News Karnataka Kannada
Friday, May 03 2024
ಸಮುದಾಯ

ಮಂಗಳೂರು: ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಈ ಬಾರಿಯೂ ಕುಕ್ಕೆ ನಂ.1

Kukke is no.1 in the list of richest temples this time too.
Photo Credit : IANS

ಮಂಗಳೂರು: ರಾಜ್ಯದ ಶ್ರೀಮಂತ ದೇವಸ್ಥಾನ ಎಂಬ ಖ್ಯಾತಿಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಉಳಿಸಿಕೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಈ ಬಾರಿಯೂ 123 ಕೋಟಿ ರೂ. ಆದಾಯ ಗಳಿಸುವ ಮೂಲಕ ರಾಜ್ಯದಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ.

2022ರ ಏಪ್ರಿಲ್‌ನಿಂದ 2023ರ ಮಾ.31ರವರೆಗಿನ ಆರ್ಥಿಕ ವರ್ಷದಲ್ಲಿ 123,64,49,480 ರೂ. ಆದಾಯ ಗಳಿಸಿದೆ. ದೇವಾಲಯಕ್ಕೆ ಹರಕೆ ಸೇವೆ, ಕಾಣಿಕೆ ಮಾತ್ರವಲ್ಲದೇ ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಕೃಷಿ ತೋಟದಿಂದಲೂ ಆದಾಯ ಬರುತ್ತದೆ.

ಕೊರೊನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಭಂಧವಿದ್ದ ಕಾರಣ 2021-22ನೇ ಸಾಲಿನಲ್ಲಿ ಕೇವಲ 72,73,23,758 ರೂ. ಆದಾಯ ಪಡೆದಿತ್ತು. ಕುಕ್ಕೆ 2007ರಿಂದೀಚೆಗೆ ಹೆಚ್ಚಿನ ಆದಾಯ ಪಡೆಯುವ ಮೂಲಕ ರಾಜ್ಯದ ಶ್ರೀಮಂತ ದೇವಳವಾಗಿ ಗುರುತಿಸಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು