News Karnataka Kannada
Friday, May 17 2024
ಸಮುದಾಯ

ಭಾರತ ದೇಶದ ಅಂತಃಸತ್ವ ಆಧ್ಯಾತ್ಮಿಕತೆ-ಒಡಿಯೂರು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ

The Essence Of India Is Spirituality - Odiyur Parampujya Sri Gurudevananda Swamimi
Photo Credit : News Kannada

ಕುಂದಾಪುರ: ಭಾರತ ದೇಶದ ಅಂತಃಸತ್ವವು ಆಧ್ಯಾತ್ಮಿಕತೆ ಆಗಿದೆ ಮಹಿಳೆಯರ ಸೆರಗಿನಡಿಯಲ್ಲಿ ಭಾರತೀಯ ಸಂಸ್ಕೃತಿ ಅಡಗಿಕೊಂಡಿದೆ. ಎಲ್ಲವನ್ನು ಮತ್ತೆ ಮತ್ತೆ ಗಳಿಸಬಹುದು ಆದರೆ ಶರೀರವು ಒಮ್ಮೆ ನಶಿಸಿದರೆ ಮತ್ತೆ ಪಡೆಯಲು ಸಾಧ್ಯವಿಲ್ಲ. ಬದುಕಿನಲ್ಲಿ ಬರುವ ಪರೀಕ್ಷೆಯನ್ನು ಬರೆಯಲು ಧಾರ್ಮಿಕ ಚಿಂತನೆಗಳು ಅಗತ್ಯವಿದೆ ಎಂದು ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಹಿಂದೂ ಜಾಗರ ವೇದಿಕೆ ಗಂಗೊಳ್ಳಿ ವತಿಯಿಂದ ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ 505 ಕಲಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಯುಕ್ತ ಆಯೋಜಿಸಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.

ಭವ್ಯ ಭಾರತದ ನಿರ್ಮಾಣಕ್ಕೆ ಯುವಕರ ಕೊಡುಗೆ ಅಪರಾವಾದದು ಗೋ ಸಂರಕ್ಷಣೆ ಜತೆ,ಯುವಕರು ಗಾಂಜಾ ಸೇರಿದಂತೆ ಮಾದಕ ವಸ್ತುಗಳಂತಹ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು. ಸಮಾಜದ ಜನರ ಸೇವೆಯನ್ನು ಮಾಡುವ ದೃಷ್ಟಿಯಿಂದ ತಮ್ಮ ದುಡಿಮೆಯ ಹಣದಲ್ಲಿ ಮೀನುಗಾರರು ತುರ್ತು ವಾಹನವನ್ನು ನೀಡಿರುವುದು ಶ್ಲಾಘನೀಯ ಕಾರ್ಯ ಎಂದರು.

ಕನಕ ಗ್ರೂಪ್ ಜಗದೀಶ ಶೆಟ್ಟಿ ಕುದ್ರುಕೋಡು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಖ್ಯಾತ ವಾಗ್ಮಿ ಉಪನ್ಯಾಸಕರಾದ ಕು.ಅಕ್ಷಯಾ ಗೋಖಲೆ ದಿಕ್ಸೂಚಿ ಭಾಷಣ ನೆರವೇರಿಸಿದರು.

ಹಸಿ ಮೀನು ವ್ಯಾಪಾರಸ್ಥರ ಸಂಘ ಗಂಗೊಳ್ಳಿ ಜನಾರ್ಧನ ಖಾರ್ವಿ, ಶ್ರೀ ದೇವಿ ಆಂಬ್ಯುಲೆನ್ಸ್ ವಾಸುದೇವ ಹಂದೆ, ಇಂದುಧರ ದೇವಳದ ಅರ್ಚಕರಾದ ಶಿವಾನಂದ, ಮಹಿಳಾ ಮಂಡಳಿ ಅಧ್ಯಕ್ಷೆ ಕಮಲ ಖಾರ್ವಿ, ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಪ್ರಕಾಶ್ ಕುಕ್ಕೆಹಳ್ಳಿ, ವಕೀಲರಾದ ರವಿಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ನಿವೃತ್ತ ಪಶು ವೈದ್ಯ ರಾಘವೇಂದ್ರ ಶೆಟ್ಟಿ ಮತ್ತು ಮುಳುಗು ತಜ್ಞ ದಿನೇಶ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್ ಸ್ವಾಗತಿಸಿದರು. ಸಂಚಾಲಕ ಯಶವಂತ್ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಂದರ ಜಿ ನಿರೂಪಿಸಿ, ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು