News Karnataka Kannada
Tuesday, April 30 2024
ಕ್ಯಾಂಪಸ್

ಏಪ್ರಿಲ್ 26 ರಿಂದ ‘ಇನ್ಕ್ರಿಡಿಯಾ-2023’ ಅಂತರ್ ಕಾಲೇಜು ಟೆಕ್ನೋ-ಕಲ್ಚರಲ್ ಫೆಸ್ಟ್

JD(S) to hold ward-level pre-poll meeting at Mallikatte
Photo Credit : News Kannada

ನಿಟ್ಟೆ: ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತನ್ನ ಕಾಲೇಜು ದಿನದ ಅಂಗವಾಗಿ ಏಪ್ರಿಲ್ 26 ರಿಂದ 29 ರವರೆಗೆ ರಾಷ್ಟ್ರಮಟ್ಟದ ನಾಲ್ಕು ದಿನಗಳ ಅಂತರ ಕಾಲೇಜು ಟೆಕ್ನೋ-ಕಲ್ಚರಲ್ ಫೆಸ್ಟ್ ‘ಇಂಕ್ರಿಡಿಯಾ 23’ ಅನ್ನು ಕ್ಯಾಂಪಸ್ನಲ್ಲಿ ಆಯೋಜಿಸಲಿದೆ.

ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಾಷ್ಟ್ರಮಟ್ಟದ ಟೆಕ್ನೋ-ಕಲ್ಚರಲ್ ಫೆಸ್ಟ್ ‘ಇನ್ಕ್ರಿಡಿಯಾ’. ಇದು ನಮ್ಮ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಮತ್ತು ಸಾಂಸ್ಕೃತಿಕ ಪ್ರತಿಭೆ ಪೋಷಿಸುವ ಗುರಿಹೊಂದಿದೆ.  ಇದು ತಾಂತ್ರಿಕದರ್ಶನ ಮತ್ತು ಆನಂದೋತ್ಸವ ಎಂಬ ಎರಡು ವಿಭಿನ್ನ ಆಚರಣೆಗಳ ಕಾರ್ಯಕ್ರಮವನ್ನು ಹೊಂದಿದೆ. ಈಗ, ಕಳೆದ ಐದು ವರ್ಷಗಳಿಂದ ನವೀನ ಉತ್ಸವ ಮಾದರಿಯೊಂದಿಗೆ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಈ  ಉತ್ಸವಗಳು ದೇಶಾದ್ಯಂತದ ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಈ ವರ್ಷ ಸಂಸ್ಥೆಯು ಕ್ಯಾಂಪಸ್ನಲ್ಲಿ 25000 ಭಾಗವಹಿಸುವ ನಿರೀಕ್ಷೆ ಇದೆ. 60 ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.

ಈ ಉತ್ಸವವು ಸಂಸ್ಥೆಯ ವಾರ್ಷಿಕ ಕಾರ್ಯಕ್ರಮವಾಗಿದ್ದು,  ಕಂಪ್ಯೂಟರ್ ಕೋಡ್ಗಳನ್ನು ಟೈಪ್ ಮಾಡುವುದು, ಸರ್ಕ್ಯೂಟ್‌  ಸಂಬಂಧಿ ಕಾರ್ಯಕ್ರಮ,  ಇತರ ಎಲ್ಲಾ ವಿಭಾಗಗಳ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಲು ಸೂಕ್ತ ಅವಕಾಶ ಒದಗಿಸುತ್ತದೆ . ವಸ್ತುಪ್ರದರ್ಶನಗಳು, ಆಹಾರ ಮಳಿಗೆಗಳು, ಪ್ರೊ-ನೈಟ್ಸ್, ಆಟಗಳು ಇತ್ಯಾದಿಗಳು ಈ ಉತ್ಸವದಲ್ಲಿ ನೋಡಬೇಕಾದ ಇತರ ಆಕರ್ಷಣೆಗಳಾಗಿವೆ.

ಎ.26ರಂದು ಬೆಳಗ್ಗೆ 9.30ಕ್ಕೆ ನಿಟ್ಟೆ ಕ್ಯಾಂಪಸ್ ನ ಸದಾನಂದ ಓಪನ್ ಏರ್ ಆಡಿಟೋರಿಯಂನಲ್ಲಿ ಕಾಲೇಜು ದಿನಾಚರಣೆ ಕಾರ್ಯಕ್ರಮವನ್ನು ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ.ಎ.ವಿ.ರಮಣ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ  ಎನ್.ವಿನಯ ಹೆಗ್ಡೆ ವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಾಂತ್ರಿಕ ಕಾಲೇಜುಗಳ ಆಸಕ್ತ ವಿದ್ಯಾರ್ಥಿಗಳು ಇನ್ ಕ್ರಿಡಿಯಾ ಇನ್ಸ್ಟಾಗ್ರಾಮ್ ಪುಟ ಅಥವಾ ವೆಬ್ಸೈಟ್ http://www.incridea.in/ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಲುಂಕರ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು