೊಳಿಸಲಾಗಿತ್ತು. ಸರ್ಕಾರ ಸಹ ಈ ಹುಲ್ಲುಗಾವಲಿನ ಪ್ರಾಮುಖ್ಯತೆಯ ನ್ನರಿತು‘ಸಮುದಾಯ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆ.

ಕಾಂಕ್ರೀಟ್‌ ಕೆರೆಗಳಿಂದ ಜಲಮೂಲ ಬರಿದು: ವಿಪರ್ಯಾಸವೆಂದರೆ ಇತ್ತೀಚೆಗೆ ನ್ಯಾಯಾಲಯ ಹಾಗೂ ಸರ್ಕಾರದ ಸೂಚನೆಗಳನ್ನು ಲೆಕ್ಕಿಸದೆ ಇದನ್ನು ಸಂರಕ್ಷಿಸಬೇಕಾದ ಪಶು ಸಂಗೋಪನಾ ಇಲಾಖೆ ಮತ್ತುಅರಣ್ಯ ಇಲಾಖೆ ಸಿಬ್ಬಂದಿಗಳು ಈ ಹುಲ್ಲುಗಾವಲಲಿ ಅವಶ್ಯಕತೆಗಿಂತ ಹೆಚ್ಚಾಗಿ ಮತ್ತೆರಡು ಕೆರೆಗಳನ್ನು ಕಾಂಕ್ರೀಟ್ ಬಳಸಿ ನಿರ್ಮಾಣ ಮಾಡಿ ಕಾವಲ್‌ನಲ್ಲಿದ್ದ ೧೬ ಕೆರೆಗಳ ಸಂಖ್ಯೆ ಈಗ ೧೮ಕ್ಕೇರಿದೆ. ಈ ರೀತಿ ನಿರ್ಮಾಣ ಕಾರ್ಯಗಳು ಹುಲ್ಲುಗಾವಲಿನ ಮೂಲ ಸ್ವರೂಪವನ್ನೇ ಹಾಳುಗೆಡವುತ್ತಿದ್ದು, ಇದುಒಣಭೂಮಿಯಲ್ಲಿರುವ ಮರಳು ಮಣ್ಣಿನಿಂದಕೂಡಿದ ಹುಲ್ಲು ಹುಲುಸಾಗಿ ಬೆಳೆಯುವ ಪ್ರದೇಶದಚಿತ್ರಣವನ್ನೇ ಬದಲಾಯಿಸುತ್ತಿದೆ.

ಕಟ್ಟಡ ಕಾಮಗಾರಿಗಳಿಂದ  ಪಕ್ಷಿಗಳ ಸಂತಾನಭಿವೃದ್ಧಿಗೆ ಕುತ್ತು:  ಈ ಹುಲ್ಲುಗಾವಲಿನಲ್ಲಿ ಯಾವುದೇ ರೀತಿ ಕೃಷಿ ಚಟುವಟಿಕೆ ಹಾಗೂ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳಬಾರದೆಂಬ ನ್ಯಾಯಾಲಯದ ಆದೇಶವಿದ್ದರೂ ಈ ವರ್ಷವೂ ಸಹ ಅಲ್ಲಿ ಬಯಲು ಸೀಮೆ ಬೆಳೆಯಾದ ಕಡಲೆ ಬೆಳೆಯಲು ಅವಕಾಶ ಕಲ್ಪಿಸಿ ನ್ಯಾಯಾಲಯದ ಆದೇಶವನ್ನು ಕಡೆಗಣಿಸಲಾಗಿದೆ. ಈ ಪ್ರದೇಶವನ್ನು ಸಂರಕ್ಷಿಸಲುಎರಡೂ ಇಲಾಖೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಅವಶ್ಯಕತೆ ಇಲ್ಲದರಸ್ತೆ ನಿರ್ಮಾಣಕ್ಕೂ ಯಂತ್ರಗಳನ್ನು ಬಳಸಿ ಹುಲ್ಲು ಬೆಳೆಯಲು ಅವಶ್ಯಕವಾದ ಮೇಲ್ಮಣ್ಣು ನಾಶವಾಗಿದೆಯಲ್ಲದೆ ಹುಲ್ಲಿನಲ್ಲೇ ಮೊಟ್ಟೆಇಟ್ಟು ಸಂತಾನ ಬೆಳೆಸುವ ಹಕ್ಕಿಗಳ ಆವಾಸ ಸ್ಥಾನಕ್ಕೂ ಧಕ್ಕೆಯುಂಟಾಗಿದೆ.
ಇದರ ಜೊತೆಗೆ ಹುಲ್ಲುಗಾವಲಿನ ರಕ್ಷಣೆಗಾಗಿ ಅಗತ್ಯವಿರುವ ಬೇಟೆ ನಿಗ್ರಹ ದಳ ಮತ್ತು ಮಚ್ಚಾನ್‌ಗಳ ನಿರ್ಮಾಣವನ್ನು ಹುಲ್ಲುಗಾವಲಿನ ಅಂಚಿನಲ್ಲಿ ಮಾಡದೆ ಮಧ್ಯದಲ್ಲೇ ಕಟ್ಟಡಗಳನ್ನು ನಿರ್ಮಾಣ ಮಾಡಿರುವುದು ವಿವೇಚಿಸದೆ ಹಾಗೂ ಈ ಸೂಕ್ಷ್ಮ ಪ್ರದೇಶದ ಬಗ್ಗೆ ಕಾಳಜಿ ಇಲ್ಲದಿರುವುದಕ್ಕೆ ಸಾಕ್ಷಿಯಾಗಿದೆ.

ತಕ್ಷಣ ಈ ಎರಡೂಇಲಾಖೆಗಳ ಮುಖ್ಯಸ್ಥರು ಬಾಸೂರು ಕಾವಲಿನ ಮೂಲ ಸ್ಥಿತಿಗೆ ಧಕ್ಕೆತರುವ ಈ ಎಲ್ಲಾ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸಬೇಕು ಮತ್ತು ಅದನ್ನು ಕೃಷಿ ಭೂಮಿಯಾಗಿ ಪರಿವರ್ತಿಸಲು ಮುಂದಾಗಿರುವ ಕ್ರಮವನ್ನು ಶಾಶ್ವತವಾಗಿ ನಿಲ್ಲಿಸಬೇಕೆಂದು ಒತ್ತಾಯಿಸುತ್ತೇವೆ. ಈ ಹುಲ್ಲುಗಾವಲನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡದಿದ್ದಲ್ಲಿ ಇದರೊಳಗಿರುವ ಕೃಷ್ಣಮೃಗ ಸೇರಿದಂತೆ ಕೆಲವು ಪ್ರಾಣಿಗಳು ಮುಂದಿನ ದಿನಗಳಲ್ಲಿ ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗುವ ಅಪಾಯವೂ ಇದೆ. ಎಂದು ಭದ್ರಾ ವೈಲ್ಡ್‌ಲೈಫ್‌ಕನ್ಸರ್ವೇಶನ್ ಟ್ರಸ್ಟ್‌ನ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯಸ.ಗಿರಿಜಾಶಂಕರ್, ವೈಲ್ಡ್‌ಕ್ಯಾಟ್-ಸಿನ ಶ್ರೀದೇವ್ ಆರೋಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು